ಬಂಟ್ವಾಳ: ಬಿಜೆಪಿ ಚುನಾವಣಾ ಕಚೇರಿ ಉದ್ಘಾಟನೆ

ಬಂಟ್ವಾಳ, ಫೆ. 3: ಬಂಟ್ವಾಳ ತಾಲೂಕು ವಾಮದಪದವು ಬಿಜೆಪಿ ವಲಯ ಸಮಿತಿಯ ಚುನಾವಣಾ ಕಚೇರಿ ವಾಮದಪದವಿನ ಸಹನಾ ಕಾಂಪ್ಲೆಕ್ಸ್‌ನಲ್ಲಿ ಬುಧವಾರ ಉದ್ಘಾಟನೆಗೊಂಡಿತು.
ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ ಸುಲೋಚನ ಜಿ.ಕೆ.ಭಟ್ ಕಚೇರಿಯನ್ನು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಸಂಗಬೆಟ್ಟು ಜಿಪಂಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ತುಂಗಪ್ಪ ಬಂಗೇರ, ವಾಮದಪದವು ಬಿಜೆಪಿ ವಲಯ ಸಮಿತಿ ಅಧ್ಯಕ್ಷ, ಗ್ರಾಪಂ ಸದಸ್ಯ ಜಯರಾಮ ಶೆಟ್ಟಿ ಕಾಪು, ಪ್ರ. ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ಪಿಲಾತಬೆಟ್ಟು ಗ್ರಾಪಂ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಕುಮಂಗಿಲ, ಇರ್ವತ್ತೂರು ಗ್ರಾಪಂ ಉಪಾಧ್ಯಕ್ಷ ಶಂಕರ ಶೆಟ್ಟಿ ಬೆದ್ರಮಾರ್, ಚೆನ್ನೈ ತ್ತೋಡಿತಾಪಂ ಬಿಜೆಪಿ ಅಭ್ಯರ್ಥಿ ಆಶಾ ಜಯರಾಮ ಶೆಟ್ಟಿ, ಪ್ರಮುಖರಾದ ಸಂಜೀವ ಶೆಟ್ಟಿ, ರಾಮ ಮಡಿವಾಳ, ವಿಜಯರೈ ಆಲದಪದವು, ಪುರುಷೋತ್ತಮ ಶೆಟ್ಟಿ ಬಾರೆಕ್ಕಿನಡೆ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
Next Story





