Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಮನಪಾ ಮುಖ್ಯಾಲಯದ ಪ್ರವೇಶ ದ್ವಾರದ ...

ಮನಪಾ ಮುಖ್ಯಾಲಯದ ಪ್ರವೇಶ ದ್ವಾರದ ಬಳಿಯೇ ಶವ ದಫನ!

ವಾರ್ತಾಭಾರತಿವಾರ್ತಾಭಾರತಿ1 Feb 2016 11:22 PM IST
share

ಮುಂಬೈ ಸಮೀಪದ ಉಲ್ಲಾಸ್‌ನಗರದಲ್ಲಿ ಮೊನ್ನೆ ವಿಶೇಷ ಘಟನೆಯೊಂದು ನಡೆಯಿತು. ಕಳೆದ ಇಪ್ಪತ್ತೆರಡು ವರ್ಷಗಳಿಂದ ಕಬರ್‌ಸ್ತಾನಕ್ಕಾಗಿ ಸಂಘರ್ಷ ನಡೆಸುತ್ತಿದ್ದ ಮುಸ್ಲಿಮ್ ಸಮಾಜದವರು ಒಬ್ಬ ಯುವಕನ ನಿಧನದ ನಂತರ ಶವವನ್ನು ಉಲ್ಲಾಸ್‌ನಗರ ಮನಪಾ ಮುಖ್ಯಾ ಲಯದ ಎದುರು ತಂದರು ಹಾಗೂ ಪ್ರವೇಶದ್ವಾರದಲ್ಲಿ ಶವವನ್ನು ಇರಿಸಿ ಕೆಲವರುದಫನಮಾಡಲು ಅಲ್ಲೇ ಜಮೀನು ಅಗೆಯಲು ಆರಂಭಿಸಿದರು. ಮುಸ್ಲಿಮ್ ಸಮಾಜದ ರೋಷವನ್ನು ಕಂಡ ಮನಪಾ ಆಡಳಿತವು 22 ವರ್ಷಗಳಿಂದ ಬೇಡಿಕೆಯಲ್ಲಿದ್ದ ಮ್ಹಾರಲ್‌ಗಾಂವ್‌ನ ಜಮೀನನ್ನು ಕಬರ್‌ಸ್ತಾನಕ್ಕಾಗಿ ಒಪ್ಪಿಸುವ ಆದೇಶವನ್ನು ಜಾರಿಗೊಳಿಸಿತು.

  
ಭಾರೀ ಪೊಲೀಸ್ ಸುರಕ್ಷೆಯ ನಡುವೆ ಮ್ಹಾರಲ್‌ಗಾಂವ್‌ನಲ್ಲಿ ಇಬ್ಬರು ವ್ಯಕ್ತಿಗಳ ಶವಗಳನ್ನು ಅನಂತರ ದಫನ ಮಾಡಲಾಯಿತು. ಪೊಲೀಸರು ಅಲ್ಲಿ ಹಿಂದೂ-ಮುಸ್ಲಿಮರ ನಡುವಿನ ಅಶಾಂತಿಯ ವಾತಾವರಣವನ್ನು ಶಮನಗೊಳಿಸುವ ಮಹತ್ವಪೂರ್ಣ ಪಾತ್ರ ವಹಿಸಿದ್ದರು. ಉಲ್ಲೇಖನೀಯ ಸಂಗತಿ ಎಂದರೆ ವಿಧಾನಸಭೆ ಚುನಾವಣೆ ಗೆದ್ದ ನಂತರ ಶಾಸಕ ಜ್ಯೋತಿ ಕಲಾನಿ ಅವರು ಮನಪಾ ಆಯುಕ್ತ ಮನೋಹರ ಹಿರೆ, ಮನಪಾ ಉಪಾಯುಕ್ತ ನತಿನ್ ಕಾಪರ್ನಿಶ್‌ರ ಜೊತೆ ಬಿಲ್ಡರ್ ಮಹೇಶ ಅಗ್ರವಾಲರಲ್ಲಿ ಚರ್ಚೆ ನಡೆಸಿದ ನಂತರ ಮ್ಹಾರಲ್ ಗಾಂವ್‌ನಲ್ಲಿ ಒಂದು ಎಕರೆ ಜಮೀನನ್ನು ದಫನ ಭೂಮಿಗಾಗಿ ರಿಜಿಸ್ಟ್ರೇಶನ್ ಮಾಡಿಸಿದ್ದರು. ಆದರೆ ಮ್ಹಾರಲ್ ಗಾಂವ್‌ನ ಜನರು ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕಾರಣ ಪಾಲಿಕೆ ಆಡಳಿತವು ಈ ಜಮೀನನ್ನು ಮುಸ್ಲಿಮ್ ಟ್ರಸ್ಟ್‌ಗೆ ಹಸ್ತಾಂತರ ಮಾಡಲಿಲ್ಲ. ಮೊನ್ನೆ ಗುರುವಾರದಂದು ಮುಸ್ಲಿಮ್ ಸಮಾಜದ ಜನರ ಉಗ್ರ ವಿರೋಧವನ್ನು ಗಮನಿಸಿದ ನಂತರ ಮನಪಾ ಆಯುಕ್ತರು ಮುಸ್ಲಿಮ್ ಟ್ರಸ್ಟ್‌ಗೆ ಕಬರ್‌ಸ್ತಾನದ ದಾಖಲೆ ಪತ್ರಗಳನ್ನು ಒಪ್ಪಿಸಿದರು. ಹಿಂದೂ-ಮುಸ್ಲಿಮ್ ನಡುವಿನ ವಿವಾದವನ್ನು ಗಮನಿಸಿ ಉಲ್ಲಾಸ್ ನಗರದ ಪೊಲೀಸ್ ಉಪಾಯುಕ್ತ ವಸಂತ್ ಜಾಧವ್ ಅವರು ಉಲ್ಲಾಸ್ ನಗರದ ವರಿಷ್ಠ ಪೊಲೀಸ್ ನಿರೀಕ್ಷಕ ಕಿಶೋರ್ ಜಾಧವ್, ಮಧ್ಯವರ್ತಿ ಪೊಲೀಸ್ ಠಾಣೆಯ ವರಿಷ್ಠ ಪೊಲೀಸ್ ನಿರೀಕ್ಷಕ ಅಭಯ್ ಸಾಯ್ಗಿವ್ಕರ್ ಮೊದಲಾದವರೆಲ್ಲ ಬೈಠಕ್ ನಡೆಸಿ ಬಿಗು ಪೊಲೀಸ್ ಬಂದೋಬಸ್ತ್‌ನಲ್ಲಿ ಎರಡು ಶವಗಳನ್ನು ದಫನ ಮಾಡಲಾಯಿತು. ಸುಮಾರು ಒಂದೂವರೆ ಲಕ್ಷದಷ್ಟಿರುವ ಮುಸ್ಲಿಮ್ ಸಮಾಜವು ಇಲ್ಲಿ ಕಬರ್‌ಸ್ತಾನಕ್ಕಾಗಿ ಆಡಳಿತದ ಬಳಿ ಜಮೀನು ಕೇಳಿತ್ತು. ಆದರೆ ಈ ಜಮೀನಿ ನಲ್ಲಿ ವಿವಾದ ಕಾಣಿಸಿತ್ತು. ಇದೀಗ ಈ ವಿವಾದ ಸಮಾಪ್ತಿಯಾಯಿತು.

‘ಸರೋಗೆಟ್ ಮದರ್’ ಗೂ 180 ದಿನಗಳ ರಜೆ
‘ಸರೋಗೆಟ್ ಮದರ್’ ಎನ್ನಿಸಿಕೊಳ್ಳುವ ಮಹಿಳೆಯರ ಅಧಿಕಾರಕ್ಕೆ ಮಹಾರಾಷ್ಟ್ರ ಸರಕಾರವೂ ಸಹ ತನ್ನ ಮಂಜೂರು ನೀಡಿದೆ. ಇದೀಗ ರಾಜ್ಯ ಸರಕಾರವು ಸರೋಗೆಸಿಯಿಂದ ತಾಯಿಯಾಗುವ ಮಹಿಳೆಯರಿಗೆ 180 ದಿನಗಳ ರಜೆ ನೀಡಲಿದೆ. ವಿತ್ತ ಮಂತ್ರಾಲಯವು ಕಳೆದ ಬುಧವಾರದಂದು ಈ ಬಗ್ಗೆ ಆದೇಶ ಜಾರಿಗೊಳಿಸಿದೆ. ಮಹಾರಾಷ್ಟ್ರ ರಾಜ್ಯವು ಮಹಿಳೆಯರಿಗೆ ಸೆರೋಗೆಸಿಯ ಅಧಿಕಾರವನ್ನು ಮುಂದಿಟ್ಟು ನಿಯಮ ಮಾಡಿದ ದೇಶದಲ್ಲಿ ಮೊದಲ ರಾಜ್ಯವಾಗಿದೆ. ಹೊಸ ನಿಯಮದಂತೆ ಇಂತಹ ಮಹಿಳೆಯರು ಅಗ್ರಿಮೆಂಟ್‌ನ ಹೊರತಾಗಿ ಸ್ತ್ರೀರೋಗ ವಿಶೇಷಜ್ಞ-ಮೆಡಿಕಲ್ ಅಧಿಕಾರಿಗಳ ಅನುಮತಿ ಪತ್ರವನ್ನು ನೀಡಬೇಕಾಗಿದೆ. ಸರೋಗೆಸಿ ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್‌ನ ಮಾರ್ಗದರ್ಶನದ ಪ್ರಕಾರವೇ ಇರುವುದು. ರಜೆಯು ಮಗುವಿನ ಜನ್ಮ ದಿನದಿಂದ 180 ದಿನಗಳ ತನಕ ಇರುವುದು.
ಈ ತನಕ ಸರಕಾರಿ ನಿಯಮಗಳ ಪ್ರಕಾರ ಗರ್ಭಿಣಿಯರಿಗೆ 180 ದಿನಗಳ ರಜೆ ಸಿಗುತ್ತದೆ. 26 ಅಕ್ಟೋಬರ್ 1999ರಲ್ಲಿ ಸರಕಾರ ಈ ನಿಯಮದಲ್ಲಿ ಬದಲಾವಣೆ ಮಾಡಿತ್ತು. ಈ ಪ್ರಕಾರ ಮಗುವನ್ನು ದತ್ತು ಪಡೆಯುವ ಮಹಿಳೆಗೂ 90 ದಿನಗಳ ತನಕ ರಜೆಯನ್ನು ನೀಡಲಾಗುವುದು.
 ರಾಜ್ಯ ಸರಕಾರದ ಈ ಆದೇಶವು ಮಾನ್ಯತಾ ಪ್ರಾಪ್ತಿ ಮತ್ತು ಅನುದಾನಿತ ಶೈಕ್ಷಣಿಕ ಸಂಸ್ಥೆಗಳಿಗೆ, ಪ್ರಾಥಮಿಕ ಮತ್ತು ಉಚ್ಚ ಮಾಧ್ಯಮಿಕ ವಿದ್ಯಾಲಯ, ಕೃಷಿ ವಿದ್ಯಾ ಪೀಠದ ವಿದ್ಯಾಲಯಗಳಲ್ಲಿ ಪೂರ್ಣಕಾಲಿಕ ಶಿಕ್ಷಕ ಮಹಿಳೆಯರಿಗೆ, ಸಿಬ್ಬಂದಿಗೆ ಜಾರಿ ಇದೆ. ನಿಯಮದಂತೆ ಒಬ್ಬ ಮಹಿಳೆಗೆ ಕೇವಲ ಒಂದು ಬಾರಿ ಮಾತ್ರ ಇಂತಹ ರಜೆ ದೊರೆಯಲಿದೆ. ಇದಕ್ಕಿಂತ ಮೊದಲು ಸರೋಗೆಸಿಯಿಂದ ತಾಯಿಯಾಗುವ ಮಹಿಳೆ, ಸರಕಾರಿ ಕಾರ್ಮಿಕರಿಗೆ ಯಾವುದೇ ಸೌಲಭ್ಯ ಇರಲಿಲ್ಲ.

ಪೊಲೀಸರೇ, ನಮಸ್ತೇ ಹೇಳಿ
ಮುಂಬೈ ಪೊಲೀಸ್ ಠಾಣೆಗಳಿಗೆ ಫೋನ್ ಮಾಡುವವರಿಗೆ ಇನ್ನು ಮುಂದೆ ‘ನಮಸ್ತೇ’ ಎನ್ನುವ ಸ್ವಾಗತ ಕೇಳಿಬರಲಿದೆ. ಮಹಾರಾಷ್ಟ್ರದಾದ್ಯಂತ ಪೊಲೀಸರಿಗೆ ಈ ರೀತಿಯ ಆದೇಶ ಬಂದಿದೆ. ಪೊಲೀಸ್ ಠಾಣೆಗಳಲ್ಲಿ ಯಾರೇ ಫೋನ್ ಎತ್ತಿಕೊಳ್ಳಲಿ, ಮೊದಲಿಗೆ ಅವರು ನಮಸ್ತೇ ‘ಅಥವಾ ‘ಜೈಹಿಂದ್’ ಎಂದು ಹೇಳಬೇಕು.


ರಾಜ್ಯದ ವಿಶೇಷ ಪೊಲೀಸ್ ಮಹಾ ನಿರೀಕ್ಷಕ ಡಾ. ರವೀಂದ್ರ ಕುಮಾರ್ ಸಿಂಘಲ್ ಅವರು ಎಲ್ಲಾ ಪೊಲೀಸ್ ಠಾಣೆಗಳಿಗೆ ಈ ಆದೇಶ ಜಾರಿಗೊಳಿ ಸಿದ್ದಾರೆ. ಈ ಆದೇಶದ ಪ್ರಕಾರ ಇತ್ತೀಚೆಗೆ ಗುಜರಾತ್‌ನ ಭುಜ್‌ನಲ್ಲಿ ಎಲ್ಲಾ ಪೊಲೀಸ್ ಮಹಾ ನಿರ್ದೇಶಕ ಸ್ಥಾನದ ವರಿಷ್ಠ ಪೊಲೀಸ್ ಅಧಿಕಾರಿಗಳ ಪರಿಷದ್ ನಡೆದಿತ್ತು. ಈ ಪರಿಷದ್‌ನಲ್ಲಿ ಒಂದು ನಿರ್ಣಯವನ್ನು ಕೈಗೊಳ್ಳ ಲಾಯಿತು. ಅದೆಂದರೆ ರಾಜ್ಯದ ಪೊಲೀಸ್ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ ಠಾಣೆಗಳಿಗೆ ಬರುವ ಫೋನ್ ಕರೆಗಳನ್ನು ಎತ್ತಿಕೊಂಡು ಜೈಹಿಂದ್ ಅಥವಾ ನಮಸ್ತೇ ಎನ್ನಬೇಕು. ಈವಾಗ ಕೆಲವೊಮ್ಮೆ ಫೋನ್ ಎತ್ತಿಕೊಂಡ ಅಧಿಕಾರಿಗಳು ತಮ್ಮ ಹುದ್ದೆ ಹೇಳುತ್ತಿದ್ದರು. ಇನ್ನು ಮುಂದೆ ಅವರು ಕೇವಲ ತಮ್ಮ ಹೆಸರು ಹೇಳಿ ನಮಸ್ತೇ ಅಥವಾ ಜೈಹಿಂದ್ ಹೇಳಬೇಕು.
ಈ ಆದೇಶವನ್ನು ಶೀಘ್ರವೇ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಜಾರಿಗೆ ತರಲಾಗುವುದು.

ಬಿಜೆಪಿ ವಿರುದ್ಧ ಟೀಕಿಸಿದ ಮಿತ್ರಪಕ್ಷ ರಾಸಪಾ
ಬಿಜೆಪಿಯ ‘ಮಹಾಯುತಿ’ ಯಲ್ಲಿ ಸೇರಿರುವ ಮಿತ್ರ ಪಕ್ಷಗಳಲ್ಲಿ ಈ ಸಮಯ ಬಿಜೆಪಿ ಮೇಲೆ ಅಸಂತೋಷ ಹೆಚ್ಚುತ್ತಿದೆ. ಬಿಜೆಪಿ ಮತ್ತು ಎನ್‌ಸಿಪಿ ನಡುವೆ ಗುಪ್ತ ಹೊಂದಾಣಿಕೆ ನಡೆದಿರುವುದಾಗಿ ರಾಷ್ಟ್ರೀಯ ಸಮಾಜ ಪಾರ್ಟಿಯ ನೇತಾ ಮಹಾದೇವ ಜಾನ್ಕರ್ ಬಹಿರಂಗ ಆರೋಪ ಮಾಡುತ್ತಿದ್ದಾರೆ.
 ಜಾನ್ಕರ್ ಅವರು ಪತ್ರಿಕಾಗೋಷ್ಠಿಯಲ್ಲಿ ಈ ಆರೋಪ ಮಾಡಿದ್ದಾರೆ. ಇಂದು ಎನ್.ಸಿ.ಪಿ. ಆಡಳಿತದಲ್ಲಿ ಇಲ್ಲದೆ ಇರಬಹುದು. ಆದರೆ ಬಿಜೆಪಿಯ ಜೊತೆ ಅದು ಗುಪ್ತ ಒಪ್ಪಂದ ಮಾಡಿಕೊಂಡಿದೆ. ಬಿಜೆಪಿ ಸರಕಾರದಲ್ಲಿ ಎನ್‌ಸಿಪಿ ನೇತಾರರ ಕೆಲಸ ತೀವ್ರಗತಿಯಲ್ಲಿ ಆಗುತ್ತಿದೆ. ಆದರೆ ಮಿತ್ರ ಪಕ್ಷಗಳಿಗೆ ಕೆಲಸ ಮಾಡಿಸಲು ತಿಂಗಳು ಗಟ್ಟಲೆ ಕಾಯುವ ಪರಿಸ್ಥಿತಿ ಬಂದಿದೆ. ಶಿವಸೇನೆ ಈಗಾಗಲೇ ಇಂತಹ ಆರೋಪಗಳನ್ನು ಮಾಡಿದೆ. ಇದೀಗ ನಮ್ಮ ನಿಲುವು ಕೂಡಾ ಇದೇ ಆಗಿದೆ ಎಂದಿದ್ದಾರೆ ಜಾನ್ಕರ್. ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಯಾರನ್ನು ಮಿತ್ರಪಕ್ಷಗಳು ಎಂದಿತ್ತೋ ಅವರಿಗೆ ಮಂತ್ರಿಮಂಡಲದಲ್ಲಿ ಸ್ಥಾನ ನೀಡಲು ನಿರಾಕರಿಸಿದೆ. ಬಿಜೆಪಿ ತಾನೊಬ್ಬನೇ ಆಡಳಿತದ ಸುಖ ಉಣ್ಣಲು ನೋಡುತ್ತಿದೆ. ಬಿಜೆಪಿಯ ಈ ವಂಚನೆಗೆ ಮಹಾನಗರಪಾಲಿಕೆ ಚುನಾವಣೆಯಲ್ಲಿ ನಾವು ಲೆಕ್ಕ ಚುಕ್ತಾ ಮಾಡುವೆವು.
ಮನಪಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ವಿರುದ್ಧ ನಮ್ಮ ಪಕ್ಷದ ಅಭ್ಯರ್ಥಿ ಸ್ಪರ್ಧಿಸಲಿದ್ದಾರೆ. ಮನಪಾ ಚುನಾವಣೆಗೆ ಒಂದೂವರೆ ವರ್ಷ ಬಾಕಿ ಇದ್ದರೂ ಈಗಲೇ ಅದರ ತಯಾರಿ ರಾಷ್ಟ್ರೀಯ ಸಮಾಜ ಪಾರ್ಟಿ ಮಾಡುತ್ತಿದೆಯೆಂದು ಜಾನ್ಕರ್ ಹೇಳಿದ್ದಾರೆ.

ಒಂದು ವರ್ಗ ಮೀಟರ್‌ನಲ್ಲಿ 14-16 ಪ್ರಯಾಣಿಕರು
ಮುಂಬೈ ಲೋಕಲ್ ರೈಲುಗಳ ಪಶ್ಚಿಮ, ಮಧ್ಯ ಮತ್ತು ಹಾರ್ಬರ್ ಲೈನ್‌ಗಳಲ್ಲಿ ಪ್ರತೀ ದಿನ ಒಟ್ಟು 80 ಲಕ್ಷದಷ್ಟು ಪ್ರಯಾಣಿಕರು ಓಡಾಡುತ್ತಿರುತ್ತಾರೆ.
 ಮುಂಬೈ ಉಪನಗರಿಯ ರೈಲು ಸೇವೆ ವಿಶ್ವದಲ್ಲಿ ಪ್ರಯಾಣಿಕರು ಓಡಾಡುವ ಅತಿ ದೊಡ್ಡ ಸಾರಿಗೆ ಸೇವೆ ಎನ್ನುತ್ತಾರೆ. ಪ್ರತಿ ದಿನ ಉಪ ನಗರಗಳಿಗೆ 2,813 ಸಲ ರೈಲುಗಳು ಓಡಾಡುತ್ತಿವೆ. ದೇಶಾದ್ಯಂತ ರೈಲುಗಳಲ್ಲಿ ಒಂದು ವರ್ಷ ಓಡಾಡುವ ಪ್ರಯಾಣಿಕರು ಮುಂಬೈಯಲ್ಲಿ ಒಂದು ದಿನದಲ್ಲಿ (80 ಲಕ್ಷ) ಓಡಾಡುತ್ತಾರೆ.
ವಿಶೇಷವೆಂದರೆ ಪೀಕ್ ಅವರ್ಸ್‌ನಲ್ಲಿ ಲೋಕಲ್ ರೈಲುಗಳು ಎಷ್ಟೊಂದು ಕಿಕ್ಕಿರಿದ ಪ್ರಯಾಣಿಕರಿಂದ ಕೂಡಿರುತ್ತದೆ ಎಂದರೆ ಒಂದು ವರ್ಗ ಮೀಟರ್ ಸ್ಥಳದಲ್ಲಿ 14ರಿಂದ 16 ಪ್ರಯಾಣಿಕರು ನಿಂತಿರುತ್ತಾರೆ. ಈ ಮಾಹಿತಿ ನೀಡಿದ್ದು ಅಬ್ಸರ್ವರ್ ರಿಸರ್ಚ್ ಫೌಂಡೇಶನ್‌ನ ಸರ್ವೇ ರಿಪೋರ್ಟ್. ಈ ಸಂಸ್ಥೆಯು ಲೋಕಲ್ ರೈಲು ಪ್ರಯಾಣಿಕರ ಸಮಸ್ಯೆಗಳನ್ನು ದೂರ ಮಾಡಲು ಅನೇಕ ಶಿಫಾರಸುಗಳನ್ನು ನೀಡಿರುತ್ತದೆ ಹಾಗೂ ಮಹಾ ಮುಂಬೈಗಾಗಿ ಸ್ವತಂತ್ರ ರೈಲ್ವೆ ಮಂಡಲ ಸ್ಥಾಪನೆ ಮಾಡುವಂತೆಯೂ ಶಿಫಾರಸಿನಲ್ಲಿ ಹೇಳಿರುತ್ತದೆ.
ಇದೀಗ ಒಂದು ಸರ್ವೇ ರಿಪೋರ್ಟ್ ಮಾಡಿ ರೈಲ್ವೆ ಮಂತ್ರಿಯ ಬಳಿ ಕಳುಹಿಸಲು ಸಿದ್ಧತೆ ನಡೆದಿದೆ.

ಹೆಲಿಕಾಪ್ಟರ್‌ನಿಂದ ರಾಜ್ಯಪಾಲರಿಗೆ ಕಂಡಿತು ಭಿವಂಡಿಯ ಕೊಳಕು!
ಮಹಾರಾಷ್ಟ್ರ ರಾಜ್ಯಪಾಲ ಸಿ. ವಿದ್ಯಾಸಾಗರ್ ರಾವ್ ಅವರು ಹೆಲಿಕಾಪ್ಟರ್‌ನಿಂದ ಭಿವಂಡಿ ಶಹರಕ್ಕೆ ಬರುವಾಗ ಶಹರದಲ್ಲಿ ಬಹಳಷ್ಟು ಕೊಳಕಿನ ವಾತಾವರಣ ಕಂಡು ಬಂತು. ಈ ಪವರ್‌ಲೂಮ್ ನಗರಿಯನ್ನು ಸ್ವಚ್ಛವಾಗಿರಿಸಲು ಸಹಯೋಗ ನೀಡಿರಿ ಎಂದು ರಾಜ್ಯಪಾಲರು ವಿನಂತಿಸಿದ ಪ್ರಸಂಗ ಮೊನ್ನೆ ನಡೆಯಿತು.
ಮುಂಬೈ ಸಮೀಪದ ಯಂತ್ರಮಗ್ಗಕ್ಕೆ ಹೆಸರು ಪಡೆದ ಭಿವಂಡಿ ಶಹರಕ್ಕೆ ರಾಜ್ಯಪಾಲರು ದಿ. ಪರಶುರಾಮ್ ಟಾವ್ರೆ ಸ್ಟೇಡಿಯಂನಲ್ಲಿ ಭಿವಂಡಿ ಮನಪಾದ ವತಿಯಿಂದ ಆಯೋಜಿಸಿದ ಸ್ವಚ್ಛ ಭಾರತ ಅಭಿಯಾನದ ವ್ಯಾಪ್ತಿಯಡಿ ಜನಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಭಿವಂಡಿ ಶಹರದಲ್ಲಿ ಕಸದ ರಾಶಿ ಎಲ್ಲೆಂದರಲ್ಲಿ ಕಂಡು ಬರುತ್ತದೆ. ಶಾಲಾ ಮಕ್ಕಳು ಮತ್ತು ಶಹರವಾಸಿಗಳು ಒಟ್ಟುಗೂಡಿ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಬೇಕು. ಪ್ರಧಾನಿಯವರು ಸ್ವಚ್ಛತಾ ಅಭಿಯಾನ ಆರಂಭಿಸಿದ್ದಾರೆ. ಇದನ್ನು ನಾವು ಮುಂದುವರಿಸಬೇಕು ಎಂದರು ರಾಜ್ಯಪಾಲರು.

ಟೋಲ್‌ಗಿಂತ ಅಧಿಕ ಪೆಟ್ರೋಲ್-ಡೀಸೆಲ್ ವ್ಯರ್ಥ
ರಸ್ತೆಮಾರ್ಗದಿಂದ ಮುಂಬೈ ಪ್ರವೇಶದ ಐದು ಪ್ರವೇಶ ಪಾಯಿಂಟ್‌ಗಳಲ್ಲಿ ಟೋಲ್‌ನಿಂದ ಬರುವ ಆದಾಯಕ್ಕಿಂತ ಅಧಿಕ ಹಣ ಪೆಟ್ರೋಲ್ ಡೀಸೆಲ್‌ಗೆ ಸಾಲಲ್ಲಿ ನಿಂತ ವಾಹನಗಳ ಖರ್ಚಾಗುತ್ತಿದೆ ಎನ್ನುತ್ತದೆ ಸಮೀಕ್ಷೆ. ಈ ಸರ್ವೇ ಮಾಡಿದ್ದು ರಾಜಸ್ಥಾನಿ ಜನಜಾಗರಣ ಸಂಸ್ಥೆ.

ಮುಂಬೈ ಎಂಟ್ರಿ ಪಾಯಿಂಟ್ ಲಿ. (ಎಂ.ಇ.ಪಿ.ಎಲ್.) ಈ ಐದು ಪ್ರವೇಶ ದ್ವಾರಗಳ ಟೋಲ್‌ನಿಂದ ಸುಮಾರು 250 ಕೋಟಿ ರೂಪಾಯಿ ಆದಾಯ ಪಡೆಯುತ್ತದೆ. ಆದರೆ ಇಲ್ಲಿ ಗಂಟೆಗಟ್ಟಲೆ ಸಾಲಲ್ಲಿ ನಿಲ್ಲುವ ವಾಹನಗಳಿಂದ ಸುಮಾರು 350 ಕೊಟಿ ರೂಪಾಯಿ ವೌಲ್ಯದ ಪೆಟ್ರೋಲ್-ಡೀಸೆಲ್ ವ್ಯರ್ಥವಾಗುತ್ತದೆಯಂತೆ.
 ಸಂಸ್ಥೆಯ ಅಧ್ಯಕ್ಷ ಗಜೇಂದ್ರ ಭಂಡಾರಿ ತಿಂಗಳ ಕಾಲ ನಡೆಸಿದ ಸಮೀಕ್ಷೆಯ ನಂತರ ಐದೂ ಎಂಟ್ರಿ ಪಾಯಿಂಟ್‌ಗಳ ಅವ್ಯವಸ್ಥೆ ಮತ್ತು ಅತಿ ಉದ್ದದ ವಾಹನ ಸಾಲುಗಳ ಕಾರಣ ಜನರ ಹಣ ಅಪವ್ಯಯವಾಗುತ್ತದೆ ಹಾಗೂ ಜನರ ನೂರಾರು ಗಂಟೆಯ ಸಮಯ ವ್ಯರ್ಥವಾಗುತ್ತಿದೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಅವರ ಪಾರ್ಟಿ ಸ್ವತಹ ಎಲ್ಲಾ ಟೋಲ್ ಬಂದ್ ಮಾಡುವ ಆಶ್ವಾಸನೆ ನೀಡಿ ಆಡಳಿತಕ್ಕೆ ಬಂದಿದೆ. ಆದರೆ ಈಗ ಸಮಿತಿಯ ಸಲಹೆ ಕೇಳುವ ನೆಪದಲ್ಲಿ ನಿರ್ಧಾರ ಮುಂದೂಡುತ್ತಿದ್ದಾರೆ.

ಮುಂಬೈ ಪ್ರವೇಶದ ಐದು ಎಂಟ್ರಿ ಪಾಯಿಂಟ್‌ಗಳನ್ನು ಟೋಲ್ ಮುಕ್ತಿ ಯ ಬೇಡಿಕೆ ಗಮನಿಸಿ ಒಂದು ಸಲಹಾ ಸಮಿತಿ ರಚಿಸಲಾಗಿದೆ. ಆದರೆ ಈಗ ಅದರ ಕಾರ್ಯಾವಧಿ ವಿಸ್ತರಿಸುತ್ತಾ ಇದ್ದಾರೆ. ಪೂರ್ವ ನಿರ್ಧಾರಿತ ಕಾರ್ಯಕ್ರ ಮದ ಪ್ರಕಾರ 2027ರ ತನಕ ವಸೂಲಿ ಜಾರಿ ಇರುವುದು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X