ಕೈಗಾರಿಕಾ ಸಹಕಾರಿ ಬ್ಯಾಂಕ್ ಬದಲಾವಣೆಗೆ ಗ್ರಾಹಕರ ಆಕ್ರೋಶ-ಹಣ ವಾಪಸ್ ನೀಡಲು ಆಗ್ರಹ

ಹಾಸನ, ಫೆ.4: ಕರ್ನಾಟಕ ರಾಜ್ಯ ಕೈಗಾರಿಕಾ ಸಹಕಾರಿ ಬ್ಯಾಂಕ್‌ನವರು ಯಾರಿಗೂ ಹೇಳದೆ ಬ್ಯಾಂಕ್ ಕಟ್ಟಡವನ್ನು ಮಾರಾಟ ಮಾಡಿ ಬೇರೆಡೆಗೆ ಬದಲಾವಣೆ ಮಾಡುವ ನೆಪದಲ್ಲಿ ಗ್ರಾಹಕರ ಹಣವನ್ನು ನೀಡದೆ ಮೋಸ ಮಾಡುತ್ತಿದ್ದಾರೆ ಎಂದು ಗ್ರಾಹಕರು ಬ್ಯಾಂಕ್ ಮುಂದೆ ಜನ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಬಿ.ಎಂ. ರಸ್ತೆಯ ಸುವರ್ಣ ಹೊಟೇಲ್ ಬಳಿ ಇರುವ ಕರ್ನಾಟಕ ರಾಜ್ಯ ಕೈಗಾರಿಕಾ ಸಹಕಾರಿ ಬ್ಯಾಂಕ್ ಗ್ರಾಹಕರಿಗೆ ಸುಮಾರು ನಾಲ್ಕುವರೆ ಕೋಟಿ ರೂ. ನೀಡಬೇಕಿದ್ದು, ಕಾನೂನು ಬಾಹಿರವಾಗಿ ಬ್ಯಾಂಕ್ ಕಟ್ಟಡವನ್ನು ರಹಸ್ಯವಾಗಿ ಮಾರಾಟ ಮಾಡಿದ್ದಾರೆ. ಈ ಬಗ್ಗೆ ಪ್ರಶ್ನಿಸುತ್ತಾರೆ ಎಂಬುದನ್ನು ಅರಿತು, ಬಾಡಿಗೆ ಕಟ್ಟಡಕ್ಕೆ ಬ್ಯಾಂಕನ್ನು ಬದಲಾವಣೆ ಮಾಡಲಾಗುತ್ತಿದೆ ಎಂದು ಪೊಲೀಸ್ ಸೆಕ್ಯೂರಿಟಿಯೊಂದಿಗೆ ಬಂದಿದ್ದಾರೆ. ನಂತರ ನಗರದಲ್ಲಿ ಬ್ಯಾಂಕ್ ಬಂದ್ ಮಾಡಿ ಬೆಂಗಳೂರಿಗೆ ತೆರಳುವ ಪ್ರಯತ್ನ ನಡೆಯುತ್ತಿದೆ. ಆದರೆ ತಮ್ಮ ಹಣವನ್ನು ನೀಡದೆ ಹಣ ಕಟ್ಟಿದ ಗ್ರಾಹಕರಿಗೆ ಪಂಗನಾಮ ಹಾಕುವ ಹಿನ್ನೆಲೆಯಲ್ಲಿ ಬ್ಯಾಂಕ್ ಮುಚ್ಚಲಾಗುತ್ತಿದೆ ಎಂದು ದೂರಿದರು. ರಡು ಸಾವಿರ ಜನ ರಾಜ್ಯ ಕೈಗಾರಿಕಾ ಸಹಕಾರಿ ಬ್ಯಾಂಕ್‌ನಲ್ಲಿ ಡೆಪೋಸಿಟ್ ಮಾಡಿದ್ದಾರೆ. ನಮಗೆ ಹಣ ನೀಡಿ ನಂತರ ಬ್ಯಾಂಕ್ ಬದಲಾವಣೆೆ ಮಾಡಲಿ. ನ್ಯಾಯಾಲಯವು ಇದೇ ತಿಂಗಳು 19ಕ್ಕೆ ಹಣ ವಾಪಸ್ ನೀಡುವ ಆದೇಶ ಮಾಡಲಿದ್ದು, ಅಲ್ಲಿವರೆಗೂ ಬ್ಯಾಂಕನ್ನು ಮತ್ತೊಂದೆಡೆಗೆ ವರ್ಗಾಯಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.ವೇಳೆ ಪತ್ರಕರ್ತರು ಗ್ರಾಹಕರ ಹಣ ನೀಡುವ ಬಗ್ಗೆ ಕರ್ನಾಟಕ ರಾಜ್ಯ ಕೈಗಾರಿಕಾ ಸಹಕಾರ ಬ್ಯಾಂಕ್ ಬಿ.ಎಲ್. ಪ್ರಸನ್ನಕುಮಾರ್ ಅವರನ್ನು ಪ್ರಶ್ನಿಸಲು ಹೋದಾಗ ಸರಿಯಾದ ಉತ್ತರ ನೀಡದೆ ಜಾರಿ ಕೊಂಡರು. ಜೊತೆಯಲ್ಲಿ ಇದ್ದ ಬೆಂಗಳೂರು ಕೈಗಾರಿಕ ಸಹಕಾರ ಬ್ಯಾಂಕ್‌ನಿಂದ ಬಂದವರೆಂದು ಹೇಳಿಕೊಂಡು ಬಂದಿದ್ದ ಕೇಶವಮೂರ್ತಿ ಅವರನ್ನು ಕೇಳಿದರೆನನಗೆ ಏನು ಗೊತ್ತಿಲ್ಲ ಎಂದರು. ಸಹಕಾರ ಬ್ಯಾಂಕಿನಲ್ಲಿ ನಿಮ್ಮ ಹುದ್ದೆ ಹೆಸರು ಏನು ಎಂದು ಪ್ರಶ್ನೆ ಮಾಡಿದರೆ ಯಾವುದೇ ಹುದ್ದೆ ನೀಡಿಲ್ಲ ಎಂಬ ಸುಳ್ಳು ಹೇಳಿಕೆ ನೀಡಿ ತಪ್ಪಿಸಿಕೊಳ್ಳುವ ಉತ್ತರ ಕೇಳಿ ಬಂದಿತು.್ರಾಹಕರ ಮಾತು: ಕರ್ನಾಟಕ ರಾಜ್ಯ ಕೈಗಾರಿಕಾ ಸಹಕಾರಿ ಬ್ಯಾಂಕ್‌ನಲ್ಲಿ ಡಿಪಾಸಿಟ್ ಮಾಡಿರುವ ಗ್ರಾಹಕರು ಮಾತನಾಡಿ, ಈ ಬ್ಯಾಂಕಿನಲ್ಲಿ ಬಡವರು, ಕೂಲಿ ಕಾರ್ಮಿಕರು ಮುಂದಿನ ಮಕ್ಕಳ ಭವಿಷ್ಯಕ್ಕಾಗಿ ಹಣವನ್ನು ಡಿಪಾಸಿಟ್ ಮಾಡಿದ್ದಾರೆ. ಇಂದು ಹಣ ನೀಡದೆ ಮೋಸ ಮಾಡುವ ನಿಟ್ಟಿನಲ್ಲಿ ರಹಸ್ಯವಾಗಿ ಬ್ಯಾಂಕನ್ನು ಮೂರುವರೆ ಕೋಟಿ ರೂ ಗೆ ಮಾರಾಟ ಮಾಡಿರುವುದಾಗಿ ನಂಬಿಸುತ್ತಿದ್ದಾರೆ. ನಮಗೆ ಬ್ಯಾಂಕ್ ಕೊಟ್ಟರೆ 4 ಕೋಟಿಗೆ ನೀಡಲಿ, ನಾವು 10 ಕೊಟಿಗೆ ವ್ಯಾಪಾರ ಮಾಡುತ್ತೇವೆ. ಸರಕಾರದ ಬ್ಯಾಂಕ್ ಕಟ್ಟಡವನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡಲಾಗಿದೆ ಎಂದು ದೂರಿದರು. ನಗರದಲ್ಲಿ ಹಾಗೂ ಜಿಲ್ಲೆಯಲ್ಲಿ ಅನೇಕ ಖಾಸಗಿ ಬ್ಯಾಂಕುಗಳು ಗ್ರಾಹಕರಿಗೆ ಮೋಸ ಮಾಡುತ್ತಿದ್ದರೂ ಜನರು ಮತ್ತೆ ಮತ್ತೆ ಹೋಗಿ ಮರಳಾಗಿ ಹಣ ಹೂಡುತ್ತಿದ್ದಾರೆ. ಆದರೆ ಸರಕಾರಿ ಬ್ಯಾಂಕಿನಲ್ಲೆ ಹಣ ಕಟ್ಟಿದವರಿಗೆ ಪಂಗನಾಮ ಹಾಕುತ್ತಿ ರುವುದು ನೋಡಿದರೆ ಮುಂದಿನ ದಿನಗಳಲ್ಲಿ ಬ್ಯಾಂಕ್‌ನಲ್ಲಿ ಹಣ ಹೂಡಲು ನಂಬಿಕೆ ಕಳೆದುಕೊಳ್ಳಬಹುದು ಎಂಬುದು ಪ್ರಜ್ಞಾವಂತ ನಾಗರಿಕರ ಅಭಿಪ್ರಾಯ. ರ್ನಾಟಕ ರಾಜ್ಯ ಕೈಗಾರಿಕಾ ಸಹಕಾರಿ ಬ್ಯಾಂಕನ್ನು ವಾಣಿಜ್ಯ ಬ್ಯಾಂಕ್ ಎಂದು ಹೆಸರು ಬದಲಾಯಿಸಿ ಮಾರಾಟ ಮಾಡಲಾಗಿದೆ. ಇಲ್ಲೆ ಬ್ಯಾಂಕ್ ಉಳಿಸಿ ಇನ್ನು ಒಂದು ವರ್ಷ ಕಟ್ಟಿದ ಹಣ ತಡವಾಗಿ ನೀಡಲಿ. ಆದರೆ ಸಹಕಾರಿ ಬ್ಯಾಂಕ್ ದಿವಾಳಿಯಾಗಿದೆ ಎಂದು ನ್ಯಾಯಾಲಯಕ್ಕೆ ಮೊರೆ ಹೋಗಿ ಈಗ ಬ್ಯಾಂಕ್ ಮ್ಯಾನೇಜರ್ ದುಬಾರಿ ಕಾರಿನಲ್ಲಿ ಸುತ್ತಾಡುತ್ತಾ ಐಶಾರಾಮಿ ಜೀವನ ನಡೆಸುತ್ತಿದ್ದಾರೆ ಎಂದು ಬ್ಯಾಂಕ್‌ನ ಗ್ರಾಹಕರು ತಮ್ಮ ಅಳಲು ತೋಡಿಕೊಂಡರು.





