ವಂಶವಾಹಿ ತಿದ್ದಲು ಅಸ್ತು
ಲಂಡನ್, ಫೆ. 1: ನೂತನ ತಂತ್ರಜ್ಞಾನವನ್ನು ಬಳಸಿ ಮಾನವ ವಂಶವಾಹಿ (ಜೀನ್)ಯನ್ನು ತಿದ್ದಲು ಅವಕಾಶ ಮಾಡಿಕೊಡಬೇಕೆಂಬ ವಿಜ್ಞಾನಿ ಕ್ಯಾತಿ ನಿಯಾಕನ್‌ರ ಮನವಿಗೆ ಬ್ರಿಟನ್‌ನ ಸಂತಾನ ನಿಯಂತ್ರಕ ಸಂಸ್ಥೆ ಮಾನವ ಸಂತತಿ ಮತ್ತು ಭ್ರೂಣ ಪ್ರಾಧಿಕಾರ ಅಂಗೀಕಾರ ನೀಡಿದೆ.
ಕಳೆದ ವರ್ಷ, ಮಾನವ ಭ್ರೂಣಗಳಲ್ಲಿ ವಂಶವಾಹಿಗಳನ್ನು ತಿದ್ದುವ ಮೊದಲ ಪ್ರಯತ್ನವನ್ನು ಚೀನಾದ ಸಂಶೋಧಕರು ನಡೆಸಿದ್ದರು. ಆದರೆ, ಅದು ಯಶಸ್ವಿಯಾಗಲಿಲ್ಲವಾದರೂ ಮುಂದಿನ ತಲೆಮಾರುಗಳ ವಂಶವಾಹಿಗಳನ್ನು ತಿದ್ದುವ ಸಾಧ್ಯತೆಯೊಂದನ್ನು ಹುಟ್ಟು ಹಾಕಿತ್ತು.
ಮಸ್ಕುಲರ್ ಡೈಸ್ಟ್ರೋಫಿ ಮತ್ತು ಎಚ್‌ಐವಿಯಂಥ ವಂಶಪಾರಂಪರ್ಯವಾಗಿ ಬರುವ ರೋಗಗಳ ಚಿಕಿತ್ಸೆಯಲ್ಲಿ ಈ ತಂತ್ರಜ್ಞಾನ ಉಪಯುಕ್ತವಾಗಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಆದರೆ, ಈ ರೀತಿಯಾಗಿ ವಂಶವಾಹಿಯನ್ನು ತಿದ್ದಿದರೆ ಅದು ಒಂದು ಹಂತದಲ್ಲಿ ‘ಕುಲಾಂತರಿ’ ಮಾನವ ಶಿಶುಗಳ ಹುಟ್ಟಿಗೆ ಕಾರಣವಾಗಬಹುದು ಎಂಬುದಾಗಿ ಟೀಕಾಕಾರರು ಎಚ್ಚರಿಸಿದ್ದಾರೆ.
Next Story





