Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಮೆಹಬೂಬ, ಬಿಜೆಪಿಗೆ ರಾಜ್ಯಪಾಲ ಬುಲಾವ್

ಮೆಹಬೂಬ, ಬಿಜೆಪಿಗೆ ರಾಜ್ಯಪಾಲ ಬುಲಾವ್

ವಾರ್ತಾಭಾರತಿವಾರ್ತಾಭಾರತಿ1 Feb 2016 11:56 PM IST
share

ಹೊಸದಿಲ್ಲಿ, ಫೆ.1: ಜಮ್ಮುಕಾಶ್ಮೀರದಲ್ಲಿ ಪಿಡಿಪಿ ಹಾಗೂ ಬಿಜೆಪಿ ಪಕ್ಷಗಳು ಜೊತೆಗೂಡಿ ಮತ್ತೊಮ್ಮೆ ಸರಕಾರ ರಚಿಸಲಿದೆಯೇ ಎಂಬುದನ್ನು ಮಂಗಳವಾರ ಸಂಜೆಯೊಳಗೆ ಸ್ಪಷ್ಟಪಡಿಸುವಂತೆ ರಾಜ್ಯಪಾಲ ಎಂ.ಎನ್.ವೊಹ್ರಾ, ಆ ಎರಡು ಪಕ್ಷಗಳಿಗೆ ಸೂಚನೆ ನೀಡಿದ್ದಾರೆ. ನಾಳೆ ಈ ಬಗ್ಗೆ ತನ್ನೊಂದಿಗೆ ಮಾತುಕತೆ ನಡೆಸುವಂತೆಯೂ, ರಾಜ್ಯಪಾಲರು ಪಿಡಿಪಿ ನಾಯಕಿ ಮೆಹಬೂಬ ಮುಫ್ತಿ ಹಾಗೂ ಬಿಜೆಪಿ ಅಧ್ಯಕ್ಷ ಸತ್‌ಶರ್ಮಾಗೆ ತಿಳಿಸಿದ್ದಾರೆ.
    
   ಪಿಡಿಪಿ ಹಾಗೂ ಬಿಜೆಪಿ ನಡುವಿನ 10 ತಿಂಗಳ ಮೈತ್ರಿಯನ್ನು ಮುಂದುವರಿಸಲು, ಪಿಡಿಪಿ ವರಿಷ್ಠೆ ಮೆಹಬೂಬ ಮುಫ್ತಿ ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ಜಮ್ಮುಕಾಶ್ಮೀರದಲ್ಲಿ ಈ ಎರಡುಪಕ್ಷಗಳ ಮೈತ್ರಿಯು ಅತಂತ್ರದಲ್ಲಿ ಸಿಲುಕಿದೆ. ಮೆಹಬೂಬ ಅವರ ತಂದೆ ಮುಫ್ತಿ ಮುಹಮ್ಮದ್ ಸಯೀದ್ ಕಳೆದ ತಿಂಗಳು ನಿಧನರಾದ ಬಳಿಕ ಮೆಹಬೂಬ ಅವರು ಮುಖ್ಯಮಂತ್ರಿ ಹುದ್ದೆಯನ್ನು ಆಲಂಕರಿಸಲಿದ್ದಾರೆಂದು ನಿರೀಕ್ಷಿಸಲಾಗಿತ್ತು. ಆದರೆ ಮೆಹಬೂಬ ಮುಫ್ತಿ ಬಿಜೆಪಿ ಜೊತೆ ಮೈತ್ರಿ ಮುಂದುವರಿಸಲು ನಿರಾಸಕ್ತಿ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿದೆ. ಬಿಜೆಪಿ ಜೊತೆಗೂಡಿ ಸರಕಾರ ರಚಿಸುವ ಬದಲು ಹೊಸತಾಗಿ ಚುನಾವಣೆಗಳನ್ನು ಎದುರಿಸಲು ತಾನು ಬಯಸುತ್ತಿದ್ದೇನೆಂದು ಮೆಹಬೂಬ ರವಿವಾರ ಸುಳಿವು ನೀಡಿದ್ದರು.‘‘ ನಾನು ಏಕಾಂಗಿಯಾಗಿದ್ದರೂ ಕೂಡಾ, ಪಿಡಿಪಿಯ ತತ್ವಾದರ್ಶಕ್ಕೆ ಬದ್ಧಳಾಗಿದ್ದೇನೆ. ನಾನು ಜನರೆಡೆಗೆ ತೆರಳುತ್ತೇನೆ’’ ಎಂದು ಮೆಹಬೂಬ ನಿನ್ನೆ ನಡೆದ ಪಕ್ಷದ ಸಭೆಯಲ್ಲಿ ಹೇಳಿದ್ದಾರೆನ್ನಲಾಗಿದೆ. ಸರಕಾರ ರಚಿಸಬೇಕಾದರೆ, ಎರಡೂ ಪಕ್ಷಗಳ ನಡುವೆ ಏರ್ಪಟ್ಟ ಸಾಮಾನ್ಯ ಕಾರ್ಯಸೂಚಿಗೆ ಸಂಬಂಧಿಸಿ ನೀಡಲಾದ ಭರವಸೆಗಳನ್ನು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಈಡೇರಿಸಬೇಕೆಂಬ ಶರತ್ತನ್ನು ಮೆಹಬೂಬ ಮುಂದಿಟ್ಟಿದ್ದಾರೆಂದು ಪಿಡಿಪಿ ಮೂಲಗಳು ತಿಳಿಸಿವೆ.


ಏತನ್ಮಧ್ಯೆ ರಾಜ್ಯದ ಉನ್ನತ ಬಿಜೆಪಿ ನಾಯಕರು, ಇಂದು ಬೆಳಗ್ಗೆ ಸಭೆ ನಡೆಸಿ, ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಿದರು. 87 ಸದಸ್ಯ ಬಲದ ಜಮ್ಮುಕಾಶ್ಮೀರ ವಿಧಾನಸಭೆಯಲ್ಲಿ 27 ಮಂದಿ ಶಾಸಕರಿರುವ ಪಿಡಿಪಿ ಏಕೈಕ ಅತಿ ದೊಡ್ಡ ಪಕ್ಷವಾಗಿದೆ. 25 ಶಾಸಕರನ್ನು ಹೊಂದಿರುವ, ಎರಡನೆ ಅತಿ ದೊಡ್ಡ ಪಕ್ಷವಾದ ಬಿಜೆಪಿಯ ಜೊತೆ ಸೇರಿ, ಕಳೆದ ವರ್ಷ ಮೈತ್ರಿ ಸರಕಾರ ರಚನೆಯಾಗಿತ್ತು. 1111111

ಆಹಾರ ಭದ್ರತಾ ಕಾಯ್ದೆ ಜಾರಿಯ ವೈಫಲ್ಯಕ್ಕೆ ಅಸಮಾಧಾನ ಗುಜರಾತ್‌ನಲ್ಲಿ ಭಾರತದ ಭಾಗವಲ್ಲವೇ?: ಸುಪ್ರೀಂ ಹೊಸದಿಲ್ಲಿ,ಫೆ.1ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೊಳಿಸದಿರುವುದಕ್ಕಾಗಿ ಸುಪ್ರೀಂಕೋರ್ಟ್ ಸೋಮವಾರ ಗುಜರಾತ್ ಸೇರಿದಂತೆ ಕೆಲವು ನಿರ್ದಿಷ್ಟ ರಾಜ್ಯಗಳನ್ನು ತರಾಟೆಗೆ ತೆಗೆದುಕೊಂಡಿದೆ.
 ‘‘ ಸಂಸತ್ ಏನು ಮಾಡುತ್ತಿದೆ? ಗುಜರಾತ್ ಭಾರತದ ಭಾಗವಲ್ಲವೇ?.ಈ ಕಾಯ್ದೆಯು ಇಡೀ ರಾಷ್ಟ್ರಕ್ಕೆ ಅನ್ವಯವಾಗುತ್ತದೆ. ಆದರೆ ಗುಜರಾತ್ ಅದನ್ನು ಇನ್ನೂ ಜಾರಿಗೊಳಿಸಿಲ್ಲ. ನಾಳೆ, ಇನ್ನೊಂದು ರಾಜ್ಯವು ತಾನು ಕ್ರಿಮಿನಲ್ ದಂಡಸಂಹಿತೆ, ಭಾರತೀಯ ದಂಡಸಂಹಿತೆ ಹಾಗೂ ಸಾಕ್ಷಾಧಾರ ಕಾಯ್ದೆಯನ್ನು ಜಾರಿಗೆ ತರುವುದಿಲ್ಲವೆಂದೂ ಹೇಳಲೂ ಬಹುದು ಎಂದು ನ್ಯಾಯಮೂರ್ತಿ ಮದನ್ ಬಿ. ಲೋಕುರ್ ನೇತೃತ್ವದ ನ್ಯಾಯಪೀಠ, ಖಾರವಾಗಿ ಹೇಳಿದೆ.

  ವಿವಿಧ ರಾಜ್ಯಗಳ ಬರಪೀಡಿತ ಪ್ರದೇಶಗಳಲ್ಲಿ ನರೇಗಾ, ರಾಷ್ಟ್ರೀಯ ಆಹಾರ ಭದ್ರತೆ ಹಾಗೂ ಮಧ್ಯಾಹ್ನದೂಟದಂತಹ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳ ಸ್ಥಿತಿಗತಿ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುವಂತೆ ನ್ಯಾಯಪೀಠವು ಕೇಂದ ಸರಕಾರಕ್ಕೆ ಸೂಚನೆ ನೀಡಿದೆ. ಈ ಬಗ್ಗೆ ಫೆಬ್ರವರಿ 10ರೊಳಗೆ ತನಗೆ ಅಫಿದಾವಿತ್ ಸಲ್ಲಿಸುವಂತೆಯೂ ಅದು ಆದೇಶಿಸಿದೆೆ ಹಾಗೂ ವಿಷಯದ ಮುಂದಿನ ಆಲಿಕೆಯನ್ನು ಎರಡು ದಿನಗಳವರೆಗೆ ಮುಂದೂಡಿದೆ.

ಬರಪೀಡಿತ ಪ್ರದೇಶಗಳಲ್ಲಿ ನರೇಗಾ, ಆಹಾರ ಭದ್ರತಾ ಕಾಯ್ದೆ ಹಾಗೂ ಮಧ್ಯಾಹ್ನದೂಟ ಯೋಜನೆಗಳ ಅನುಷ್ಠಾನದ ಸ್ಥಿತಿಗತಿ ಬಗ್ಗೆ ಮಾಹಿತಿಯನ್ನು ನೀಡುವಂತೆ, ಸುಪ್ರೀಂಕೋರ್ಟ್ ಜನವರಿ 18ರಂದು ಕೇಂದ್ರ ಸರಕಾರಕ್ಕೆ ತಿಳಿಸಿತ್ತು.ಸಂತ್ರಸ್ತರಿಗೆ ಅಗತ್ಯವಿರುವ ಕನಿಷ್ಠ ಉದ್ಯೋಗ ಹಾಗೂ ಆಹಾರವನ್ನು ಒದಗಿಸಲಾಗಿದೆಯೇ, ಇಲ್ಲವೇ ಎಂಬ ಬಗ್ಗೆ ವರದಿಯನ್ನು ಸಲ್ಲಿಸುವಂತೆಯೂ ಅದು ತಿಳಿಸಿತ್ತು.
  ಉತ್ತರಪ್ರದೇಶ, ಕರ್ನಾಟಕ ಮಧ್ಯಪ್ರದೇಶ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಗುಜರಾತ್, ಒಡಿಶಾ, ಜಾರ್ಖಂಡ್, ಬಿಹಾರ, ಹರ್ಯಾಣ ಹಾಗೂ ಛತ್ತೀಸ್‌ಗಡ ಮತ್ತಿತರ ರಾಜ್ಯಗಳ ಬರಪೀಡಿತ ಭಾಗಗಳಲ್ಲಿ ಸಂತ್ರಸ್ತರಿಗೆ ಇಲಾಖೆಗಳು ಯಾಕೆ ಸಮರ್ಪಕವಾದ ಪರಿಹಾರವನ್ನು ಒದಗಿಸಲು ವಿಫಲವಾಗಿವೆಯೆಂದು ನ್ಯಾಯಪೀಠ ಪ್ರಶ್ನಿಸಿದೆ. ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯೊಂದರ ಆಲಿಕೆಯ ಸಂದರ್ಭದಲ್ಲಿ ಅದು ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಪ್ರತಿಯೊಬ್ಬ ವ್ಯಕ್ತಿಗೂ ಪ್ರತಿ ತಿಂಗಳು 5 ಕೆ.ಜಿ. ಆಹಾರ ಧಾನ್ಯಗಳನ್ನು ಖಾತರಿಪಡಿಸುವ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿ, ಯೋಗೇಂದ್ರಯಾದವ್, ಶಾಂತಿಭೂಷಣ್ ಮತ್ತಿತರರು ನಡೆಸುತ್ತಿರುವ ‘ಸ್ವರಾಜ್ ಅಭಿಯಾನ್’ ಎನ್‌ಜಿಓ ಸಂಸ್ಥೆಯು, ಸುಪ್ರೀಂಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ(ಪಿಐಎಲ್) ಯನ್ನು ಸಲ್ಲಿಸಿತ್ತು. ಮಧ್ಯಾಹ್ನದೂಟ ಯೋಜನೆಯಡಿ ಶಾಲಾ ಮಕ್ಕಳಿಗೆ ಹಾಲು ಹಾಗೂ ಮೊಟ್ಟೆಯನ್ನು ಒದಗಿಸಬೇಕು. ಬೆಳೆನಷ್ಟಕ್ಕಾಗಿ ರೈತರಿಗೆ ಸಕಾಲಿಕವಾಗಿ ಸೂಕ್ತವಾದ ಪರಿಹಾರವನ್ನು ಒದಗಿಸಬೇಕು ಹಾಗೂ ಮುಂದಿನ ಬೆಳೆಗೆ ಸಬ್ಸಿಡಿಯನ್ನು ಒದಗಿಸಬೇಕೆಂದು ಅರ್ಜಿದಾರರು ಆಗ್ರಹಿಸಿದ್ದರು. ಬರಪೀಡಿತ ಪ್ರದೇಶಗಳಲ್ಲಿ ತನ್ನ ಹೊಣೆಗಾರಿಕೆಯನ್ನು ನಿರ್ವಹಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ತೀವ್ರ ನಿರ್ಲಕ್ಷವನ್ನು ಪ್ರದರ್ಶಿಸಿವೆ. ಅವುಗಳ ನಿಷ್ಕ್ರಿಯತೆಯಿಂದಾಗಿ, ಜನರ ಬದುಕಿಗೆ ಅಪಾರವಾದ ಹಾನಿಯಾಗಿದೆ. ಇದು ಸಂವಿಧಾನದ 21 ಹಾಗೂ 14 ನಿಯಮಗಳಡಿ ಖಾತರಿಪಡಿಸಲಾದ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಅರ್ಜಿಯು ಆರೋಪಿಸಿತ್ತು. ಬರದಿಂದಾಗಿ, ಗ್ರಾಮೀಣ ಬಡಜನರಿಗೆ ದೊರೆಯುತ್ತಿದ್ದ ಕೃಷಿ ಉದ್ಯೋಗದ ಪ್ರಮಾಣದಲ್ಲಿ ಭಾರೀ ಇಳಿಕೆಯಾಗಿದೆಯೆಂದು ಪಿಐಎಲ್ ಅರ್ಜಿಯು ಆತಂಕ ವ್ಯಕ್ತಪಡಿಸಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X