ಕೊಣಾಜೆ;ಮನುಷ್ಯನ ಬದುಕಿಗೆ ಜಾನುವಾರುಗಳ ಕೊಡುಗೆ ಅಪಾರ: ಡಾ.ಪಿ.ಉಪಾಧ್ಯ

ಮುಡಿಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಕನಕದಾಸ ಸಂಶೋಧನ ಕೇಂದ್ರದ ಪ್ರಚಾರೋಪನ್ಯಾಸ ಕಾರ್ಯಕ್ರಮದಲ್ಲಿ ಡಾ.ಶಿವರಾಮ ಶೆಟ್ಟಿ ಮಾತನಾಡಿದರು.
ಮನುಷ್ಯನ ಬದುಕಿಗೆ ಜಾನುವಾರುಗಳ ಕೊಡುಗೆ ಅಪಾರ: ಡಾ.ಪಿ.ಉಪಾಧ್ಯ
ಕೊಣಾಜೆ: ಮನುಷ್ಯನ ಬದುಕಿಗೆ ಜಾನುವಾರುಗಳ ಕೊಡುಗೆ ಆಪಾರವಾಗಿರುದರಿಂದ ಜನ-ಜಾನುವಾರುಗಳ ಸಂಬಂಧ ಸದೃಢವಾಗಲಿ ಎಂದು ಖ್ಯಾತ ಪಶುವೈಧ್ಯ ಹಾಗೂ ಬರಹಗಾರ ಡಾ. ಪಿ. ಮನೋಹರ ಉಪಾಧ್ಯ ಹೇಳಿದರು. ಅವರು ಮುಡಿಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಕನಕದಾಸ ಸಂಶೋಧನ ಕೇಂದ್ರದ ಪ್ರಚಾರೋಪನ್ಯಾಸ ಕಾರ್ಯಕ್ರಮದಲ್ಲಿ ಜನ-ಜಾನುವಾರುವಿಷಯದ ಕುರಿತು ಉಪನ್ಯಾಸ ನೀಡಿದರು. ಮನುಷ್ಯನಂತೆ ಪ್ರಾಣಿಗಳಿಗೂ ಭಾವನೆ, ಪರಸ್ಪರ ಸ್ಪಂದನೆ ಮತ್ತು ಪ್ರತಿಕ್ರಿಯೆಗಳಿವೆ. ಅವುಗಳನ್ನು ಗೌರವಯುತವಾಗಿ ಜೀವಸಲು ಅವಕಾಶ ಮಾಡಿಕೊಡುವುದು ನಮ್ಮ ಕರ್ತವ್ಯ ಮತ್ತು ಜವಾಬ್ದಾರಿ. ಸಾಕುಪ್ರಾಣಿಗಳ ಒಡನಾಟ ನಮ್ಮ ಮನಸ್ಸಿಗೆ ಶಾಂತಿಯನ್ನು ನೀಡುವ ಸುಲಭದ ದಾರಿ. ಸಾಕುಪ್ರಾಣಿಗಳನ್ನು ಕೃತಕವಾಗಿ ಬೆಳೆಸುದಕ್ಕಿಂತ, ಅವುಗಳಿಗೆ ನೈಸರ್ಗಿಕ ಪರಿಸರ ನಿರ್ಮಾಣ ಮತ್ತು ಆಹಾರ ನೀಡಿಕೆ ಅಗತ್ಯವಿದೆ ಎಂದು ಅವರು ನುಡಿದರು.
ಕನಕದಾಸ ಸಂಶೋಧನ ಕೇಂದ್ರ ಸಂಯೋಜಕ ಡಾ. ಶಿವರಾಮ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಕೇಂದ್ರದ ಉದ್ದೇಶ ಮತ್ತು ಸಮಕಾಲಿನ ಸನ್ನಿವೇಶದಲ್ಲಿ ಕನಕ ಚಿಂತನೆಯ ಅಗತ್ಯವನ್ನು ವಿವರಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ. ಗಿರಿಧರ ರಾವ್ ಅಧ್ಯಕ್ಷತೆ ವಹಿಸಿದ್ದರು. ಡಾ. ಶ್ರೀಧರ ಮಣಿಯಾಣಿ ಸ್ವಾಗತಿಸಿ, ಪ್ರೋ. ನಂದಕಿಶೋರ್ ವಂದಿಸಿದರು. ಗೌತಮಿ ಕಾರ್ಯಕ್ರಮ ನಿರ್ವಹಿಸಿದರು.





