ಕಂಪೆನಿ ತೊರೆದ ಗೂಗಲ್ ಸರ್ಚ್ ಮುಖ್ಯಸ್ಥ
ಸಾನ್‌ಫ್ರಾನ್ಸಿಸ್ಕೊ, ಫೆ. 4: ಗೂಗಲ್‌ನ ಇಂಟರ್‌ನೆಟ್ ಸರ್ಚ್ ವಿಭಾಗದಲ್ಲಿ ದೀರ್ಘ ಕಾಲ ಮುಖ್ಯಸ್ಥರಾಗಿದ್ದ ಭಾರತ ಸಂಜಾತ ಅಮಿತ್ ಸಿಂಘಾಲ್, ಈ ತಿಂಗಳಲ್ಲಿ ಕಂಪೆನಿಯಿಂದ ಹೊರಬರಲಿದ್ದಾರೆ.
47 ವರ್ಷದ ಸಿಂಘಾಲ್ 2000ದಲ್ಲಿ ಗೂಗಲ್ ಸೇರಿದ್ದರು. ಗೂಗಲ್‌ನ ಮಾತೃ ಸಂಸ್ಥೆ ಆಲ್ಫಾಬೆಟ್ ಜಗತ್ತಿನ ಅತ್ಯಂತ ವೌಲಿಕ ಕಂಪೆನಿಗಳ ಪೈಕಿ ಒಂದಾಗಿ ರೂಪುಗೊಂಡ ಪ್ರಕ್ರಿಯೆಯಲ್ಲಿ ಅವರ ದೇಣಿಗೆಯೂ ಇದೆ.
‘‘ಫೆಬ್ರವರಿ 26 ಗೂಗಲ್‌ನಲ್ಲಿ ನನ್ನ ಕೊನೆಯ ದಿನವಾಗಿದೆ’’ ಎಂದು ಅವರು ಗೂಗಲ್ ಪ್ಲಸ್‌ನಲ್ಲಿ ಹಾಕಿದ ಸಂದೇಶವೊಂದರಲ್ಲಿ ಹೇಳಿದ್ದಾರೆ.
ಆಲ್ಫಾಬೆಟ್‌ನಲ್ಲಿ ‘ಕೃತಕ ಬುದ್ಧಿಮತ್ತೆ’ ವಿಭಾಗದಲ್ಲಿ ಈಗ ಕೆಲಸ ಮಾಡುತ್ತಿರುವ ಜಾನ್ ಗಿಯನಾಂಡ್ರಿಯ, ಸಿಂಘಾಲ್‌ರ ಸ್ಥಾನವನ್ನು ವಹಿಸಿಕೊಳ್ಳಲಿದ್ದಾರೆ.
Next Story





