Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವೇಮುಲಾ ಪ್ರಕರಣ : ಸಂಘ ಪರಿವಾರದ ಢೋಂಗಿ...

ವೇಮುಲಾ ಪ್ರಕರಣ : ಸಂಘ ಪರಿವಾರದ ಢೋಂಗಿ ದಲಿತ ಓಲೈಕೆ ಬಯಲಿಗೆ

ಸುರೇಶ್ ಭಟ್  ಬಾಕ್ರಬೈಲ್ಸುರೇಶ್ ಭಟ್ ಬಾಕ್ರಬೈಲ್4 Feb 2016 8:11 PM IST
share

ಸಂಘ ಪರಿವಾರದಲ್ಲಿ ಸಂಘರ್ಷ, ದಾಂಧಲೆ, ಗೂಂಡಾಗಿರಿ, ಬೀದಿ ಕಾಳಗ ಮುಂತಾದ ನೇರ ಮುಖಾಮುಖಿ ಹೋರಾಟಗಳಿಗೆಂದೇ ಮೀಸಲಾಗಿರುವ ಕೆಲವು ಅಂಗಸಂಸ್ಥೆಗಳಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ದೇಶದ ಕೆಲವೊಂದು ಭಟ್ಟಂಗಿ ಮಾಧ್ಯಮಗಳ ಜೊತೆ ಕೈಜೋಡಿಸಿರುವ ಮೋದಿ ಸರಕಾರದ ಪ್ರಚಾರಾಂಗ ಇವೆಲ್ಲಾ ಬರೀ ಅಂಚಿನ ಗುಂಪುಗಳೆಂದು ಪ್ರಚುರಪಡಿಸಲು ಸಾಕಷ್ಟು ಪ್ರಯತ್ನಗಳನ್ನು ನಡೆಸುತ್ತಾ ಇದೆ. ವಾಸ್ತವವಾಗಿ ಸಂಘಪರಿವಾರ ಎಂಬ ಮಹಾವೃಕ್ಷವೊಂದರಲ್ಲಿ ನೂರಾರು ಶಾಖೆಗಳಿದ್ದು ಅವುಗಳನ್ನೆಲ್ಲ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ರಾಜಕೀಯ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ವಿಭಜಿಸಲಾಗಿದೆ. ಅಂಚಿನದ್ದೆನ್ನಲಾದ ಎಬಿವಿಪಿ, ಬಜರಂಗದಳ ದಂತಹ ಕಾಲಾಳು ಪಡೆಗಳು ಕೂಡಾ ಸಂಘ ಪರಿವಾರದ ಸದಸ್ಯ ಸಂಘಟನೆಗಳು ಎಂಬುದನ್ನು ಪುನಃ ಪುನಃ ಹೇಳಬೇಕಿದೆ. ಮೇ 2014ರ ತರುವಾಯ ಸಂಘ ಪರಿವಾರದ ಚಟುವಟಿಕೆಗಳು ಭಾರಿ ಬಿರುಸು ಪಡೆದುಕೊಂಡಿವೆ. ದಾಳಿ, ದಾಂಧಲೆ, ಹಲ್ಲೆ ಮುಂತಾದವುಗಳಿಗೆಂದೆ ಮೀಸಲಾಗಿರುವ ಕಾಲಾಳು ಪಡೆಗಳ ಆರ್ಭಟವಂತೂ ಮಿತಿಮೀರಿದೆ. ಮೋದಿ ಸರಕಾರದ ಕೃಪಾಛತ್ರದ ನೆರಳಲ್ಲಿ ನಡೆಯುತ್ತಿರುವ ಈ ನಾನಾ ಬಗೆಯ ಜಾತಿವಾದಿ, ಕೋಮುವಾದಿ ದುಷ್ಕೃತ್ಯಗಳಿಗೆ ಇತ್ತೀಚೆಗೆ ಸೇರ್ಪಡೆಯೆಂದರೆ ಹೈದರಾಬಾದ್ ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿಯಾಗಿದ್ದ ದಲಿತ ಯುವಕ ರೋಹಿತ್ ವೇಮುಲಾನ ಆತ್ಮಹತ್ಯೆ.

ರೋಹಿತ್‌ನ ಆತ್ಮಹತ್ಯೆಗೆ ಆತ ದಲಿತನಾಗಿದ್ದುದೆ ಕಾರಣ ಎಂಬುದನ್ನು ಮತ್ತೆ ಮತ್ತೆ ಒತ್ತಿ ಹೇಳಬೇಕಾಗಿದೆ. ಅದೇ ರೀತಿ ಮೊಹಮ್ಮದ್ ಅಖ್ಲಾಕ್‌ನ ಹತ್ಯೆಯಾದುದೂ ಆತ ಮುಸ್ಲಿಮನಾಗಿದ್ದ ಎಂಬ ಕಾರಣಕ್ಕೆ. ಇವರಿಬ್ಬರೂ ಅಪ್ಪಟ ಭಾರತೀಯರಾಗಿದ್ದರೂ ಅವರನ್ನು ಹಾಗೆ ಪರಿಗಣಿಸಲಾಗಿಲ್ಲ.

ಇವರಿಬ್ಬರ ಸಾವಿಗೆ ಕಾರಣರಾದ ತಿಳಿಗೇಡಿ ರಾಷ್ಟ್ರೀಯವಾದಿ ಗುಂಪುಗಳು ತಾವೇ ಶ್ರೇಷ್ಠರೆಂದು ಭಾವಿಸಿಕೊಂಡು ದಲಿತ, ಅಲ್ಪಸಂಖ್ಯಾತರಿಂದ ರಾಷ್ಟ್ರೀಯತೆಯ ರುಜುವಾತು ಪತ್ರ ಕೇಳುತ್ತಿರುವುದು ದುರಹಂಕಾರದ ಪರಮಾವಧಿ. ರೋಹಿತ್ ವೇಮುಲಾ ರಾಷ್ಟ್ರೀಯವಾದಿ ದಲಿತನಾಗಲು ಸುತರಾಂ ಒಪ್ಪಿರಲಿಲ್ಲ. ದಲಿತರು ಕಿರುಕುಳ, ಹಿಂಸೆ ಅನುಭವಿಸುತ್ತಿರುವ ಇತರ ಸಮುದಾಯಗಳ ಜೊತೆ ಕೈಜೋಡಿಸಬೇಕು ಎಂದಾತ ಒತ್ತಾಯಿಸುತ್ತಿದ್ದ. ಶೋಷಣೆಗೊಳಗಾದವರೆಲ್ಲರೂ ಒಂದಾಗುವುದರಿಂದಲೇ ಅವರ ಉದ್ಧಾರ ಸಾಧ್ಯ ಎಂದು ಪ್ರತಿಪಾದಿಸಿದ್ದ. ಯಾಕೂಬ್ ಮೆಮನ್‌ಗೆ ಗಲ್ಲು ಶಿಕ್ಷೆ ವಿಧಿಸಿರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ. ಮುಜಾಫರ್‌ನಗರ್ ಬಾಕಿ ಹೈ ಸಿನಿಮಾ ಪ್ರದರ್ಶನಕ್ಕೆ ತಡೆಯೊಡ್ಡಿದ ಎಬಿವಿಪಿಯ ಗೂಂಡಾಕೃತ್ಯವನ್ನು ಖಂಡಿಸಿದ್ದ. ರೋಹಿತ್‌ನ ಇಂತಹ ಸಮಾಜಮುಖಿ ಚಟುವಟಿಕೆಗಳಿಗೆ ರಾಷ್ಟ್ರವಿರೋಧಿ ಕೃತ್ಯಗಳು ಎಂಬ ಹಣೆಪಟ್ಟಿ ಕಟ್ಟಲಾಯಿತು. ಆರೆಸ್ಸೆಸ್‌ನ ಹಿರಿಯ ಪದಾಧಿಕಾರಿಯೊಬ್ಬನಂತೂ ರೋಹಿತ್ ಬಳಗವನ್ನು ರಾಷ್ಟ್ರವಿರೋಧಿಗಳೆಂದು ಕರೆದು ಇಂಥವರಿಗೆ ಹೈದರಾಬಾದ್ ವಿವಿಯಂತಹ ಶಿಕ್ಷಣಸಂಸ್ಥೆಗಳಲ್ಲಿ ಏನು ಕೆಲಸ ಎಂದು ಕೇಳುತ್ತಾನೆಂದರೆ ಇದಕ್ಕೇನು ಹೇಳಬೇಕು! ರೋಹಿತ್ ಮತ್ತು ಓರ್ವ ಎಬಿವಿಪಿ ನಾಯಕನ ಜೊತೆ ನಡೆದುದೆನ್ನಲಾದ ಕದನ ನಡೆದೇ ಇಲ್ಲವೆಂದು ಪೊಲೀಸರೆ ಹೇಳಿದ್ದಾರೆ.

ಸಂಘ ಪರಿವಾರದ ವಿದ್ಯಾರ್ಥಿ ಪದಾತಿದಳ ಆಗಿರುವ ಎಬಿವಿಪಿ ಅದರ ಕಾರ್ಯಗಳಿಗೆ ಅಡ್ಡಿಯಾದ ಸಂದರ್ಭಗಳಲ್ಲಿ ಪರಿವಾರದ ಹಿರಿಯರನ್ನು ಎಳೆತರುತ್ತದೆ. ಈಗಲಂತೂ ಕೇಂದ್ರದಲ್ಲಿ ಅವರದೆ ಸರಕಾರ ಇರುವುದರಿಂದ ಕೇಂದ್ರ ಸರಕಾರದ ಮಂತ್ರಿಗಳನ್ನೆ ಬಳಸಿಕೊಳ್ಳಲಾಗಿದೆ. ರೋಹಿತ್ ಪ್ರಕರಣದಲ್ಲಿ ಸಲ್ಲದ ಹಸ್ತಕ್ಷೇಪ ಮಾಡಿ ಅದನ್ನು ರಾಜಕೀಕರಣಗೊಳಿಸಿದವರೆಂದರೆ ಮಂತ್ರಿಗಳಾದ ಬಂಡಾರು ದತ್ತಾತ್ರೇಯ ಮತ್ತು ಸ್ಮತಿ ಇರಾನಿ. ಇಂತಹ ದುರುಳರೆಲ್ಲ ಸೇರಿ ಪರೋಕ್ಷವಾಗಿ ರೋಹಿತ್‌ನನ್ನು ಆತ್ಮಹತ್ಯೆಗೆ ದೂಡಿರುವುದರಿಂದ ಅದನ್ನು ಹತ್ಯೆಯೆಂದೆ ಕರೆಯಬೇಕಾಗುತ್ತದೆ. ತಮಾಷೆ ಏನೆಂದರೆ ಈಗ ಅದೇ ಸಂಘ ಪರಿವಾರಕ್ಕೆ ಸೇರಿದ ಮತ್ತೋರ್ವ ಮಂತ್ರಿ ವೆಂಕಯ್ಯ ನಾಯ್ಡು ಈ ಪ್ರಕರಣದಲ್ಲಿ ರಾಜಕೀಯ ಸಲ್ಲದೆಂದು ಹೇಳುತ್ತಿದ್ದಾನೆ! ಇದಕ್ಕಿಂತ ದೊಡ್ಡ ಬೂಟಾಟಿಕೆ ಇನ್ನೊಂದಿರದು. ಇತ್ತೀಚೆಗೆ ಲಕ್ನೋದಲ್ಲಿ ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಿದ ಆರೆಸ್ಸೆಸ್‌ನ ಸಹ ಕಾರ್ಯವಾಹಕ ದತ್ತಾತ್ರೇಯ ಹೊಸಬಾಳೆ, ಮುಂದಿನ ಒಂದು ವರ್ಷವನ್ನು ಸೇವಾ ವರ್ಷವೆಂದು ಪರಿಗಣಿಸಿ ಪ್ರತಿ ಗುರುವಾರದ ಬದಲು ಪ್ರತಿದಿನವೂ ದಲಿತರ ಸೇವೆ ಮಾಡಬೇಕುಎಂದು ಕರೆಕೊಟ್ಟಿದ್ದ.

ಸ್ವಯಂಸೇವಕರು ದಲಿತ ಕುಟುಂಬವನ್ನು ದತ್ತಕ್ಕೆ ತೆಗೆದುಕೊಳ್ಳಬೇಕು, ದಲಿತರ ಕೇರಿಗಳಿಗೆ ಹೋಗಿ ದಲಿತರೊಂದಿಗೆ ಸಹಭೋಜನ ಮಾಡಬೇಕೆಂದು ಆರೆಸ್ಸೆಸ್ ಹೇಳಿರುವುದಾಗಿ ವರದಿಯಾಗಿದೆ. ಇದೆಲ್ಲವೂ ದಲಿತರನ್ನು ಓಲೈಸಿ ಆ ಮೂಲಕ ಅವರನ್ನೆಲ್ಲ ತೆಕ್ಕೆಗೆ ಸೆಳೆದುಕೊಳ್ಳುವ ಮತಗಟ್ಟೆ ರಾಜಕಾರಣವಲ್ಲದೆ ಇನ್ನೇನೂ ಅಲ್ಲ. ಬಿಹಾರದ ಹೀನಾಯ ಸೋಲಿನ ನಂತರ ಮುಂಬರುವ ಉತ್ತರ ಪ್ರದೇಶ, ಪಂಜಾಬ್, ಪಶ್ಚಿಮ ಬಂಗಾಳ ಚುನಾವಣೆಗಳನ್ನು ಗುರಿಯಾಗಿಸಿ ಮಾಡಿರುವ ಪ್ಲಾನ್ ಇದಾಗಿದೆ. ಇವರ ಓಲೈಕೆ ಎಷ್ಟು ಢೋಂಗಿ ಎಂದು ತಿಳಿಯಲು ಹೆಚ್ಚು ಕಷ್ಟಪಡಬೇಕಾಗಿಲ್ಲ. ಇವರು ಹೊರತಂದ ಅಂಬೇಡ್ಕರ್ ಕುರಿತ ಹೊತ್ತಗೆಯಲ್ಲಿ ಬಾಬಾಸಾಹೇಬ್ ಹಿಂದೂ ಧರ್ಮವನ್ನು ಕಟುವಾಗಿ ಟೀಕಿಸಿದ ವಿಚಾರಕ್ಕೆ, ತಾನು ಹಿಂದೂ ಆಗಿ ಹುಟ್ಟಿದರೂ ಹಿಂದೂ ಆಗಿ ಸಾಯಲಾರೆನೆಂದು ಬೌದ್ಧ ಧರ್ಮಕ್ಕೆ ಮತಾಂತರವಾದ ವಿಚಾರಕ್ಕೆ ಮತ್ತು ಜಾತಿ ವಿನಾಶಕ್ಕೆ ಯತ್ನಿಸಿದ ವಿಚಾರಕ್ಕೆ ಸಂಬಂಧಿಸಿದ ಅಧ್ಯಾಯಗಳನ್ನು ಕೈಬಿಡಲಾಗಿರುವುದೆ ಇವರ ಢೋಂಗಿತನಕ್ಕೆ ದೊಡ್ಡ ಸಾಕ್ಷಿ! ಆದರೆ ಇದೆಲ್ಲದರ ಮಧ್ಯದಲ್ಲಿ ಧುತ್ತೆಂದು ಎದ್ದುನಿಂತ ರೋಹಿತ್ ಆತ್ಮಹತ್ಯೆ ಪ್ರಕರಣ ಸಂಘ ಪರಿವಾರದ ದಲಿತ ಓಲೈಕೆ ಕಾರ್ಯಕ್ರಮಕ್ಕೆ ತೀವ್ರ ಹಿನ್ನಡೆಯುಂಟುಮಾಡಿದೆ.

ಆದುದರಿಂದಲೆ ರೋಹಿತ್ ದಲಿತನೇ ಆಗಿದ್ದರೂ ಸಂಘ ಪರಿವಾರಿಗರು ಆತ ದಲಿತನೇ ಅಲ್ಲವೆಂದು ಸುಳ್ಳು ಹೇಳುತ್ತಿದ್ದಾರೆ. ರಾಷ್ಟ್ರೀಯ ಭದ್ರತಾ ಸಲಹೆಗಾರನಾದ ಮೋದಿ ಬಂಟ ಅಜಿತ್ ದೋವಲ್‌ಗೆ ರೋಹಿತ್ ದಲಿತನಲ್ಲ ಎಂಬ ರಹಸ್ಯ ವರದಿಗಳು ಬಂದಿವೆಯಂತೆ! ಭಟ್ಟಂಗಿ ಮಾಧ್ಯಮಗಳ ಮೂಲಕ ಇದನ್ನು ದೇಶಾದ್ಯಂತ ಬಿತ್ತರಿಸಲಾಯಿತು. ತದನಂತರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಒಂದು ಹೇಳಿಕೆ ನೀಡಿ ರೋಹಿತ್ ದಲಿತ ಅಲ್ಲ ಎಂದಿದ್ದಾಳೆ. ಬಿಜೆಪಿ ವಕ್ತಾರ ಶಾನವಾ್ ಹುಸೇನ್ ಪ್ರಕಾರ ದಲಿತೇತರನನ್ನು ದಲಿತನೆಂದು ಬಿಂಬಿಸುವ ಯತ್ನ ನಡೆಯುತ್ತಿದೆಯಂತೆ! ಅದೇನೇ ಇರಲಿ, ಈ ಪ್ರಕರಣದಲ್ಲಿ ನೇರ ಭಾಗಿಯಾದ ಇಬ್ಬರು ಮಂತ್ರಿಗಳನ್ನು ಬಚಾಯಿಸುವುದಕ್ಕೋಸ್ಕರ ಇಡೀ ಪ್ರಕರಣದ ದಿಕ್ಕು ತಪ್ಪಿಸುವ ಯತ್ನ ಇದಾಗಿದೆ ಎಂದು ನಿಶ್ಚಯವಾಗಿ ಹೇಳಬಹುದು. ನಿಜ ಸಂಗತಿ ಏನೆಂದರೆ ಸರ್ವೋಚ್ಚ ನ್ಯಾಯಾಲಯದ ತೀರ್ಪಿನಂತೆ (ರಮೇಶ್‌ಭಾಯಿ ದಭಾಯಿ ನಾಯ್ಕ ಗುಜರಾತ್ ರಾಜ್ಯ ಮತ್ತಿತರರು, 2012) ಅಂತರ್ಜಾತೀಯ ವಿವಾಹಗಳಲ್ಲಿ ಮಗುವಿನ ಜಾತಿಯನ್ನು ನಿರ್ಧರಿಸುವುದು ಆಯಾ ಪ್ರಕರಣದ ವಾಸ್ತವಾಂಶಗಳು; ಮಗು, ತನ್ನನ್ನು ಸಾಕಿಸಲಹಿದವಳು ತನ್ನ ದಲಿತ ತಾಯಿಯೆಂದು ಪುರಾವೆ ಸಹಿತ ತೋರಿಸಿಕೊಡಬಹುದು. ಇಲ್ಲಿ ರೋಹಿತ್‌ನನ್ನು ಪೂರ್ತಿಯಾಗಿ ಸಾಕಿದ ಅವನಮ್ಮ ಮಾಲಾ

ಎಂಬ ದಲಿತ ಪಂಗಡಕ್ಕೆ ಸೇರಿದವಳು; ಆದುದರಿಂದ ಆತ ದಲಿತ ಎಂಬುದರಲ್ಲಿ ಸಂಶಯವೆ ಇಲ್ಲ. ರಾಷ್ಟ್ರೀಯ ದಲಿತ ಆಯೋಗದ ಅಧ್ಯಕ್ಷರು ಕೂಡ ಇದನ್ನು ಖಚಿತಪಡಿಸಿದ್ದಾರೆ. ಕೆಲವೊಂದು ವ್ಯಕ್ತಿಗಳು ಸಂದರ್ಭಕ್ಕೆ ಅನುಸಾರವಾಗಿ ಭಾವನೆಗಳನ್ನು ಪ್ರದರ್ಶಿಸುವ ಕಲೆಯನ್ನು ಕರಗತ ಮಾಡಿಕೊಂಡಿರುತ್ತಾರೆ. ಇಂಥವರು ತಮಗೆ ಬೇಕಿದ್ದಾಗ ಕಣ್ಣೀರಿಳಿಸಬಲ್ಲರು. ಸಿನಿಕ ಮೋದಿಯಂತೂ ಸಂದರ್ಭಾನುಸಾರ ತನ್ನ ಭಾವನೆಗಳನ್ನು ಹರಿಯಬಿಡುವುದರಲ್ಲಿ ನಿಷ್ಣಾತ. ಘಟನೆ ಸಂಭವಿಸಿದ ಐದು ದಿನಗಳ ನಂತರ ಸುರಿದ ಮೊಸಳೆ ಕಣ್ಣೀರು ಅದರದೆ ಆದ ಕತೆಯನ್ನು ಹೇಳುತ್ತದೆ. ಅದು ಘಟನೆ ಸಂಭವಿಸಿದಾಕ್ಷಣ ಅಪ್ರಯತ್ನಿತವಾಗಿ ಒತ್ತರಿಸಿ ಬಂದ ದುಃಖ ಆಗಿರಲಿಲ್ಲ. ಆದರೆ ರೋಹಿತ್ ಆತ್ಮಹತ್ಯೆ ಬಗ್ಗೆ ಮೋದಿ ಕಣ್ಣಿಂದ ಬಕೆಟುಗಟ್ಟಲೆ ನೀರು ಸುರಿದರೂ ಅದು ದಲಿತರ ಮೇಲೆ ಯಾವುದೇ ಪರಿಣಾಮ ಬೀರಲಾರದು.

ಮೋದಿಯ ಕಣ್ಣೀರು ಬರೀ ಪ್ರಹಸನವೆಂಬುದು ಜನರಿಗೀಗ ಅರ್ಥವಾಗತೊಡಗಿದೆ. ಆತ ರೋಹಿತ್‌ನ ತಾಯಿಯನ್ನು ಮಾ ಭಾರತಿ (ಭಾರತ ಮಾತೆ) ಎಂದು ಕರೆದುದು ಆ ಕ್ಷಣದಲ್ಲಿ ತೆಗೆದುಕೊಂಡ ನಿರ್ಧಾರ ಆಗಿರಲಿಲ್ಲ. ಅದು ಪೂರ್ವಯೋಜಿತ ಕೆಲಸ. ಅದರ ಹಿಂದೆ ಒಂದು ಲೆಕ್ಕಾಚಾರ ಅಡಗಿದೆ. ರೋಹಿತ್‌ನನ್ನು ಮಾ ಭಾರತಿಯ ಪುತ್ರನೆಂದು ಕರೆಯುವುದರ ಹಿಂದೆ ಅವನ ದಲಿತ ಐಡೆಂಟಿಟಿಯನ್ನು ಮರೆಮಾಚುವ ಉದ್ದೇಶವಿದೆ. ಆರೆಸ್ಸೆಸ್‌ನ ಅಂಗಸಂಸ್ಥೆಗಳು ಸಾಮಾನ್ಯವಾಗಿ ಭಾರತಿ ಎಂಬ ಹೆಸರಿನಿಂದ ಕೊನೆಗೊಳ್ಳುವ ವಿಷಯವನ್ನು ಗಮನಿಸಿದರೆ ಈ ಉದ್ದೇಶ ಸ್ಪಷ್ಟವಾಗುತ್ತದೆ.

 ಇತ್ತೀಚೆಗೆ ಮೋದಿಯಾದಿಯಾಗಿ ಅನೇಕ ಕೇಸರಿ ನಾಯಕರು ಅಂಬೇಡ್ಕರರನ್ನು ಆರಾಧಿಸುವ ನಾಟಕವಾಡತೊಡಗಿದ್ದಾರೆ. ದೇಶಭಕ್ತ ಅಂಬೇಡ್ಕರ್ ಹಿಂದೂ ಧರ್ಮದಲ್ಲಿ ಭಾರಿ ನಿಷ್ಠೆ ಹೊಂದಿದ್ದರೆಂದು ಪ್ರಚಾರ ಮಾಡುತ್ತಿದ್ದಾರೆ. ಅಂಬೇಡ್ಕರ್ ಎಲ್ಲವನ್ನೂ ಸಹಿಸಿಕೊಂಡು ಬದುಕಿದರು; ತಾನು ಅನುಭವಿಸಿದ ಅವಮಾನ ಮತ್ತು ಮೂದಲಿಕೆಗಳ ಬಗ್ಗೆ ಎಂದೂ ಗೊಣಗಾಡಿದವರಲ್ಲ; ತನ್ನ ನೋವನ್ನು ಎಂದೂ ಬಹಿರಂಗವಾಗಿ ಹೇಳಿಕೊಂಡವರಲ್ಲ ಎಂದು ಮೋದಿ ಉದ್ದುದ್ದ ಭಾಷಣ ಬಿಗಿದ. ಅಭದ್ರತೆ ಕುರಿತು ಆಮೀರ್ ಖಾನ್ ನೀಡಿದ ಹೇಳಿಕೆಗಳನ್ನು ಟೀಕಿಸುವ ಸಂದರ್ಭದಲ್ಲಿ ಗೃಹಸಚಿವ ರಾಜನಾಥ್ ಸಿಂಗ್ ಸಮೇತ ಅಂಬೇಡ್ಕರರನ್ನು ಉಲ್ಲೇಖಿಸಿ ಅವರೆಂದೂ ತಾಯ್ನೆಡನ್ನು ಟೀಕಿಸಲಿಲ್ಲವೆಂದ. ಆದರೆ ಕೇಸರಿ ಪಾಳಯದ ಸುಳ್ಳುಗಳಿಗೆ ದಲಿತರು ಮೋಸ ಹೋಗಲಾರರು, ಹೋಗಬಾರದು. ಏಕೆಂದರೆ ಜಾತಿಪದ್ಧತಿ ಮತ್ತು ಮನುವಾದವನ್ನು ಎತ್ತಿಹಿಡಿಯುವ ಹಿಂದೂ ಧರ್ಮದ ಮೇಲಿನ ಸಿಟ್ಟಿನಿಂದಾಗಿಯೆ ಅಂಬೇಡ್ಕರ್ ಹಿಂದೂ ಧರ್ಮ ತೊರೆದು ಬೌದ್ಧ ಧರ್ಮವನ್ನು ಅಪ್ಪಿಕೊಂಡರೆಂಬ ಸತ್ಯ ಅವರಿಗೆ ಗೊತ್ತಿದೆ.

ಸಮಾಜ ತನ್ನ ನೈಜ ಅಂತಸ್ಥ ಸಾಮರ್ಥ್ಯವನ್ನು ತಲುಪಬೇಕಿದ್ದರೆ ಬದಲಾವಣೆ ಅಗತ್ಯವಾಗಿದ್ದು ಅದು ತುರ್ತಾಗಿ ಆಗಬೇಕೆಂಬ ಭಾವನೆಯನ್ನು ಜನರಲ್ಲಿ ಹುಟ್ಟುಹಾಕಲು ಅಸಮರ್ಥವಾದ ಕಾರಣಕ್ಕಾಗಿ ತಾನೇ ರಚಿಸಿದ ಸಂವಿಧಾನವನ್ನು ಟೀಕಿಸಲೂ ಹಿಂಜರಿಯದ ಅಂಬೇಡ್ಕರರಿಗೆ ವಂಚನೆ ಮಾಡಿರುವ ಭಾರತ ಅವರ ನಿರೀಕ್ಷೆಗಳನ್ನು ಹುಸಿಯಾಗಿಸಿದೆ. ಇವತ್ತು ರೋಹಿತ್ ಸಾವಿಗೆ ಕಣ್ಣೀರಿಳಿಸುವ ರಾಜಕೀಯ ಮುಖಂಡರು ಆತನ ನಿರೀಕ್ಷೆಗಳನ್ನು ಹುಸಿಯಾಗಿಸಿರುವಂತೆ.

share
ಸುರೇಶ್ ಭಟ್  ಬಾಕ್ರಬೈಲ್
ಸುರೇಶ್ ಭಟ್ ಬಾಕ್ರಬೈಲ್
Next Story
X