ತನ್ನದು ಬಲವಂತದ ನಿವೃತ್ತಿ:ಚಂದರ್‌ಪಾಲ್

ದುಬೈ, ಫೆ.3: ವೆಸ್ಟ್‌ಇಂಡೀಸ್ ಕ್ರಿಕೆಟ್ ಮಂಡಳಿ(ಡಬ್ಲುಐಸಿಬಿ) ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗುವಂತೆ ತನ್ನನ್ನು ಬಲವಂತ ಮಾಡಿತ್ತು ಎಂದು ವಿಂಡೀಸ್‌ನ ಮಾಜಿ ನಾಯಕ ಶಿವನಾರಾಯಣ್ ಚಂದರ್‌ಪಾಲ್ ಬಹಿರಂಗಪಡಿಸಿದ್ದಾರೆ.
ಮಾಸ್ಟರ್ಸ್ ಚಾಂಪಿಯನ್ ಲೀಗ್‌ನಲ್ಲಿ ಭಾಗವಹಿಸಲು ನಿರಾಕ್ಷೇಪಣಾ ಪತ್ರವನ್ನು ನೀಡುವ ಮೊದಲು ನಿವೃತ್ತಿಯಾಗಬೇಕೆಂದು ಕ್ರಿಕೆಟ್ ಮಂಡಳಿಯು ತನಗೆ ಒತ್ತಡ ಹೇರಿತ್ತು. ತಾನು ನಿವೃತ್ತಿ ಘೋಷಿಸದಿದ್ದರೆ ಎನ್‌ಒಸಿಯನ್ನು ಹಿಂದಕ್ಕೆ ಪಡೆಯುವುದಾಗಿಯೂ ಹೇಳಿತ್ತು ಎಂದು ಚಂದರ್‌ಪಾಲ್ ತಿಳಿಸಿದ್ದಾರೆ.
ತನಗೆ ಈಗಲೂ ಕ್ರಿಕೆಟ್‌ನಲ್ಲಿ ಆಡಬೇಕೆಂಬ ಬಯಕೆಯಿದೆ. ಮುಂಬರುವ ದೇಶೀಯ ಪಂದ್ಯಗಳಲ್ಲಿ ಆಡಲು ಎದುರು ನೋಡುತ್ತಿರುವೆ ಎಂದು ಚಂದರ್‌ಪಾಲ್ ಹೇಳಿದ್ದಾರೆ.
Next Story





