ಮಂಗಳೂರು : ಇಸ್ಲಾಮಿಕ್ ದಾವಾ ಸೆಂಟರ್‌ನಿಂದ ಅಧ್ಯಯನ ಶಿಬಿರ

ಮಂಗಳೂರು, ಫೆ.3: ನಗರದ ಇಸ್ಲಾಮಿಕ್ ದಾವಾ ಸೆಂಟರ್ (ಐಡಿಸಿ)ಆಶ್ರಯದಲ್ಲಿ ಕಂಕನಾಡಿಯ ಜಂಇಯ್ಯತುಲ್ ಫಲಾಹ್ ಸಭಾಂಗಣದಲ್ಲಿ ಅಧ್ಯಯನ ಶಿಬಿರ ನಡೆಯಿತು.
ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಸಂಯುಕ್ತ ಖಾಝಿ ಹಾಗೂ ಕಾಸರಗೋಡು ಜಾಮಿಯಾ ಸಅದಿಯ ಅರಬಿಯಾದ ಪ್ರೊಫೆಸರ್ ಶೈಖುನಾ ಇಬ್ರಾಹೀಂ ಮುಸ್ಲಿಯಾರ್ ಅವರು ‘ಸತ್ಯ ಮತ್ತು ಮಿಥ’ ವಿಷಯದಲ್ಲಿ ತರಗತಿ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ರಾಜ್ಯ ಸುನ್ನೀ ಜಂಇಯ್ಯತುಲ್ ಉಲಮಾದ ಉಪಾಧ್ಯಕ್ಷ ಇಸ್ಮಾಯೀಲ್ ಮುಸ್ಲಿಯಾರ್, ಹೈದರ್ ಮದನಿ ಉಸ್ತಾದ್, ಬಾವ ಹಾಜಿ, ಶಾಕಿರ್ ಹಾಜಿ, ಜೆಪ್ಪು ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಸ್ವಾಲಿ ಹಾಜಿ, ಕಾರ್ಯದರ್ಶಿ ಮುಹಮ್ಮದ್ ಮುಲಾರಪಟ್ನ, ಹಸನ್ ಹಾಜಿ ನಂದಿಗುಡ್ಡೆ, ಐಡಿಸಿ ಸಂಚಾಲಕ ಕೆ.ಸಿ.ಸುಲೈಮಾನ್ ಎಣ್ಮೂರು ಮೊದಲಾದವರು ಉಪಸ್ಥಿತರಿದ್ದರು.
ಇಸ್ಲಾಮಿಕ್ ದಾವಾ ಸೆಂಟರ್‌ನ ಅಧ್ಯಕ್ಷ ಬಿ.ಎಂ.ರಶೀದ್ ಸಅದಿ ಬೋಳಿಯಾರ್ ಸ್ವಾಗತಿಸಿದರು.



Next Story







