ಫಾಕ್ನರ್‌ಗೆ ಗಾಯ, ಕಿವೀಸ್ ಪ್ರವಾಸದಿಂದ ಔಟ್

ಆಕ್ಲೆಂಡ್, ಫೆ.3: ಬಲ ಮಂಡಿಗೆ ಗಾಯ ಮಾಡಿಕೊಂಡಿರುವ ಆಸ್ಟ್ರೇಲಿಯದ ಆಲ್‌ರೌಂಡರ್ ಜೇಮ್ಸ್ ಫಾಕ್ನರ್ ಪ್ರಸ್ತುತ ನಡೆಯುತ್ತಿರುವ ನ್ಯೂಝಿಲೆಂಡ್ ಪ್ರವಾಸದಿಂದ ಹೊರ ನಡೆದಿದ್ದಾರೆ.
ಬುಧವಾರ ಇಲ್ಲಿನ ಈಡನ್‌ಪಾರ್ಕ್‌ನಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದ ವೇಳೆ ಫಾಕ್ನರ್‌ಗೆ ಗಾಯವಾಗಿತ್ತು. ಆಸ್ಟ್ರೇಲಿಯ ತಂಡ ನ್ಯೂಝಿಲೆಂಡ್ ವಿರುದ್ಧ ಟ್ವೆಂಟಿ-20 ಹಾಗೂ ಟೆಸ್ಟ್ ಸರಣಿಯನ್ನು ಆಡಲಿದೆ.
ಫಾಕ್ನರ್‌ರಿಂದ ತೆರವಾದ ಜಾಗದಲ್ಲಿ ಯುವ ಆಲ್‌ರೌಂಡರ್ ಮಾರ್ಕಸ್ ಸ್ಟಾನಿಸ್ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ. ಸ್ಟಾನಿಸ್ ಈ ವರೆಗೆ ಕೇವಲ ಒಂದು ಏಕದಿನ ಪಂದ್ಯ ಆಡಿದ್ದಾರೆ
Next Story





