“ಪ್ಲೈಯಿಂಗ್ ಸಿಖ್” ಮಿಲ್ಕಾಸಿಂಗ್ ರಿಂದ ಕೆನಡಾದ ಮಹಿಳಾ ಸ್ಪರ್ಧಿಯೊಂದಿಗೆ ಒಂದು ಕಿ.ಮೀ. ಓಟ!
.jpg)
ಚಂಡಿಗಡ: ಪ್ಲೈಯಿಂಗ್ ಸಿಖ್ ಎಂಬ ಹೆಸರಿನಲ್ಲಿ ಪ್ರಸಿದ್ಧರಾಗಿರುವ ಹಿರಿಯ ಅಥ್ಲಿಟ್ ಮಿಲ್ಕಾ ಸಿಂಗ್ ಹಾಗೂ ಅವರಂತಹ ಹಿರಿಯ ಮಾಜಿ ಮಹಿಳಾ ಅಥ್ಲಿಟ್ ಆಂಟಾರಿಯಾದ ಕ್ಯಾಥ್ಲಿನ್ ಜೊತೆ ಒಂದು ಕಿ.ಮೀ. ದೂರ ಓಡಲಿದ್ದಾರೆ. ಆದರೆ ಇದು ಒಂದು ಪ್ರೆಂಡ್ಲಿ ಓಟ. ಯಾವುದೇ ಸ್ಪರ್ಧೆಯಲ್ಲ ಎಂದು ಮಿಲ್ಕಾ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಮಿಲ್ಕಾಸಿಂಗ್ ಕಳೆದ ವರ್ಷ ಕೆನಡಾಕ್ಕೆ ಹೋಗಿದ್ದರು.
ಆಗಸ್ಟ್ ಹದಿನೈದರಂದು ಅಲ್ಲಿನ ಟೊರಂಟೋದಲ್ಲಿ ಒಂದು ಸಮಾರಂಭದಲ್ಲಿ ಭಾಗವಹಿಸಿದ್ದರು. ಅಲ್ಲಿ ಕ್ಯಾಥ್ಲಿನ್‌ರನ್ನು ಮಿಲ್ಕಾ ಭೇಟಿಯಾಗಿದ್ದರು. ಕ್ಯಾಥ್ಲಿನ್ ಕೂಡ ಓಟಗಾರ್ತಿಯಾಗಿದ್ದುದರಿಂದ ಮಿಲ್ಕಾ ಸಿಂಗ್ ಒಬ್ಬ ಪ್ರಸಿದ್ಧ ಅಥ್ಲೀಟ್ ಎಂಬುದನ್ನು ಅರಿತುಕೊಂಡಿದ್ದರು. ಸಮಾರಂಭದಲ್ಲಿ ಭೇಟಿಯಾದಾಗ ಕ್ಯಾಥ್ಲಿನ್ ಹೇಳಿದ್ದರು. ನಾನು ಚಂಡೀಗಡಕ್ಕೆ ಬಂದರೆ ನಿಮ್ಮೊಂದಿಗೆ ಓಡಲು ಬಯುಸುತ್ತೇನೆ ಎಂದು. ಈ ಕೊಡುಗೆಯನ್ನು ಮಿಲ್ಕಾ ಸಿಂಗ್ ಸಂತೋಷದಿಂದ ಸ್ವೀಕರಿಸಿದ್ದರು. ಆದುದರಿಂದ ಚಂಡೀಗಡದ ಸುಕ್‌ನಾದಲ್ಲಿ ಈ ಪ್ರೇಂಡ್ಲಿ ಓಟ ನಡೆಯಲಿದೆ. ಸ್ವಯಂ ಮಿಲ್ಕಾ ಸಿಂಗ್ ಈ ವಿಚಾರವನ್ನು ತಿಳಿಸಿದ್ದಾರೆ.





