ವಿಶ್ವಕಪ್: ಬಾಂಗ್ಲಾದೇಶ ತಂಡ ಪ್ರಕಟ
ಢಾಕಾ, ಫೆ.3: ಭಾರತದಲ್ಲಿ ಮುಂದಿನ ತಿಂಗಳು ಆರಂಭವಾಗಲಿರುವ ಐಸಿಸಿ ಟ್ವೆಂಟಿ-20 ವಿಶ್ವಕಪ್‌ಗೆ ಬಾಂಗ್ಲಾದೇಶ ತಂಡ 15 ಸದಸ್ಯರ ತಂಡವನ್ನು ಬುಧವಾರ ಪ್ರಕಟಿಸಿದೆ.
ಬ್ಯಾಟ್ಸ್‌ಮನ್ ಮುಹಮ್ಮದ್ ಮಿಥುನ್ ಹಾಗೂ ಆಲ್‌ರೌಂಡರ್ ನಾಸಿರ್ ಹುಸೇನ್‌ಗೆ ಬುಲಾವ್ ನೀಡಲಾಗಿದೆ. ವಿಕೆಟ್‌ಕೀಪರ್-ದಾಂಡಿಗ ಮಿಥುನ್ 2014ರಲ್ಲಿ ವಿಂಡೀಸ್‌ನ ವಿರುದ್ಧ ಕೊನೆಯ ಟ್ವೆಂಟಿ-20 ಪಂದ್ಯ ಆಡಿದ್ದರು. ನಾಸಿರ್ ಕಳೆದ ತಿಂಗಳು ನಡೆದ ಝಿಂಬಾಬ್ವೆ ಸರಣಿಗೆ ವಿಶ್ರಾಂತಿ ಪಡೆದಿದ್ದರು.
ಬಾಂಗ್ಲಾದೇಶ ತಂಡ: ತಮೀಮ್ ಇಕ್ಬಾಲ್, ಸೌಮ್ಯ ಸರ್ಕಾರ್, ಮುಹಮ್ಮದ್ ಮಿಥುನ್, ಶಾಕಿಬ್ ಅಲ್ ಹಸನ್, ಮುಶ್ಫಿಕುರ್ರಹೀಂ, ಶಬ್ಬೀರ್ರಹ್ಮಾನ್, ಮಶ್ರಾಫ್ ಮುರ್ತಝಾ(ನಾಯಕ), ಮಹ್ಮೂದುಲ್ಲಾ, ನಾಸಿರ್ ಹುಸೇನ್, ನೂರುಲ್ ಹಸನ್, ಅರಾಫತ್ ಸನ್ನಿ, ಮುಸ್ತಾಫಿಝುರ್ರಹ್ಮಾನ್, ಅಲ್-ಅಮಿನ್ ಹುಸೇನ್, ತಸ್ಕ್ಕಿನ್ ಅಹ್ಮದ್ ಹಾಗೂ ಅಬೂ ಹೈದರ್.
Next Story





