ಬಂಟ್ವಾಳ : ಕುಮ್ಕಿ ಹಕ್ಕು - 6ರಂದು ಸಭೆ
ಬಂಟ್ವಾಳ : ರಾಜ್ಯ ಸರಕಾರರೈತರ ಕುಮ್ಕಿ ಹಕ್ಕನ್ನು ಕಸಿಯಲು ಹೊರಟಿದೆ. ಇದರ ವಿರುದ್ಧ ಫೆ.6ರಂದು ಪುತ್ತೂರಿನ ಒಕ್ಕಲಿಗ ಯಾನೆಗೌಡ ಸಂಘದ ಸಭಾ ಭವನದಲ್ಲಿ ನಡೆಯಲಿರುವ ಕುಮ್ಕಿ ಹಕ್ಕಿಗಾಗಿ ಹೋರಾಟ ಹಾಗೂ ರೈತರಜಾಗೃತಿ ಸಮಾವೇಶ ನಡೆಯಲಿದ್ದು, ಬಂಟ್ವಾಳ ಕ್ಷೇತ್ರದಿಂದ ಸಾವಿರಕ್ಕೂಅಧಿಕ ಮಂದಿ ರೈತರುಇದರಲ್ಲಿ ಭಾಗವಹಿಸಲಿದ್ದಾರೆಎಂದುಜಿ.ಆನಂದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲೆಯಲ್ಲಿ ಮರಳು ದಂದೆಅವ್ಯಾಹತವಾಗಿ ನಡೆಯುತ್ತಿದ್ದು, ಜಿಲ್ಲಾಧಿಕಾರಿ ಹೊರರಾಜ್ಯಕ್ಕೆಅಕ್ರಮವಾಗಿ ಮರಳು ಸಾಗಾಟ ಮಾಡುವುದನ್ನು ನಿಷೇಧಿಸುವ ಬದಲು ಸ್ಥಳೀಯವಾಗಿಯೂ ಮರಳು ಸಾಗಾಟ ನಿಷೇಧಿಸಿರುವುದರಿಂದ ಜನಸಾಮಾನ್ಯರು ಹಾಗೂ ಮನೆ ನಿರ್ಮಿಸುವಜನರು ತೊಂದರೆಗೊಳಗಾಗಿದ್ದಾರೆ ಎಂದರು.
ತಾಲೂಕಿನಲ್ಲಿ ನೂರಾರು ಮಂದಿಯ ಬಿಪಿಎಲ್ ಪಡಿತರಚೀಟಿಯನ್ನು ರದ್ದುಪಡಿಸಿರುವ ಸರಕಾರದಕ್ರಮವನ್ನುತೀವ್ರವಾಗಿ ಖಂಡಿಸಿದ ಅವರು, ಈ ವ್ಯವಸ್ಥೆಯನ್ನುಜಾರಿಗೆತರುವಾಗಲೇ ಸಮರ್ಪಕವಾಗಿ ಪರಿಶೀಲಿಸದೆ ಇದೀಗ ಏಕಾಏಕಿಯಾಗಿ ಬಿಪಿಎಲ್ ಪಡಿತರರದ್ದು ಪಡಿಸುವ ಮೂಲಕ ಬಡವರಿಗೆಅನ್ಯಾಯವೆಸಗಿದೆಎಂದರು.
ಸುದ್ದಿಗೋಷ್ಟಿಯಲ್ಲಿರಾಜ್ಯಉಪಾಧ್ಯಕ್ಷೆ ಸುಲೋಚನಾ ಭಟ್, ಕ್ಷೇತ್ರ ಸಮಿತಿ ಪ್ರಧಾನ ಕಾರ್ಯದರ್ಶಿ ರಾಮದಾಸ ಬಂಟ್ವಾಳ, ಪಕ್ಷ ಪ್ರಮುಖರಾದ ದಿನೇಶ್ ಭಂಡಾರಿ, ಆನಂದಕುಲಾಲ್‌ಎಡ್ತೂರು, ಚೆನ್ನಪ್ಪಕೋಟ್ಯಾನ್, ದಿನೇಶ್‌ಅಮ್ಟೂರು ಹಾಜರಿದ್ದರು.





