ಜರ್ಮನಿಯಲ್ಲಿ ಸಿಲುಕಿರುವ ಭಾರತದ ಮಹಿಳೆಗೆ ಸುಷ್ಮಾ ಸಹಾಯ ಹಸ್ತ
ಹೊಸದಿಲ್ಲಿ, ಫೆ.3: ಜರ್ಮನಿಯಲ್ಲಿ ತನ್ನ ಮಗಳೊಂದಿಗೆ ಸಿಲುಕಿಕೊಂಡಿರುವ ಮಹಿಳೆಯೊಬ್ಬರಿಗೆ ತವರಿಗೆ ಮರಳಲು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಸಹಾಯ ಹಸ್ತ ಚಾಚಿದ್ದಾರೆ.
ಗಂಡನ ಕುಟುಂಬದ ಅವಕೃಪೆಗೆ ಒಳಗಾಗಿ ಇದೀಗ ಜರ್ಮನಿಯ ನಿರಾಶ್ರಿತ ಶಿಬಿರದಲ್ಲಿ ತನ್ನ ಏಳು ವರ್ಷದ ಮಗಳೊಂದಿಗೆ ಇರುವ ಮಹಿಳೆ ಗುರುಪ್ರೀತ್ ತಾನು ತೊಂದರೆಯಲ್ಲಿರುವ ವಿಚಾರವನ್ನು ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಟ್ವಿಟರ್ ಮೂಲಕ ತಿಳಿಸಿ, ತವರಿಗೆ ವಾಪಸಾಗಲು ಸಹಾಯ ಮಾಡುವಂತೆ ಕೇಳಿಕೊಂಡಿದ್ದರು.
ಮಹಿಳೆಯ ಮನವಿಗೆ ಸ್ಪಂದಿಸಿರುವ ಸಚಿವೆ ಸುಷ್ಮಾ ಸ್ವರಾಜ್ ಅವರು ಫ್ರಾಂಕ್‌ಫರ್ಟ್‌ನಲ್ಲಿರುವ ಭಾರತದ ದೂತವಾಸದ ಅಧಿಕಾರಿಗಳನ್ನು ಸಂಪರ್ಕಿಸಿ ಮಹಿಳೆಯ ಸಮಸ್ಯೆಯನ್ನು ಬಗೆಹರಿಸಲು ಸೂಚಿಸಿದ್ದಾರೆ.
Next Story





