ವಿಟ್ಲ : ಫೆ. 13 ರಿಂದ 15ರ ವರಗೆ ಬಿ.ಸಿ.ರೋಡಿನ ಶ್ರೀ ಚಂಡಿಕಾಪರಮೇಶ್ವರಿ ದೇವಿ ದೇವಸ್ಥಾನ ವರ್ಷಾವಧಿ ಜಾತ್ರಾ ಮಹೋತ್ಸವ
ವಿಟ್ಲ : ಬಿ.ಸಿ.ರೋಡಿನ ಶ್ರೀ ಚಂಡಿಕಾಪರಮೇಶ್ವರಿ ದೇವಿ ದೇವಸ್ಥಾನ ವರ್ಷಾವಧಿ ಜಾತ್ರಾ ಮಹೋತ್ಸವವು ಫೆ. 13 ರಿಂದ 15 ರವರೆಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಫೆ. 13 ರಂದು ಸಂಜೆ 7ಕ್ಕೆ ಸುಮನಸ ಯಕ್ಷ ಬಳಗ ಬಂಟ್ವಾಳ ಯೋಗೀಶ್ ಅಳದಂಗಡಿ ಮಾರ್ಗದರ್ಶನದಲ್ಲಿ ಏಕಾದಶಿ ದೇವಿ ಮಹಾತ್ಮೆ ಯಕ್ಷಗಾನ, ಫೆ. 14 ರಂದು ಶ್ರೀ ಮೂಕಾಂಬಿಕಾ ಕೃಪಾ ಶ್ರೀ ರಾಮ ಭಜನಾ ಮಂಡಳಿ ಬ್ರಹ್ಮರಕೂಟ್ಲು ಇವರಿಂದ ನೃತ್ಯ ಭಜನಾ ಕಾರ್ಯಕ್ರಮ, ಫೆ. 15 ರಂದು ಬೆಳಿಗ್ಗೆ 10.30ಕ್ಕೆ ಶ್ರೀ ಪದ್ಮಶ್ರೀ ಪದ್ಮಭೂಷಣ್ ಡಾ ಕೆ. ಜೆ. ಯೇಸುದಾಸ್ ಇವರ ಶಿಷ್ಯರಾದ ಗಾನಭೂಷಣ ಶ್ರೀ ಕೆ. ವೆಂಕಟಕೃಷ್ಣ ಭಟ್ ಹಾಗೂ ಬಳಗದವರಿಂದ ಭಕ್ತಿ ರಸಮಂಜರಿ ಕಾರ್ಯಕ್ರಮ ಹಾಗೂ ರಾತ್ರಿ 8ಕ್ಕೆ ಬಲೆ ತೆಲಿಪಾಲೆ-2 ನಲ್ಲಿ ಉತ್ತಮ ಹಾಸ್ಯನಟ ಪ್ರಶಸ್ತಿ ವಿಜೇತ ಅರುಣಚಂದ್ರ ಬಿ.ಸಿ.ರೋಡು ಇವರ ಹರಿಣಿ ಕುಡ್ಲ ಕಲಾವಿದರು ಅಭಿನಯದ ವಿನಾಯಕ ಬಿ.ಸಿ.ರೋಡು ಸಾರಥ್ಯದಲ್ಲಿ ತೆಲಿಕೆದ ತಮ್ಮನ ಹಾಸ್ಯ ಪ್ರಹಸನ ನಡೆಯಲಿರುವುದು ಎಂದು ಶ್ರೀ ಕ್ಷೇತ್ರದ ಸೇವಾ ಟ್ರಸ್ಟ್ ಅಧ್ಯಕ್ಷ ಬಿ. ಸದಾನಂದ ಮಲ್ಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





