ಬೆಳ್ತಂಗಡಿ: ಟಿಕೆಟ್ ಆಕಾಂಕ್ಷಿಗಳ ಬಲಪ್ರದರ್ಶನ
ಬೆಳ್ತಂಗಡಿ, ಫೆ.1: ಕಾಂಗ್ರೆಸ್ ಪಕ್ಷದಲ್ಲಿ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಯ ಅಂತಿಮ ಕಸರತ್ತು ನಡೆಯುತ್ತಿದ್ದು, ಸೋಮವಾರ ಬೆಳ್ತಂಗಡಿ ಶಾಸಕ ಕೆ. ವಸಂತ ಬಂಗೇರರ ಮನೆ ಹಾಗೂ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಕಚೇರಿಯ ಮುಂದೆ ಟಿಕೆಟ್ ಆಕಾಂಕ್ಷಿಗಳಿಂದ ಬಲ ಪ್ರದರ್ಶನ ನಡೆಯಿತು.
ಕಣಿಯೂರು ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿದ್ದು, ಮಾಜಿ ಜಿಪಂ ಸದಸ್ಯರಾದ ರಾಜಶೇಖರ ಅಜ್ರಿ ಹಾಗೂ ಶಾಹುಲ್ ಹಮೀದ್ ಮತ್ತು ಮಾಜಿ ಯುವ ಕಾಂಗ್ರೆಸ್ ಅಧ್ಯಕ್ಷ ಚಂದನ್ ಪ್ರಸಾದ್ ಕಾಮತ್ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಸೋಮವಾರ ಬೆಳಗ್ಗೆ ನೂರಾರು ಮಂದಿ ಶಾಸಕರ ಮನೆಗೆ ತೆರಳಿ ಶಾಹುಲ್ ಹಮೀದ್‌ಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದರು. ಆ ಬಳಿಕ ಚಂದನ್ ಪ್ರಸಾದ್ ಕಾಮತ್‌ರ ಬೆಂಬಲಿಗರು ಶಾಸಕರ ಮನೆಗೆ ಹಾಗೂ ಪಕ್ಷದ ಕಚೇರಿಗೆ ತೆರಳಿ ಟಿಕೆಟ್‌ಗಾಗಿ ಒತ್ತಾಯಿಸಿದರು.
Next Story





