ಗೋಪಾಲನ್ ಮಾಲ್‌ಗೆ ಬೆಂಕಿ: ತಪ್ಪಿದ ಭಾರೀ ಅನಾಹುತ

ಬೆಂಗಳೂರು, ಫೆ.1: ಮೈಸೂರು ರಸ್ತೆಯಲ್ಲಿನ ರಾಜರಾಜೇಶ್ವರಿ ನಗರ ಗೇಟ್ ಬಳಿಯ ಗೋಪಾಲನ್ ಮಾಲ್‌ನಲ್ಲಿ ಇಂದು ಬೆಳಗ್ಗೆ ಅಗ್ನಿ ಅವಘಡ ಸಂಭವಿಸಿದ್ದು, ರೆಸ್ಟೋರೆಂಟ್‌ವೊಂದು ಸಂಪೂರ್ಣ ಹಾನಿಗೊಂಡು, ಇನ್ನು ಎರಡು ಅಂತಸ್ತಿನ ಮಳಿಗೆಗಳಿಗೂ ಭಾಗಶಃ ಹಾನಿ ಉಂಟಾಗಿದೆ. ಮಾಲ್‌ನ ನೆಲಮಹಡಿಯಲ್ಲಿರುವ ಮೆಕ್‌ಡೊನಾಲ್ಡ್ ರೆಸ್ಟೋರೆಂಟ್‌ನ ಅಡುಗೆ ಮನೆಗೆ ಬೆಳಗ್ಗೆ 10:30ರ ವೇಳೆಗೆ ತಿಂಡಿ ತಯಾರಿಸುವಾಗ ಬೆಂಕಿ ಕೆನ್ನಾಲಿಗೆ ಛಾವಣಿವರೆಗೂ ವ್ಯಾಪಿಸಿ ಅವಘಡ ಸಂಭವಿಸಿದೆ. ಬೆಂಕಿ ಛಾವಣಿಗೆ ಹೊತ್ತಿಕೊಂಡು ಅದು ಮೇಲಿನ ಮಹಡಿಯಲ್ಲಿದ್ದ ಪೈ ಇಂಟರ್ ನ್ಯಾಷನಲ್ ಮಳಿಗೆಗೂ ವ್ಯಾಪಿಸಿದೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಅಲ್ಲಿದ್ದ ಸಿಬ್ಬಂದಿ ಬೆಂಕಿ ನಂದಿಸಲು ಯತ್ನಿಸಿದರೂ ಪ್ರಯೋಜನವಾಗಿಲ್ಲ.
ತಕ್ಷಣ ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ, ಬೆಂಕಿ ನಂದಿಸುವ ಕಾರ್ಯ ನಡೆಸಿದ್ದು, ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.
Next Story





