ಟರ್ಕಿ ಗಡಿಯತ್ತ 70,000 ಸಿರಿಯ ನಿರಾಶ್ರಿತರು
ಲಂಡನ್, ಫೆ. 4: ಸಿರಿಯದ ಅಲೆಪ್ಪೊ ನಗರದಲ್ಲಿ ವಾಯು ದಾಳಿ ತೀವ್ರಗೊಳ್ಳುತ್ತಿರುವಂತೆಯೇ, ಅಲ್ಲಿನ ಸಾವಿರಾರು ನಾಗರಿಕರು ಟರ್ಕಿ ಗಡಿಯತ್ತ ಸಾಗುತ್ತಿದ್ದಾರೆ ಎಂದು ಟರ್ಕಿ ಪ್ರಧಾನಿ ಅಹ್ಮದ್ ಡವುಟೊಗ್ಲು ಗುರುವಾರ ಲಂಡನ್‌ನಲ್ಲಿ ನಡೆದ ನಿಧಿ ಸಂಗ್ರಹ ಸಮ್ಮೇಳನವೊಂದರಲ್ಲಿ ತಿಳಿಸಿದರು.
‘‘ಉತ್ತರ ಅಲೆಪ್ಪೊದ ಶಿಬಿರಗಳಲ್ಲಿರುವ 60-70 ಸಾವಿರ ಜನರು ಟರ್ಕಿಯತ್ತ ಸಾಗುತ್ತಿದ್ದಾರೆ. ನನ್ನ ಮನಸ್ಸು ಈಗ ಲಂಡನ್‌ನಲ್ಲಿಲ್ಲ, ನಮ್ಮ ಗಡಿಯಲ್ಲಿದೆ. ಸಿರಿಯದಿಂದ ಬರುತ್ತಿರುವ ಈ ಮಂದಿಗೆ ಎಲ್ಲಿ ಪುನರ್ವಸತಿ ಕಲ್ಪಿಸುವುದು ಎಂಬ ಚಿಂತೆಯಾಗಿದೆ’’ ಎಂದು ಅವರು ಹೇಳಿದರು.
Next Story





