ಮೂಡುಬಿದಿರೆ: ಮಿಜಾರ್‌ನಲ್ಲಿ ಟಿಪ್ಪರ್‌ಗಳಿಗೆ ಗ್ರಾಮಸ್ಥರಿಂದ ಎಚ್ಚರಿಕೆ
 copy.jpg)
ಮೂಡುಬಿದಿರೆ: ಮಿಜಾರು-ಇರುವೈಲು ಪ್ರದೇಶದಲ್ಲಿ ಅಧಿಕ ಭಾರ ಹೊತ್ತ ಮತ್ತು ಅತಿವೇಗದಲ್ಲಿ ಸಂಚರಿಸುವ ಟಿಪ್ಪರ್‌ಗಳನ್ನು ಬುಧವಾರ ಬೆಳಿಗ್ಗೆ ಮಿಜಾರು ಬಳಿ ತಡೆದು ಚಾಲಕರಿಗೆ ಎಚ್ಚರಿಕೆ ನೀಡಿ ಬಿಟ್ಟ ಘಟನೆ ನಡೆದಿದೆ. ಈ ಪ್ರದೇಶದಲ್ಲಿ ಸುಮಾರು 6 ಕೋರೆಗಳು ಕಾರ್ಯಾಚರಿಸುತ್ತಿದ್ದು ಇವುಗಳಲ್ಲಿ ಕೆಂಪು ಮತ್ತು ಕಪ್ಪು ಕಲ್ಲು ಕೋರೆಗಳು ಇವೆ. ಈ ರಸ್ತೆಯಲ್ಲಿ ನಿತ್ಯ ಶಾಲಾ ಮಕ್ಕಳು, ಕೂಲಿ ಕಾರ್ಮಿಕರು ದ್ವಿಚಕ್ರ ವಾಹನಗಳಲ್ಲಿ ಮತ್ತು ನಡೆದು ಕೊಂಡು ಹೋಗುತ್ತಿರುತ್ತಾರೆ. ಅಧಿಕ ಭಾರ ಹೊತ್ತ ಟಿಪ್ಪರ್‌ಗಳು ಈ ರಸ್ತೆಯಲ್ಲಿ ಅತಿವೇಗದಿಂದ ಓಡಾಡುತ್ತಿರುವುದರಿಂದ ಸಾರ್ವಜನಿಕರಿಗೆ ಹಾಗೂ ಶಾಲಾಮಕ್ಕಳಿಗೆ ತೊಂದರೆ ಆಗುತ್ತಿರುವುದನ್ನು ಮನಗಂಡ ನಾಗರಿಕ ಹಿತರಕ್ಷಣಾ ಸಮಿತಿ ಗ್ರಾಮಸ್ಥರೊಂದಿಗೆ ಸೇರಿ ಟಿಪ್ಪರ್‌ಗಳನ್ನು ತಡೆದು ಚಾಲಕರಿಗೆ ಎಚ್ಚರಿಕೆ ನೀಡಿರುತ್ತಾರೆ.
ಈ ವೇಳೆ ಟಿಪ್ಪರ್ ಚಾಲಕರೋರ್ವ ಗ್ರಾಮಸ್ಥರೊಂದಿಗೆ ಉಡಾಫೆಯಿಂದ ವರ್ತಿಸಿದ್ದು ವಿವಾದಕ್ಕೆ ಕಾರಣವಾಯಿತು. ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಸುದರ್ಶನ್ ಪೂಂಜ, ಉಪಾಧ್ಯಕ್ಷ ಸುಧಾಕರ ಪೂಂಜಾ ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು. ಗ್ರಾಮಸ್ಥರ ಎಚ್ಚರಿಕೆಯ ಹೊರತಾಗಿಯು ಟಿಪ್ಪರ್‌ಗಳು ನಿಯಮ ಉಲ್ಲಂಘಿಸಿ ಸಂಚಿರಿಸಿದರೆ ಮುಂದೆ ಪ್ರತಿಭಟನೆ ನಡೆಸಲು ಗ್ರಾಮಸ್ಥರು ನಿರ್ದರಿಸಿದ್ದಾರೆ.





