ಸೆಲ್ಪಿ ತೆಗೆದು ರೈಲ್‌ನಿಂದ ಕೆಳಗೆ ಬಿದ್ದ ಯುವತಿ:ಆಸ್ಪತ್ರೆಗೆ ದಾಖಲು

ಅಲಹಾಬಾದ್: ಸೆಲ್ಫಿ ತೆಗೆಯುವ ಕ್ರೇರ್ ಇರುವವರು ಹಲವು ಸಲ ಅಪಾಯಕ್ಕೊಳಗಾಗಿದ್ದಾರೆ. ಇತ್ತೀಚಿನ ವರದಿಯಂತೆ ಉತ್ತರಪ್ರದೇಶದ ಅಲಾಹಾಬಾದ್‌ನಲ್ಲಿ ಯುವತಿಯೊಬ್ಬಳು ಸೆಲ್ಫಿ ತೆಗೆಯುವ ಚಟದಲ್ಲಿ ರೈಲ್‌ನಿಂದ ಬಿದ್ದು ಗಾಯಗೊಂಡಿದ್ದಾಳೆ.
ಬ್ರಹ್ಮಪುತ್ರ ಮೈಲ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿ ಅಲಹಾಬಾದ್‌ನ ಯಮುನ ನದಿಯ ಸೇತುವೆಯಲ್ಲಿ ರೈಲಿನಲ್ಲಿ ಸೆಲ್ಫಿ ತೆಗೆಯುತ್ತಿದ್ದಳು. ಅಷ್ಟರಲ್ಲಿ ಅವಳ ಶರೀರದ ನಿಯಂತ್ರಣ ತಪ್ಪಿಹೋಗಿದ್ದು ರೈಲಿಂದ ಕೆಳಗೆ ಬಿದ್ದಿದ್ದಳು. ಇದನ್ನು ನೋಡಿದ ಸಹ ಪ್ರಯಾಣಿಕರು ರೈಲ್‌ನ್ನು ಚೈನ್ ಎಳೆದು ನಿಲ್ಲಿಸಿದ್ದಾರೆ. ಯುವತಿಯನ್ನು ಎತ್ತಿದ್ದಾರೆ. ಅದೃಷ್ಟವಶಾತ್ ಸದ್ಯ ಅವಳು ಬದುಕಿ ಉಳಿದಿದ್ದಾಳೆ. ಆದರೆ ಗಂಭೀರ ಗಾಯಗೊಂಡ ಅವಳನ್ನು ಸ್ಥಳೀಯ ಆಸ್ಪತ್ರೆಯೊಂದಕ್ಕೆ ಸೇರಿಸಲಾಗಿದೆ. ಕೆಲವು ದಿನಗಳ ಹಿಂದೆ ಯುವಕನೊಬ್ಬ ರೈಲ್ ಬೋಗಿ ಮೇಲೆ ಹತ್ತಿ ಸೆಲ್ಫಿ ತೆಗೆದು ಹೈಟೆನ್ಷನ್ ವೈರ್‌ಗೆ ಸಿಲುಕಿ ಮೃತನಾಗಿದ್ದ. ಹುಚ್ಚು ಸಾಹಸಗಳು ಜೀವಕ್ಕೆ ಎರವಾಗುತ್ತಿವೆ. ಆದ್ದರಿಂದ ಸೆಲ್ಫಿ ಚಟ ಅಪಾಯವನ್ನು ಆಹ್ವಾನಿಸಿಕೊಳ್ಳದಿರುವಂತೆ ಎಚ್ಚರಿಕೆ ವಹಿಸಬೇಕಾಗಿದೆ.





