ಫರಂಗಿಪೇಟೆ: ಹದಗೆಟ್ಟ ಹಾಗೂ ಕಡಿತಗೊಂಡ ದಾರಿ - ನಾಗರಿಕರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

ಫರಂಗಿಪೇಟೆ, ಫೆ. 3: ಪುದುಗ್ರಾಮ ಪಂಚಾಯತ್ ವ್ಯಾಪ್ತಿಯ ಫರಂಗಿಪೇಟೆ ಜುಮಾದಿ ಗುಡ್ಡೆಗೆ ಹೋಗುವ ದಾರಿಯನ್ನು ಸರಿಮಾಡಿಕೊಡದ ಕಾರಣ ಫೆ. 20ರಂದು ನಡೆಯುವ ತಾಪಂ, ಜಿಪಂ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಅಲ್ಲಿನ ನಾಗರಿಕರು ಫ್ಲೆಕ್ಸ್ ಅಳವಡಿಸಿದ್ದಾರೆ.
ಫರಂಗಿಪೇಟೆ ಹಳೆ ರಸ್ತೆಗೆತಾಗಿಕೊಂಡಿರುವ ಜುಮಾದಿಗುಡ್ಡೆಗೆ ಹೋಗುವ ಕಾಲು ದಾರಿಯು ಸಂಪೂರ್ಣವಾಗಿ ಹದೆಗೆಟ್ಟಿದ್ದು, ಇಲ್ಲಿ ಸುಮಾರು 30ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿದೆ.ಅಲ್ಲದೆ ಕಳೆದ ವರ್ಷ ಪಂಚಾಯತ್‌ಕಚೇರಿ ಹಿಂಭಾಗದಲ್ಲಿ ಖಾಸಗಿ ವಸತಿ ಸಮುಚ್ಚಯ ನಿರ್ಮಾಣವಾಗುತ್ತಿದ್ದಾಗ ಮಾಲಕ, ಪಂಚಾಯತ್ ಆಡಳಿತದ ನಿರ್ಲಕ್ಷದಿಂದಾಗಿ ಗುಡ್ಡೆ ಕುಸಿದು ಮೂವರು ಕಾರ್ಮಿಕರು ಮೃತಪಟ್ಟಿದ್ದರು.ಗುಡ್ಡ ಕುಸಿತದಿಂದಾಗಿ ಸುಮಾರು 9 ಮನೆಗಳಿಗೆ ತೆರಳುವ ದಾರಿಯು ಸಂಪೂರ್ಣವಾಗಿ ಕಡಿತಗೊಂಡಿದೆ.ಈ ದಾರಿಗಳನ್ನು ಸರಿಮಾಡಿಕೊಡುವಂತೆ ವಿವಿಧ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗಿತ್ತು.ಅವರ್ಯಾರೂ ಮನವಿಗೆ ಸ್ಪಂದಿಸದಕಾರಣತಾಪಂ, ಜಿಪಂಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದ್ದು, ಯಾವುದೇ ಪಕ್ಷದವರು ಮತಯಾಚಣೆಗೆಇಲ್ಲಿಗೆ ಬರುವಅಗತ್ಯವಿಲ್ಲ ಎಂದುಜುಮಾದಿಗುಡ್ಡೆ ನಾಗರಿಕರು ತಿಳಿಸಿದ್ದಾರೆ.
ಗುಡ್ಡ ಕುಸಿತದಿಂದ ಸುಮಾರು 45 ವರ್ಷಗಳಿಂದ ಸಂಚಾರಿಸುತ್ತಿದ್ದದಾರಿಕಡಿತಗೊಂಡಿದೆ. ಹಳೆ ರಸ್ತೆಯಿಂದಜುಮಾದಿಗುಡ್ಡೆಗೆ ಸಾಗುವ ದಾರಿಯೂ ಹದೆಗೆಟ್ಟಿದೆ. ಈ ಬಗ್ಗೆ ಮುಖ್ಯಮಂತ್ರಿ, ಗೃಹ ಸಚಿವರು, ಜಿಲ್ಲಾಉಸ್ತುವಾರಿ ಸಚಿವರು, ಸಂಸದ, ಸ್ಥಳೀಯ ಶಾಸಕ, ಜಿಲ್ಲಾಧಿಕಾರಿ, ಎಸ್ಪಿ, ತಾಪಂ, ಜಿಪಂ, ಗ್ರಾಪಂಗಳ ಅಧ್ಯಕ್ಷರು, ಸದಸ್ಯರಿಗೆ ಮನವಿ ಸಲ್ಲಿಸಿ ಬೇಡಿಕೆಈಡೇರಿಸುವಂತೆಆಗ್ರಹಿಸುತ್ತಾ ಬಂದಿದ್ದೇವೆ. ಆದರೆ ಇದು ಯಾವುದೂ ಪ್ರಾಯೋಜನವಾಗಿಲ್ಲ. ಚುನಾವಣೆಯ ಸಂದರ್ಭದಲ್ಲಿ ರಸ್ತೆ ಸರಿಮಾಡುವ ಭರವಸೆ ನೀಡುವರಾಜಕೀಯ ಪಕ್ಷಗಳ ಮುಖಂಡರು ಚುನಾವಣೆ ಬಳಿಕ ಇತ್ತ ಮುಖ ಹಾಕುವುದಿಲ್ಲ. ಈ ದಾರಿ ದುರಸ್ಥಿಗೆಂದು ಜಿಪಂನಿಂದ 45 ಸಾವಿರರೂ. ಅನುದಾನ ಬಿಡುಗಡೆಯಾಗಿದ್ದರೂ, ರಾಜಕೀಯ ಪ್ರಭಾವದಿಂದ ಅನುದಾನವನ್ನುಇನ್ನೊಂದು ರಸ್ತೆಗೆ ಬಳಸಲಾಗಿದೆ.ಆದ್ದರಿಂದ ಜುಮಾದಿಗುಡ್ಡೆಯ ಸರ್ವ ನಾಗರಿಕರು ಒಮ್ಮತದಿಂದ ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ನಾಗರಿಕ ಅಬೂಸಾಲಿ ಎಂಬವರು ಪತ್ರಿಕೆಗೆ ತಿಳಿಸಿದ್ದಾರೆ.







