ಮೆಲ್ಕಾರ್: ಬೈಕ್‌ಗೆ ಬಸ್ ಢಿಕ್ಕಿ ಕಾಸರಗೋಡು ಯುವಕ ಸಾವು
ಬಂಟ್ವಾಳ, ಫೆ. 4: ರಾಷ್ಟ್ರೀಯ ಹೆದ್ದಾರಿ ಪಾಣೆಮಂಗಳೂರು ಗ್ರಾಮದ ನರಹರಿ ನಗರ ಬೋಳಂಗಡಿ ಚಡವಿನಲ್ಲಿಗುರುವಾರ ಸಂಜೆ ಖಾಸಗಿ ಬಸ್ಸೊಂದು ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ಚಾಲಕ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತರಾಗಿದ್ದಾರೆ.
ಕಾಸರಗೋಡು ಪೆರ್ಲ ವಾಣಿನಗರ ನಿವಾಸಿ ವಸಂತ ಬಿ.(26) ಯುವಕ ಎಂದು ಅವರಲ್ಲಿದ್ದ ಚಾಲನಾ ಪರವಾನಗಿ ಪತ್ರದ ಮೂಲಕ ಗುರುತಿಸಲಾಗಿದೆ. ಕಟೀಲು ಎರಡನೆ ಮೇಳದ ಕಲಾವಿದರಾದ ವಸಂತ ವಿಟ್ಲ ಕಾಶೀಮಠದಲ್ಲಿ ಗ್ಯಾರೇಜ್ ಹೊಂದಿದ್ದರು.ಅತಿ ವೇಗದಿಂದ ಬಂದಿದ್ದ ಬಸ್ ದ್ವಿಚಕ್ರ ಚಾಲಕನಿಗೆ ಢಿಕ್ಕಿಯಾದ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದಾಗಿ ಸ್ಥಳೀಯರು ತಿಳಿಸಿದ್ದಾರೆ.
ಘಟನೆಯ ತಕ್ಷಣ ಸಾರ್ವಜನಿಕರು ಗಾಯಾಳುವನ್ನು ತುಂಬೆ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದು ಅಲ್ಲಿಂದ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ತರಲು ನೆರವು ನೀಡಿದ್ದರು.ಮೆಲ್ಕಾರ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





