Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಕುವೈಟ್ ನಿಂದ ಭಾರತೀಯರ ಏರ್ ಲಿಫ್ಟ್ :...

ಕುವೈಟ್ ನಿಂದ ಭಾರತೀಯರ ಏರ್ ಲಿಫ್ಟ್ : ಏರ್ ಇಂಡಿಯಾದ ಐತಿಹಾಸಿಕ ಕಾರ್ಯಾಚರಣೆ ಗಿನ್ನೆಸ್ ದಾಖಲೆ ಸೇರಿದ್ದು ಹೀಗೆ !

ವಾರ್ತಾಭಾರತಿವಾರ್ತಾಭಾರತಿ3 Feb 2016 10:19 PM IST
share
ಕುವೈಟ್ ನಿಂದ ಭಾರತೀಯರ ಏರ್ ಲಿಫ್ಟ್ : ಏರ್ ಇಂಡಿಯಾದ ಐತಿಹಾಸಿಕ ಕಾರ್ಯಾಚರಣೆ ಗಿನ್ನೆಸ್ ದಾಖಲೆ ಸೇರಿದ್ದು ಹೀಗೆ !

ಹೊಸದಿಲ್ಲಿ , ಫೆ. 3 : ಅಕ್ಷಯ್ ಕುಮಾರ್ ನಟಿಸಿರುವ ಏರ್ ಲಿಫ್ಟ್ ಚಿತ್ರದ ಚಿತ್ರಕತೆಯ ಬಗ್ಗೆ ವಾದ - ವಿವಾದ ನಡೆಯುತ್ತಿರುವಾಗಲೇ 90 ರ ದಶಕದಲ್ಲಿ ನಡೆದ ಆ ಬೃಹತ್ ರಕ್ಷಣಾ ಕಾರ್ಯಾಚರಣೆಯ ಬಗ್ಗೆ ಚರ್ಚೆ ನಡೆಯುತ್ತಿದೆ. ಇರಾಕ್ ದಾಳಿಯಿಂದ ಕಂಗೆಟ್ಟಿದ್ದ ಕುವೈಟ್ ನಿಂದ 1,17,000 ಕ್ಕೂ ಹೆಚ್ಚು ಭಾರತೀಯರನ್ನು ಸುರಕ್ಷಿತವಾಗಿ ಭಾರತಕ್ಕೆ ತಂದಿದ್ದು ಇವತ್ತಿಗೂ ವಿಶ್ವ ದಾಖಲೆಯಾಗಿ ಗಿನ್ನೆಸ್ ಪುಸ್ತಕದಲ್ಲಿ ದಾಖಲಾಗಿದೆ ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ಈ ಬಗ್ಗೆ ಏರ್ ಇಂಡಿಯಾದ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ಜಿತೇಂದ್ರ ಭಾರ್ಗವ ಫೇಸ್ ಬುಕ್ ನಲ್ಲಿ ವಿವರ ನೀಡಿದ್ದಾರೆ. 


ಆಗ ಏರ್ ಇಂಡಿಯಾದ ಸಾರ್ವಜನಿಕ ಸಂಪರ್ಕ ವಿಭಾಗದ ಮುಖ್ಯಸ್ಥರಾಗಿದ್ದ ಭಾರ್ಗವ ಪ್ರತಿದಿನ ಕುವೈಟ್ ನಲ್ಲಿ ಸಂತ್ರಸ್ತರಾಗಿರುವ ಭಾರತೀಯರನ್ನು ಜೋರ್ಡಾನ್ ನ ಅಮ್ಮಾನ್ ಮೂಲಕ ಎಷ್ಟು ವಿಮಾನಗಳಲ್ಲಿ ಕರೆ ತರಲಾಗುತ್ತಿದೆ ,  ಆ ವಿಮಾನಗಳು ಭಾರತದ ಯಾವ ನಗರಗಳಿಗೆ ಬಂದಿಳಿಯಲಿವೆ  ಹಾಗು ಮರುದಿನ ಎಷ್ಟು ವಿಮಾನಗಳಲ್ಲಿ ಎಷ್ಟು ಮಂದಿ ಹೊರಡಲಿದ್ದಾರೆ ಎಂಬ ವಿವರಗಳ ಪತ್ರಿಕಾ ಹೇಳಿಕೆಗಳನ್ನು ಬಿಡುಗಡೆ ಮಾಡುತ್ತಿದ್ದರು. 
ಆಗ ಗೂಗಲ್ ಆಗಲಿ ಇಮೇಲ್ ಆಗಲಿ ಇರಲಿಲ್ಲ. ಹಾಗಾಗಿ ಮುಂಬೈಯ ತಮ್ಮ ಏರ್ ಇಂಡಿಯಾ ಕಚೇರಿಯಿಂದ ಚರ್ಚ್ ಗೇಟ್ ಬಳಿ ಇರುವ ಇರೊಸ್ ಸಿನೆಮಾ ಕಾಂಪ್ಲೆಕ್ಸ್ ನ ಪುಸ್ತಕದಂಗಡಿಗೆ ಹೋಗಿ ಅಲ್ಲಿ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನ ಪ್ರತಿಯೊಂದನ್ನು ಭಾರ್ಗವ ಖರೀದಿಸಿದರು. ಅದರಲ್ಲಿ ಗಿನ್ನೆಸ್ ಪುಸ್ತಕದ ಸಂಪಾದಕ ಹಾಗು ಪ್ರಕಾಶಕನ ವಿಳಾಸ ತೆಗೆದು ಅವರಿಗೆ ಪತ್ರ ಬರೆದು ಈವರೆಗೆ ಯಾವುದಾದರು ನಾಗರಿಕ ವಿಮಾನಯಾನ ಸಂಸ್ಥೆ ಇಂತಹ ಬೃಹತ್ ಪ್ರಮಾಣದ ರಕ್ಷಣಾ ಕಾರ್ಯಾಚರಣೆ ಮಾಡಿರುವ ದಾಖಲೆ ಇದೆಯೇ ಎಂದು ಕೇಳಿದರು. 
ಎರಡು ವಾರಗಳ ಬಳಿಕ ಗಿನ್ನೆಸ್ ಪುಸ್ತಕದ ಸಂಪಾದಕನ ಉತ್ತರ ಭಾರ್ಗವರ ಕೈ ಸೇರಿತು. ಅಂತಹ ಯಾವುದೇ ದಾಖಲೆ ಅವರ ಬಳಿ ಇರಲಿಲ್ಲ. ಈ ಮಧ್ಯೆ ಕಾರ್ಯಾಚರಣೆ ಬಿರುಸಿನಿಂದ ನಡೆಯುತ್ತಿತ್ತು. ಏರ್ ಇಂಡಿಯಾ ತನಗೆ ಸಾಧ್ಯವಿರುವ ಗರಿಷ್ಟ ಸಂಖ್ಯೆಯ ವಿಮಾನಗಳನ್ನು ಕಲಿಸುವುದರ ಜೊತೆ ಆಗ ಪ್ರತ್ಯೇಕವಾಗಿದ್ದ ದೇಶಿಯ ವಿಮಾನ ಸಂಸ್ಥೆ ಇಂಡಿಯನ್ ಏರ್ ಲೈನ್ಸ್ ಹಾಗು ವಾಯು ಸೇನೆಯ ವಿಮಾನಗಳೂ ದೊಡ್ಡ ಸಂಖ್ಯೆಯಲ್ಲಿದ್ದ ಭಾರತೀಯರನ್ನು ತರಲು ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಕರಿಸಿದವು. 
ಇಡೀ ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ಭಾರ್ಗವ ಅವರು ಕಾರ್ಯಾಚರಣೆಯ ಸಂಪೂರ್ಣ ಮಾಹಿತಿಯನ್ನೊಳಗೊಂಡ ಒಂದು ವಿಸ್ತ್ರತ ವರದಿಯನ್ನು ಗಿನ್ನೆಸ್ ಸಂಪಾದಕರಿಗೆ ಕಳಿಸಿದರು. ಎಲ್ಲ ವಿವರಗಳನ್ನು ಪರಿಶೀಲಿಸಿದ ಗಿನ್ನೆಸ್ ಸಂಪಾದಕರು ಅದನ್ನು ಸ್ವೀಕರಿಸಿ ಒಪ್ಪಿಗೆ ಪತ್ರವನ್ನು ಏರ್ ಇಂಡಿಯಾಕ್ಕೆ ಕಳಿಸಿದರು. 
ಕೆಲವು ತಿಂಗಳುಗಳ ಬಳಿಕ ಏರ್ ಇಂಡಿಯಾದ ಐತಿಹಾಸಿಕ ಸಾಹಸದ ದಾಖಲೆಯನ್ನೋಳಗೊಂಡ ನೂತನ ಗಿನ್ನೆಸ್ ಪುಸ್ತಕ ಬಿಡುಗಡೆಯಾಯಿತು. ಮತ್ತೆ ಭಾರ್ಗವರು ಈ ಹಿಂದೆ ವಿಳಾಸ ಪಡೆಯಲು ಪುಸ್ತಕ ಖರೀದಿಸಿದ್ದ ಅದೇ ಪುಸ್ತಕದಂಗಡಿಗೆ ಹೋಗಿ ನೂತನ ಗಿನ್ನೆಸ್ ಪುಸ್ತಕವನ್ನು ಖರೀದಿಸಿದರು. ಆ ಸಂದರ್ಭದ ಅವರ ಪ್ರತಿಕ್ರಿಯೆ ಹೇಗಿರಬಹುದು ಎಂದು ಊಹಿಸಬಹುದು. 
ಆಗಸ್ಟ್ 13 ಹಾಗು ಅಕ್ಟೋಬರ್ 11 ,1990 ರ ನಡುವೆ ನಡೆದ ಈ ಆಸಾಮಾನ್ಯ ಕಾರ್ಯಾಚರಣೆ ಇಂದಿಗೂ ಅಳಿಸಲಾಗದ ದಾಖಲೆಯಾಗಿದೆ. ಜೋರ್ಡಾನ್ ನ  ಅಮ್ಮಾನ್ ನಿಂದ ಮುಂಬೈಗೆ 4000 ಕಿ ಮಿ ದೂರವನ್ನು ಕ್ರಮಿಸಿ ಎಲ್ಲ ಭಾರತೀಯರನ್ನು ತರಲು ಈ ಅವಧಿಯಲ್ಲಿ 488 ವಿಮಾನಗಳನ್ನು ಬಳಸಲಾಗಿತ್ತು. 
 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X