ಟ್ವೆಂಟಿ-20 ವಿಶ್ವಕಪ್: ನ್ಯೂಝಿಲೆಂಡ್ ತಂಡ ಪ್ರಕಟ
ಆಕ್ಲಂಡ್, ಫೆ.1: ಭಾರತದಲ್ಲಿ ಮಾರ್ಚ್-ಎಪ್ರಿಲ್ 2016ರಲ್ಲಿ ನಡೆಯಲಿರುವ ಐಸಿಸಿ ಟ್ವೆಂಟಿ-20 ವಿಶ್ವಕಪ್‌ಗೆ ನ್ಯೂಝಿಲೆಂಡ್ ಆಯ್ಕೆಗಾರರು 15 ಸದಸ್ಯರ ತಂಡವನ್ನು ಸೋಮವಾರ ಪ್ರಕಟಿಸಿದೆ.
ಭಾರತದ ಸ್ಪಿನ್ ಸ್ನೇಹಿ ಪಿಚ್‌ನ್ನು ದೃಷ್ಟಿಯಲ್ಲಿಟ್ಟುಕೊಂಡು ನ್ಯೂಝಿಲೆಂಡ್ ಆಯ್ಕೆಗಾರರು ಮೂವರು ಸ್ಪಿನ್ನರ್‌ಗಳಾದ ನಥನ್ ಮೆಕಲಮ್, ಐಶ್ ಸೋಧಿ ಹಾಗೂ ಮಿಚೆಲ್ ಸ್ಯಾಂಟ್ನರ್‌ರನ್ನು ತಂಡಕ್ಕೆ ಆಯ್ಕೆ ಮಾಡಿದ್ದಾರೆ.
ಭಾರತದ ವಾತಾವರಣವನ್ನು ಮನಸ್ಸಿನಲ್ಲಿಟ್ಟುಕೊಂಡು ಮೂವರು ಪ್ರಮುಖ ಸ್ಪಿನ್ನರ್‌ಗಳನ್ನು ತಂಡಕ್ಕೆ ಆಯ್ಕೆ ಮಾಡಿದ್ದೇವೆ. ಮೂವರು ವಿಭಿನ್ನ ಶೈಲಿಯ ಸ್ಪಿನ್ನರ್‌ಗಳು. ಮೆಕಲಮ್‌ಗೆ ವಿದೇಶಿ ನೆಲದಲ್ಲಿ ಆಡಿರುವ ಅನುಭವವಿದೆ. ಮೆಕಲಮ್ ಹಾಗೂ ಸ್ಯಾಂಟರ್‌ಗೆ ಮೊದಲ ಆರು ಓವರ್ ಬೌಲಿಂಗ್ ಮಾಡುವ ಸಾಮರ್ಥ್ಯವಿದೆ ಎಂದು ನ್ಯೂಝಿಲೆಂಡ್‌ನ ಪ್ರಮುಖ ಕೋಚ್ ಮೈಕ್ ಹೆಸ್ಸನ್ ಹೇಳಿದ್ದಾರೆ.
ನ್ಯೂಝಿಲೆಂಡ್ ತಂಡ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯ, ಪಾಕಿಸ್ತಾನ, ಭಾರತ ತಂಡಗಳೊಂದಿಗೆ ಸ್ಥಾನ ಪಡೆದಿದೆ. ಮಾ.15 ರಂದು ನಾಗ್ಪುರದಲ್ಲಿ ಭಾರತದ ವಿರುದ್ಧ ಆಡುವ ಮೂಲಕ ವಿಶ್ವಕಪ್‌ನಲ್ಲಿ ಮೊದಲ ಪಂದ್ಯವನ್ನು ಆಡಲಿದೆ.
ತಂಡ: ಕೇನ್ ವಿಲಿಯಮ್ಸನ್(ನಾಯಕ), ಮಾರ್ಟಿನ್ ಗಪ್ಟಿಲ್, ರಾಸ್ ಟೇಲರ್, ಹೆನ್ರಿ ನಿಕೊಲ್ಸ್, ಗ್ರಾಂಟ್ ಎಲಿಯಟ್, ಕೊರಿ ಆ್ಯಂಡರ್ಸನ್, ಕಾಲಿನ್ ಮುನ್ರೊ, ಲೂಕ್ ರಾಂಚಿ(ವಿಕೆಟ್‌ಕೀಪರ್), ಮಿಚೆಲ್ ಸ್ಯಾಂಟ್ನರ್, ನಥನ್ ಮೆಕಲಮ್, ಟಿಮ್ ಸೌಥಿ, ಟ್ರೆಂಟ್ ಬೌಲ್ಟ್, ಮಿಚೆಲ್ ಮೆಕ್ಲೆನಘನ್, ಆಡಮ್ ಮಿಲ್ನೆ, ಐಶ್ ಸೋಧಿ.







