ಮಂಗಳೂರು : ಯುವಕ ನೀರು ಪಾಲು
ಮಂಗಳೂರು, ಫೆ. 4: ತಣ್ಣೀರುಬಾವಿ ಬೀಚ್‌ನಲ್ಲಿ ಚಿಕ್ಕಮಗಳೂರು ಮಲ್ಲಂದೂರಿನ ವಿಕ್ರಂ ಎಂಬಾತ ನೀರುಪಾಲಾದ ಘಟನೆ ನಡೆದಿದೆ.
ಚಿಕ್ಕಮಗಳೂರಿನ ನಂದೀಶ್ ಎಂಬವರು ಗೆಳೆಯರಾದ ವಿಕ್ರಂ, ಕಿರಣ್, ಪ್ರವೀಣ್ ಜತೆ ತಣ್ಣೀರು ಬಾವಿ ಾತಿಮಾ ಚರ್ಚ್ ಬೀಚ್‌ಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಇವರು ಸ್ನಾನ ಮಾಡಲೆಂದು ಸಮುದ್ರಕ್ಕಿಳಿದಿದ್ದಾರೆ. ಕಿರಣ್ ಹಾಗೂ ವಿಕ್ರಂ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದು ಕಿರಣ್‌ನನ್ನು ಜೀವ ರಕ್ಷಕ ದಳದವರು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ವಿಕ್ರಂ ಪತ್ತೆಯಾಗದೆ ನೀರು ಪಾಲಾಗಿದ್ದಾರೆ.
ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





