ಕಲ್ಲಡ್ಕ ಗಲಭೆ, ಪೊಲೀಸರ ತಾರತಮ್ಯ ನೀತಿಗೆ ಪಾಪ್ಯುಲರ್ ಫ್ರಂಟ್ ಖಂಡನೆ
ಕಲ್ಲಡ್ಕ : ಎರಡು ವಾಹನಗಳ ನಡುವಿನ ಅಪಘಾತದ ಬಳಿಕ ನಡೆದ ಘರ್ಷನೆಯ ನಂತರ ಗುಂಪೊಂದು ವೃದ್ಧ ದಂಪತಿಯ ಮೇಲೆ ನಡೆಸಿದ ಹಲ್ಲೆ ಹಾಗೂ ಅಮಾಯಕರ ಮನೆ ಮತ್ತು ಅಂಗಡಿಗಳ ಮೇಲೆ ನಡೆಸಿದ ದೌರ್ಜನ್ಯವನ್ನು ಹಾಗೂ ಗಲಭೆಯ ನಂತರ ಪೊಲೀಸರ ತಾರತಮ್ಯವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಟಿಯಾ ಬಂಟ್ವಾಳ ತಾಲೂಕು ಸಮಿತಿಯು ಖಂಡಿಸುತ್ತದೆ.
ಗಲಭೆಯ ನಂತರ ಪೊಲೀಸರು ಅಮಾಯಕರ ಮೇಲೆ ತಮ್ಮ ದರ್ಪವನ್ನು ಪ್ರದರ್ಶಿಸುತ್ತಿದ್ದಾರಲ್ಲದೆ, ಕೇವಲ ಒಂದು ಕೋಮಿನ ಯುವಕರನ್ನು ಮಾತ್ರ ಬಂಧಿಸುತ್ತಿದ್ದಾರೆ ಇದಲ್ಲದೆ ಯುವಕರನ್ನು ಬಂಧಿಸುವ ನೆಪದಲ್ಲಿ ನಿರಪರಾಧಿ ಯುವಕರ ಮನೆಗೆ ನುಗ್ಗಿ ಮನೆಯಲ್ಲಿರುವ ಮಹಿಳೆಯರು ಹಾಗೂ ವೃದ್ಧರೊಂದಿಗೆ ಅಸಭ್ಯವಾಗಿ ವರ್ತಿಸಿ, ಜಾತಿ ನಿಂದನೆಗೆಯ್ದಿದ್ದಾರೆ ಹಾಗೂ ತಾಲೂಕಿನಲ್ಲಿ ಪ್ರಕ್ಷುಬ್ಧ ವಾತಾವರಣವನ್ನು ನಿರ್ಮಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಅರೋಪಿಸಿದೆ.
ಪೊಲೀಸರ ಈ ದ್ವಿಮುಖ ನೀತಿಯ ವಿರುದ್ಧ ಮೇಲಾಧಿಕಾರಿಗಳು ಹಾಗೂ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ತಾಲೂಕಿನಾದ್ಯಂತ ಉಗ್ರ ಹೋರಾಟವನ್ನು ನಡೆಸಲಾಗುದು ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ತಾಲೂಕು ಪ್ರಧಾನ ಕರ್ಯದರ್ಶಿ ಸಲೀಂ ಫರಂಗಿಪೇಟೆ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.





