ಬೆಂಗಳೂರು : ರಾಜ್ಯದ ಅಭಿವೃದ್ಧಿಗೆ ಕೇಂದ್ರ ಎಲ್ಲಾ ರೀತಿಯ ಸಹಕಾರ ನೀಡಲಿದೆ - ಅರುಣ್‌ಜೇಟ್ಲಿ

ಬೆಂಗಳೂರು.ಫೆ.3:ಮೂರು ದಿನಗಳ 'ಇನ್ವೆಸ್ಟ್‌ಕರ್ನಾಟಕ – 2016' ರ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ವೈಭವದ ಚಾಲನೆ ದೊರೆತಿದೆ. ರಾಜ್ಯದ ಅಭಿವೃದ್ಧಿಗೆ ಕೇಂದ್ರ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದು ಕೇಂದ್ರ ಸಚಿವರಾದ ಅರುಣ್‌ಜೇಟ್ಲಿ, ವೆಂಕಯ್ಯ ನಾಯ್ಡು, ನಿತಿನ್‌ಗಡ್ಕರಿ, ಅನಂತ್‌ಕುಮಾರ್ ವಾಗ್ದಾನ ನೀಡಿದ್ದಾರೆ. ರಾಜ್ಯದಲ್ಲಿ ಬಂಡವಾಳ ಹೂಡಲು ವಿಫುಲ ಅವಕಾಶಗಳಿದ್ದು, ಉದ್ದಿಮೆದಾರರು ಹೂಡಿಕೆ ಮಾಡಲು ಮುಂದಾಗಬೇಕೆಂದುಕರೆ ನೀಡಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಇನ್ವೆಸ್ಟ್‌ಕರ್ನಾಟಕ–2016 ಕ್ಕೆ ಚಾಲನೆ ನೀಡಿ ಮಾತನಾಡಿದ ಅರುಣ್‌ಜೇಟ್ಲಿ,ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ವಿಪುಲ ಅವಕಾಶಗಳಿದ್ದು, ಲಭ್ಯವಿರುವ ಮಾನವ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಬಳಿಸಿಕೊಂಡು ದೇಶದ ಸರಾಸರಿಜಿ.ಡಿ.ಪಿ ಗಿಂತ ಶೇ 2 ರಿಂದ 3 ರಷ್ಟು ಹೆಚ್ಚು ಬೆಳವಣಿಗೆ ಸಾಧಿಸುವ ಸಾಮರ್ಥ್ಯಕರ್ನಾಟಕಕ್ಕಿದೆ. ಕರ್ನಾಟಕ ದೇಶದ ಸರಾಸರಿಗಿಂತ ಮುಂದಿರಬೇಕು.ಕರ್ನಾಟಕ ಉತ್ತಮ ಸಾಮರ್ಥ್ಯ ಹೊಂದಿದ್ದು, ಕಳೆದ ಎರಡು ಮೂರು ದಶಗಳಲ್ಲಿ ರಾಜ್ಯದಚಿತ್ರಣ ಬದಲಾಗಿದೆ.ಕರ್ನಾಟಕದಲ್ಲಿಉತ್ತಮ ಶಿಕ್ಷಣ ಸಂಸ್ಥೆಗಳು, ಮೂಲ ಸೌಕರ್ಯವಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಎಲ್ಲಾ ರೀತಿಯ ಸಹಕಾರ ನೀಡಲಿದೆ. ಪ್ರಸ್ತುತ ಸ್ಪರ್ಧಾತ್ಮಕ ಒಕ್ಕೂಟ ವ್ಯವಸ್ಥೆಯಿದ್ದು, ಪ್ರತಿಯೊಂದು ರಾಜ್ಯವೂ ಸಹ ಬಂಡವಾಳ ಆಕರ್ಷಿಸಲು ಪರಸ್ಪರ ಸ್ಪರ್ಧೆಗಿಳಿಯುವ ಆರೋಗ್ಯಕರ ವಾತಾವರಣ ನಿರ್ಮಾಣವಾಗಿದೆ. ಕಳೆದ ವರ್ಷ ಹಲವಾರು ಹೂಡಿಕೆದಾರರ ಸಮಾವೇಶಗಳು ನಡೆದಿರುವುದೇಇದಕ್ಕೆ ಮೂಲ ಕಾರಣ.ಬಡತನ ನಿರ್ಮೂಲನೆ ಮತ್ತು ಆರ್ಥಿಕ ಅಭಿವೃದ್ಧಿಯೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಂತಿಮ ಉದ್ದೇಶವಾಗಿದೆ ಎಂದರು.
ಇಂತಹ ಪರಿಸ್ಥಿತಿಯಲ್ಲಿ ಸ್ಥಿರ ಸರ್ಕಾರ, ಉದ್ಯಮ ಸ್ನೇಹಿ ವಾತಾವರಣ, ಸ್ಥಿರವಾದ ರಾಜಕೀಯ ವ್ಯವಸ್ಥೆಇದ್ದರೆ ಮಾತ್ರ ಹೂಡಿಕೆದಾರರ ಮುಂದೆ ಬರುತ್ತಾರೆ.ಉದ್ದಿಮೆ ಸ್ನೇಹಿ ವಾತವರಣ ನಿರ್ಮಾಣ ಮಾಡುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಹೇಳಿದರು.
ಭಾರತ 2001, 2008 ಮತ್ತು 2015ರಲ್ಲಿ ಆರ್ಥಿಕ ಸಂಕಷ್ಟವನ್ನು ಎದುರಿಸಿ ಮುಂದೆ ಬಂದಿದೆ.ತೈಲ ಮತ್ತು ಲೋಹದ ಬೆಲೆ ಇಳಿಕೆಯಾಗಿದೆ. ಇಂತಹ ಅವಕಾಶವನ್ನು ಭಾರತ ಬಳಕೆ ಮಾಡಿಕೊಳ್ಳಬೇಕು.ಎಲ್ಲದಕ್ಕೂ ಮುನ್ನ ದೇಶದ ಆಂತರಿಕ ಆರ್ಥಿಕ ವ್ಯವಸ್ಥೆ ಬಲಗೊಳ್ಳಬೇಕು ಎಂದರು.
ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಮಾತನಾಡಿ, ಕೇಂದ್ರ ಸರ್ಕಾರ ರಾಜ್ಯದಜತೆ ನಿಲ್ಲಲಿದೆ.ಕರ್ನಾಟಕದ ಎಲ್ಲಾ ಪ್ರಯತ್ನಗಳಿಗೆ ಕೇಂದ್ರ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ.ಕೇಂದ್ರ ಮತ್ತು ರಾಜ್ಯದಲ್ಲಿ ಬೇರೆ ಬೇರೆ ಸರ್ಕಾರಗಳು ಅಧಿಕಾರದಲ್ಲಿದ್ದರೂ ಸಹ ಕಾಂಗ್ರೆಸ್ ಮತ್ತು ಬಿಜೆಪಿ ಶತ್ರುಗಳಲ್ಲ. ರಾಜಕೀಯ ಎದುರಾಳಿಗಳು.ರಾಷ್ಟ್ರದ ಅಭಿವೃದ್ಧಿ ವಿಚಾರ ಬಂದಾಗ ಪಕ್ಷ ಬೇಧ ಮಾಡುವುದಿಲ್ಲ ಎಂದರು. ಬೆಂಗಳೂರು ನಗರದ ಸಂಚಾರದಟ್ಟಣೆ ತಪ್ಪಿಸಲು ಕ್ರಮ ಕೈಗೊಳ್ಳಲಾಗುವುದು.ವರ್ತುಲ ರಸ್ತೆ, ಸಬರ್ಬನ್‌ರೈಲ್ವೆ ಮಾರ್ಗ ನಿರ್ಮಾಣ, ಮೆಟ್ರೋ ವ್ಯಾಪ್ತಿ ವಿಸ್ತರಣೆ, ಎತ್ತರಿಸಿದ ಮೇಲ್ಸೇತುವೆ ನಿರ್ಮಾಣ ಮಾಡಲುರಾಜ್ಯ ಸರ್ಕಾರಕ್ಕೆ ಅಗತ್ಯ ಸಹಕಾರ ನೀಡಲಾಗುವುದು ಎಂದು ವೆಂಕಯ್ಯ ನಾಯ್ಡು ಹೇಳಿದರು.
ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿಖಾತೆ ಸಚಿವ ನಿತಿನ್‌ಗಡ್ಕರಿ ಮಾತನಾಡಿ, ಈ ವರ್ಷಾಂತ್ಯದ ವೇಳೆಗೆ ರಾಜ್ಯದಲ್ಲಿ 60 ಸಾವಿರಕೋಟಿರೂ ವೆಚ್ಚದಲ್ಲಿ ನಾಲ್ಕು ಸಾವಿರ ಕಿ.ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕಾಮಗಾರಿಆರಂಭವಾಗಲಿದೆ. ಶಿರಾಡಿ ಘಾಟ್ ಸುರಂಗ ಮಾರ್ಗ ನಿರ್ಮಾಣಕಾಮಗಾರಿಯೂ ಸಹ ಶೀಘ್ರದಲ್ಲೇ ಆರಂಭವಾಗಲಿದೆ.ಮುಂದಿನ ವರ್ಷ 40 ಸಾವಿರಕೋಟಿರೂ ವೆಚ್ಚದ ಹೆದ್ದಾರಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು.ಮಂಗಳೂರು ಬಂದರು ವಿಸ್ತರಣೆ ಕಾಮಗಾರಿಯನ್ನು 4066 ಕೋಟಿರೂ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು ಒಟ್ಟಾರೆ ರಾಜ್ಯದಲ್ಲಿ ಹೆದ್ದಾರಿ ಮತ್ತು ಬಂದರು ವಲಯದಲ್ಲಿ 1.10 ಲಕ್ಷಕೋಟಿರೂ ಹೂಡಿಕೆ ಮಾಡಲಾಗುವುದು.ಬೆಂಗಳೂರು ನಗರದ ಸಂಚಾರ ಸಮಸ್ಯೆಗೆಉತ್ತಮ ಪರಿಹಾರ ದೊರಕಿಸಿಕೊಡುವುದಾಗಿ ವಾಗ್ದಾನ ನೀಡಿದರು.
ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತ್‌ಕುಮಾರ್ ಮಾತನಾಡಿ, ರಾಜ್ಯದಲ್ಲಿ 1.3 ದಶಲಕ್ಷಟನ್ ರಸಗೊಬ್ಬರ ಕಾರ್ಖಾನೆ ಆರಂಭಿಸಲು ಸರ್ಕಾರ ನಿರ್ಧರಿಸಿದ್ದು, ಇದಕ್ಕಾಗಿ ರಾಜ್ಯ ಸರ್ಕಾರ ಅಗತ್ಯ ಭೂಮಿ ನೀಡಬೇಕು ಎಂದು ಮನವಿ ಮಾಡಿದರು.ಇದಲ್ಲದೇ ಪ್ರತಿಟನ್ ಸಾವಯವಗೊಬ್ಬರಕ್ಕೆ 1500 ರೂ ಪ್ರೋತ್ಸಾಹಧನ ನೀಡಲಾಗುತ್ತಿದೆ.ಭಾರತ ಮುಂದಿನ ಮೂರು ವರ್ಷಗಳಲ್ಲಿ ಯೂರಿಯಾ ರಫ್ತು ದೇಶವಾಗಲಿದೆ.ಎಂದು ಹೇಳಿದರು.
ದೇಶದಲ್ಲಿ ಪ್ಲಾಸ್ಟಕ್ ತಂತ್ರಜ್ಞಾನದ ಅವಶ್ಯಕತೆಯಿದ್ದು, ಬೆಂಗಳೂರು ನಗರದಲ್ಲಿ ಇಡೀ ದೇಶದಲ್ಲೇ ಮೊದಲ ಬಾರಿಗೆ ಪ್ಲಾಸ್ಟಿಕ್ ತಂತ್ರಜ್ಞಾನ ಸಂಸ್ಥೆ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಅನಂತ್‌ಕುಮಾರ್ ಹೇಳಿದರು.







