ಭಾರತದ ಹಾಕಿ ತಂಡದ ನಾಯಕನ ವಿರುದ್ಧ ಲೈಂಗಿಕ ಕಿರುಕುಳ ಆರೋಪ

ಹೊಸದಿಲ್ಲಿ, ಫೆ.3: ಭಾರತ ಹಾಕಿ ತಂಡದ ನಾಯಕ ಸರ್ದಾರ್ ಸಿಂಗ್ ವಿರುದ್ಧ ಬ್ರಿಟಿಷ್ ಮಹಿಳೆ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರ ಯತ್ನ ದೂರು ನೀಡಲಾಗಿದೆ.
ಬ್ರಿಟಿಷ್ ಮಹಿಳೆ ಸರ್ದಾರ್ ಸಿಂಗ್ ಗೆಳತಿಯೇ ದೂರು ನೀಡಿದಾಕೆ. 21ರ ಹರೆಯದ ಹಾಕಿ ಆಟಗಾರ್ತಿ, 2012ರಲ್ಲಿ ಲಂಡನ್ ಒಲಂಪಿಕ್ಸ್ ಸಂದರ್ಭದಲ್ಲಿ ಸರ್ದಾರ್ ಸಿಂಗ್ ಅವರನ್ನು ಭೇಟಿ ಮಾಡಿದ್ದರು. ಅಲ್ಲಿಂದ ಇಬ್ಬರ ಸ್ನೇಹ ಬೆಳೆಯಿತು. ನಾಲ್ಕು ವರ್ಷಗಳ ಕಾಲ ಜೊತೆಯಾಗಿದ್ದರು. ಇದೀಗ ಯುವತಿ ಸರ್ದಾರ್ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರ ಯತ್ನ ದೂರು ನೀಡಿದ್ದಾರೆ. ಮದುವೆಯಾಗುವುದಾಗಿ ನಂಬಿಸಿ ಸರ್ದಾರ್ ಸಿಂಗ್ ವಂಚಿಸಿರುವುದಾಗಿ ಆರೋಪಿಸಿದ್ದಾರೆ. ಆದರೆ ಸರ್ದಾರ್ ಸಿಂಗ್ ವಿರುದ್ಧ ಇನ್ನು ಎಫ್ ಐಆರ್ ದಾಖಲಿಸಲಾಗಿಲ್ಲ, ಪ್ರಸ್ತುತ ಸರ್ದಾರ್ ಸಿಂಗ್ ಹರ್ಯಾಣ ಪೊಲೀಸ್ ಇಲಾಖೆಯಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
Next Story





