ಬಲರಾಂ ಜಾಖಡ್ ನಿಧನ

ಹೊಸದಿಲ್ಲಿ, ಫೆ.3: ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಲೋಕಸಭೆಯ ಮಾಜಿ ಸ್ಪೀಕರ್ ಬಲರಾಂ ಜಾಖಡ್ ಬುಧವಾರ ನಿಧನರಾದರು.
ಅವರಿಗೆ 92 ವರ್ಷ ವಯಸ್ಸಾಗಿತ್ತು. ಪಂಜಾಬ್‌ನ ಎಬೋಹರ್ ಪಟ್ಟಣ ಬಳಿಯ ಹುಟ್ಟೂರು ಪಂಚಕೋಸಿಯಲ್ಲಿ ಅಂತ್ಯಕ್ರಿಯೆ ಗುರುವಾರ ಬೆಳಗ್ಗೆ 11ಕ್ಕೆ ನಡೆಯಲಿದೆ ಎಂದು ಪುತ್ರ ಸುನೀಲ್ ಜಾಖಡ್ ಪ್ರಕಟಿಸಿದ್ದಾರೆ. ಸುನೀಲ್ ಅವರು, ಕಾಂಗ್ರೆಸ್‌ನ ಪಂಜಾಬ್ ಶಾಸಕಾಂಗ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿದ್ದರು.
ವರ್ಷದ ಹಿಂದೆ ಮೆದುಳಿನ ಪಾರ್ಶ್ವವಾಯುವಿಗೆ ತುತ್ತಾಗಿದ್ದ ಬಲರಾಂ ಜಾಖಡ್‌ಗೆ ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರಿದ್ದಾರೆ.
1980ರಿಂದ 1989ರವರೆಗೆ ಜಾಖಡ್ ಲೋಕಸಭೆ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದರು. ಬಳಿಕ 2004ರ ಜೂನ್ 30ರಿಂದ 2009ರ ಮೇ 30ರವರೆಗೆ ಮಧ್ಯಪ್ರದೇಶದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು. ಪ್ರಧಾನಿ ಪಿ.ವಿ.ನರಸಿಂಹ ರಾವ್ ಸರಕಾರದಲ್ಲಿ ಇವರು ಕೃಷಿ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು.
Next Story





