Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಚುಟುಕು ಸುದ್ದಿಗಳು

ಚುಟುಕು ಸುದ್ದಿಗಳು

ವಾರ್ತಾಭಾರತಿವಾರ್ತಾಭಾರತಿ4 Feb 2016 11:38 PM IST
share

ಇಂದಿನಿಂದ ದಂತ ಆರೋಗ್ಯ ಮೇಳ 
ಮಂಗಳೂರು, ಫೆ.4: ದೇರಳಕಟ್ಟೆಯ ಎ.ಬಿ.ಶೆಟ್ಟಿ ಮೆಮೋರಿಯಲ್ ಇನ್‌ಸ್ಟಿಟ್ಯೂಟ್ ಆ್ ಡೆಂಟಲ್ ಸಯನ್ಸಸ್ ವತಿಯಿಂದ ಶಾಲಾ ಮಕ್ಕಳಿಗಾಗಿ ದಂತ ಆರೋಗ್ಯ ಮೇಳವನ್ನು ೆ.5, 6ರಂದು ಆಯೋಜಿಸಲಾಗಿದೆ ಎಂದು ಸಂಸ್ಥೆಯ ಪ್ರಾಂಶುಪಾಲ ಡಾ.ಯು.ಎಸ್.ಕೃಷ್ಣ ನಾಯಕ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಿಟ್ಟೆ ವಿಶ್ವವಿದ್ಯಾನಿಲಯದ ಕಿರೀಟಪ್ರಾಯವಾಗಿರುವ ಎ.ಬಿ.ಶೆಟ್ಟಿ ಸ್ಮಾರಕ ದಂತ ಮಹಾವಿದ್ಯಾಲಯ ತನ್ನ ಮೂವತ್ತು ವರ್ಷಗಳ ಚಿಕಿತ್ಸಾ ಸೇವೆಯನ್ನು ಹಾಗೂ ಶೈಕ್ಷಣಿಕ ಸಾಧನೆಯನ್ನು ಆಚರಿಸುವ ಸಂಭ್ರಮದಲ್ಲಿದೆ. ಈ ನೆಲೆಯಲ್ಲಿ ‘ಡೆಜೆಲ್-30’ ಎಂಬ ಶೀರ್ಷಿಕೆಯಡಿಯಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದರ ಅಂತಿಮ ಆಚರಣೆಯ ಸಲುವಾಗಿ ಈ ದಂತ ಮೇಳ ಆಯೋಜಿಸಲಾಗಿದೆ ಎಂದರು.
 ಮಂಗಳೂರು ತಾಲೂಕು ಮತ್ತು ನಗರ ವ್ಯಾಪ್ತಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಲ್ಲಿ ದಂತ ಆರೋಗ್ಯದ ಕುರಿತು ಜಾಗೃತಿ ಮತ್ತು ಅರಿವು ಮೂಡಿಸಲಾಗುವುದು. ಮೇಳದ ಅಂಗವಾಗಿ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಆರೋಗ್ಯಕರ ನಗು ಸ್ಪರ್ಧೆ, ದಂತ ಆರೋಗ್ಯ ಮತ್ತು ದಂತ ಪ್ರದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನಾ ಅಧ್ಯಕ್ಷೆ ಡಾ.ಆಡ್ರಿ ಎಂ.ಡಿ’ಕ್ರೂಸ್, ಸಂಘಟನಾ ಕಾರ್ಯದರ್ಶಿ ಡಾ.ಸಹನಾ ಮಾಬೆನ್ ಉಪಸ್ಥಿತರಿದ್ದರು.

ನಾಳೆ ಹಗ್ಗ ಜಗ್ಗಾಟ ಸ್ಪರ್ಧೆ
ಮಂಗಳೂರು, ೆ.4: ಬಂಟ್ವಾಳ ತಾಲೂಕಿನ ಅನುಗ್ರಹ ಚೇಳೂರು ಇದರ ಆಶ್ರಯದಲ್ಲಿ 7+1 ಜನರ 500 ಕೆ.ಜಿ. ವಿಭಾಗದ ರಾಜ್ಯಮಟ್ಟದ ಪುರುಷರ ಹೊನಲು ಬೆಳಕಿನ ಹಗ್ಗಜಗ್ಗಾಟ ಪಂದ್ಯಾಟ ಚೇಳೂರು ಬಸ್‌ನಿಲ್ದಾಣದ ಬಳಿ ೆ.6ರಂದು ಸಂಜೆ 6ರಿಂದ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ. ನಾಳೆಯಿಂದ ಏಕಾಹ ಭಜನೆ
ಕೊಣಾಜೆ, ಫೆ.3: ಶ್ರೀ ನಾಗಬ್ರಹ್ಮ ಭಜನಾ ಮಂಡಳಿ (ರಿ) ಪಟ್ಟೋರಿ, ಕೊಣಾಜೆ ಇದರ ಆಶ್ರಯದಲ್ಲಿ 35ನೆ ವರ್ಷದ ಏಕಾಹ ಭಜನೆ ಹಾಗೂ ಭಜನಾ ಮಂಗಳೋತ್ಸವ ಕಾರ್ಯಕ್ರಮವು ಫೆ.6,7ರಂದು ಪಟ್ಟೋರಿಯ ಶ್ರೀ ನಾಗಬ್ರಹ್ಮ ಉಳ್ಳಾಲ್ತಿ ದೈವಸ್ಥಾನದಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.


ನಾಳೆಯಿಂದ ಧಾರ್ಮಿಕ ಕಾರ್ಯಕ್ರಮ
 ಕಾಞಂಗಾಡ್, ಫೆ.4: ಮರ್ಹೂಂ ಶೈಖುನಾ ಮಂಜನಾಡಿ ಉಸ್ತಾದರಿಂದ ಪ್ರಾರಂಭಿಸಲ್ಪಟ್ಟ ರಾತೀಬುಲ್ ಗೌಸಿಯತುಲ್ ಖಾದಿರಿಯ್ಯ ಹಾಗೂ ನಾಲ್ಕನೆ ಉರೂಸ್ ಮುಬಾರಕ್ ಫೆ.6,7ರಂದು ಫಝಕಡಪುರಂನಲ್ಲಿ ನಡೆಯಲಿದೆ.
ಫೆ. 6ರಂದು ಸಂಜೆ ಬುರ್ದಾ ಮಜ್ಲಿಸ್, ಧಾರ್ಮಿಕ ಪ್ರವಚನ ಹಾಗೂ ಮಖ್‌ಬರ ಝಿಯಾರತ್ ನಡೆಯಲಿದೆ. ಫೆ.7ರಂದು ರಾತ್ರಿ 7ಕ್ಕೆ ಮುಹ್ಯುದ್ದೀನ್ ಮಾಲೆ ಪಾರಾಯಾಣ ಮತ್ತು ರಾತ್ರಿ 8:30ಕ್ಕೆ ಗೌಸಿಯ್ಯ ರಾತೀಬ್ ಹಾಗೂ ಕೂಟು ಪ್ರಾರ್ಥನೆ ನಡೆಯಲಿದೆ. ಫೆ.7ರಂದು ಮಧ್ಯಾಹ್ನ 2ಕ್ಕೆ ಮಂಜನಾಡಿ ಅಲ್ ಮದೀನಾದಿಂದ ಕಾಞಂಗಾಡಿಗೆ ರ್ಯಾಲಿ ಹೊರಡಲಿದೆ ಎಂದು ಪ್ರಕಟನೆ ತಿಳಿಸಿದೆ.

ನಾಳೆ ಸತ್ಯನಾರಾಯಣ ಪೂಜೆ
 ಬಂಟ್ವಾಳ, ಫೆ.4: ನವೋದಯ ಯುವಕ ಸಂಘ(ರಿ) ಮೈರಾನ್‌ಪಾದೆ ಕಾಮಾಜೆ ಇದರ 26ನೆ ವಾರ್ಷಿಕೋತ್ಸವ ಅಂಗವಾಗಿ ಸಾರ್ವಜನಿಕ ಸತ್ಯನಾರಾಯಣ ಪೂಜೆ ಮತ್ತು ಸಭಾ ಕಾರ್ಯಕ್ರಮ ನವೋದಯ ರಂಗ ಮಂದಿರದಲ್ಲಿ ಫೆ.6ರಂದು ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಜಗದೀಶ ಕಾಮಾಜೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

 ನಾಳೆಯಿಂದ ‘ಸಮರ್ಪಣ್’ಕಾರ್ಯಕ್ರಮ
ಮಂಗಳೂರು, ಫೆ.4: ಮಂಗಳೂರಿನ ನೃತ್ಯ ಸಂಸ್ಥೆ ನೃತ್ಯಾಂಗನ್ ವತಿಯಿಂದ ೆ.6,7ರಂದು ‘ನೃತ್ಯೋತ್ಸವ ಸಮರ್ಪಣ್’ ಕಾರ್ಯಕ್ರಮವನ್ನು ನಗರದ ಡಾನ್‌ಬಾಸ್ಕೋ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ನಿರ್ದೇಶಕಿ ರಾಧಿಕಾ ಶೆಟ್ಟಿ ತಿಳಿಸಿದ್ದಾರೆ. ನೃತ್ಯ ಗುರು ಚಂದ್ರಶೇಖರ ಕಾರ್ಯಕ್ರಮ ಉದ್ಘಾಟಿಸುವರು ಎಂದರು. ೆ.6ರಂದು ಸಂಜೆ 5:30ಕ್ಕೆ ನೃತ್ಯಾಂಗನ್ ಸಂಸ್ಥೆಯ ವಿದ್ಯಾರ್ಥಿಗಳಾದ ಅಂಜಲಿ ಪಿಲಿಕುಡೇಲ್ ಹಾಗೂ ತನ್ಮಯಿ ಆಳ್ವ ಭರತನಾಟ್ಯ ಪ್ರದರ್ಶಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಭರತನಾಟ್ಯ ಕಲಾವಿದೆ ದೀಪಾ ಸಂತೋಷ್, ಸಂಗೀತಾ ಮಯ್ಯ ಉಪಸ್ಥಿತರಿದ್ದರು.


ಅಡ್ಯಾರು ಕಣ್ಣೂರು ಮಸೀದಿಗೆ ಪದಾಧಿಕಾರಿಗಳ ಆಯ್ಕೆ
ಬಂಟ್ವಾಳ, ಫೆ.4: ಅಡ್ಯಾರು-ಕಣ್ಣೂರು ಕುಂಡಾಲ ಜನ್ನತುಲ್ ಉಲೂಂ ಮಸೀದಿ ಮತ್ತು ಮದ್ರಸದ 2016ನೆ ಸಾಲಿಗೆ ಪದಾಧಿಕಾರಿಗಳ ಆಯ್ಕೆಯು ಇತ್ತೀಚೆಗೆ ಅಬ್ದುರ್ರಶೀದ್ ಹನೀಫಿ ಅಧ್ಯಕ್ಷತೆಯಲ್ಲಿ ನಡೆಯಿತು.
ಅಧ್ಯಕ್ಷರಾಗಿ ರಫೀಕ್ ಇ.ಕೆ., ಗೌರವಾಧ್ಯಕ್ಷರಾಗಿ ಅಬ್ದುಲ್ ಹಮೀದ್, ಉಪಾಧ್ಯಕ್ಷರಾಗಿ ಅಶ್ರಫ್ ಕೆ.ಎಸ್.ಎಚ್., ಕಾರ್ಯದರ್ಶಿಯಾಗಿ ಅಬ್ದುಲ್ ಹಕೀಂ, ಜೊತೆ ಕಾರ್ಯದರ್ಶಿಯಾಗಿ ಅಬ್ದುರ್ರಶೀದ್, ಕೋಶಾಧಿಕಾರಿಯಾಗಿ ಅಬ್ದುಲ್ ನಝೀರ್ ಎನ್.ಆರ್., ಸದಸ್ಯರಾಗಿ ಬಾವ ಹಾಜಿ, ಅಬ್ದುಲ್ ಖಾದರ್, ಅಬ್ದುರ್ರಝಾಕ್, ಪುತ್ತು ಬಾವ, ಮರ್ಝೂಕ್, ರಿಯಾಝ್, ನಿಯಾಝ್ ಆಯ್ಕೆಯಾಗಿದ್ದಾರೆ.


ಸಂತಾಪ ಸಭೆ
ಉಡುಪಿ, ಫೆ.4: ಉದ್ಯಾವರ ಫ್ರೆಂಡ್ಸ್ ಸರ್ಕಲ್‌ನ ವತಿಯಿಂದ ಇತ್ತೀಚೆಗೆ ಅಗಲಿದ ಸಂಸ್ಥೆಯ ನಿರ್ದೇಶಕ ಯು.ಎ.ಆಝೀಝ್‌ರಿಗೆ ಸಂತಾಪ ಸೂಚಕ ಸಭೆ ನಡೆಯಿತು.
 ಸಂಸ್ಥೆಯ ನಿರ್ದೇಶಕರಾದ ಉದ್ಯಾವರ ನಾಗೇಶ ಕುಮಾರ್, ಅಬ್ದುಲ್ ಜಲೀಲ್ ಸಾಹೇಬ್, ಚಂದ್ರಾವತಿ ಭಂಡಾರಿ, ಶರತ್ ಕುಮಾರ್, ಗ್ರಾಪಂ ಅಧ್ಯಕ್ಷೆ ಸುಗಂಧಿ ಶೇಖರ್, ತಾಪಂ ಸದಸ್ಯೆ ಗಿರೀಶ್‌ಕುಮಾರ್, ಸದಸ್ಯರಾದ ಶೇಖರ ಕೋಟ್ಯಾನ್, ಲೋರೆನ್ಸ್ ಡೇಸಾ ಅಗಲಿದ ಅಝೀಝ್ ಸಾಹೇಬರಿಗೆ ನುಡಿ ನಮನ ಸಲ್ಲಿಸಿದರು.
 ಅಧ್ಯಕ್ಷ ಯು.ಆರ್.ಚಂದ್ರಶೇಖರ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ತಿಲಕರಾಜ್ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಮೂಡುಬಿದಿರೆ: ಜಿ.ವಿ.ಪೈ ಆಸ್ಪತ್ರೆಯ ಬ್ಲಾಕ್ ಉದ್ಘಾಟನೆ
ಮೂಡುಬಿದಿರೆ, ಫೆ.4: ಇಲ್ಲಿನ ಜಿ.ವಿ.ಪೈ ಚಾರಿಟೇಬಲ್ ಟ್ರಸ್ಟ್‌ನ ಜಿ.ವಿ.ಪೈ ಮೆಮೋರಿಯಲ್ ಆಸ್ಪತ್ರೆಯ ನೂತನ ಬ್ಲಾಕ್‌ನ ವಿಸ್ತರಣಾ ಕಟ್ಟಡದ ಉದ್ಘಾಟನೆ ಇತ್ತೀಚೆಗೆ ಆಸ್ಪತ್ರೆಯ ಆವರಣದಲ್ಲಿ ಜರಗಿತು. ಟ್ರಸ್ಟ್‌ನ ಉಪಾಧ್ಯಕ್ಷ ಸಂಪತ್ ಡಿ. ಸಾಮ್ರಾಜ್ಯ, ಕೋಶಾಧಿಕಾರಿ ಪಿ.ಸದಾನಂದ ಭಟ್, ಕಾರ್ಯದರ್ಶಿ ಡಾ. ಹರೀಶ್ ನಾಯಕ್, ಟ್ರಸ್ಟಿಗಳಾದ ಸಿ.ಎಚ್.ಗಫೂರ್, ಎಸ್. ಮನೋಜ್ ಶೆಣೈ, ಜಿ.ನಾಗೇಶ ಪೈ ಮತ್ತಿತರರು ಉಪಸ್ಥಿತರಿದ್ದರು. ಮುಂದಿನ ದಿನಗಳಲ್ಲಿ ಆಸ್ಪತ್ರೆಯ ಈಗಿನ ಕಟ್ಟಡವಿರುವ ಸ್ಥಳದಲ್ಲಿ ನೂತನ ಸುಸಜ್ಜಿತ ಕಟ್ಟಡವನ್ನು ನಿರ್ಮಿಸುವ ಯೋಜನೆ ಇದೆ ಎಂದು ಟ್ರಸ್ಟ್‌ನ ಪದಾಧಿಕಾರಿಗಳು ತಿಳಿಸಿದ್ದಾರೆ.


ಫೆ.8: ಕುಮ್ಕಿ ಜಮೀನುದಾರರ ಸಭೆ
ಬೆಳ್ತಂಗಡಿ, ಫೆ.4: ಶತಮಾನಗಳಿಂದ ಕುಮ್ಕಿ ಸ್ಥಳದಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಕರ್ನಾಟಕ ಸರಕಾರ ವಂಚಿಸಲು ಹೊರಟಿದೆ. ಹೀಗಾಗಿ ಜಿಲ್ಲೆಯ ಪ್ರತಿಯೊಬ್ಬ ಕುಮ್ಕಿ ಭೂಮಿ ಹಕ್ಕುದಾರರು ತಮ್ಮ ಭೂ ಹಿಡುವಳಿಯನ್ನು ಉಳಿಸಿಕೊಳ್ಳಲು ಹಾಗೂ ಭೂ ದಾಖಲಾತಿ ಮತ್ತು ಇತರ ಅಗತ್ಯವಾದ ದಸ್ತಾವೇಜುಗಳ ಮಾಹಿತಿಯನ್ನು ನೀಡುವುದಕ್ಕಾಗಿ ಫೆ.8ರಂದು ಗುರುವಾಯನಕರೆ ಹವ್ಯಕ ಭವನದಲ್ಲಿ ಸಭೆಯನ್ನು ಕರೆಯಲಾಗಿದ್ದು, ರೈತರು ತಮ್ಮ ಭೂ ದಾಖಲಾತಿಯೊಂದಿಗೆ ಅಂದು ಸಭೆಗೆ ಹಾಜರಾಗುವಂತೆ ಭಾರತೀಯ ಕಿಸಾನ್ ಸಂಘದ ಕುಮ್ಕಿ ಹೋರಾಟ ಸಮಿತಿಯ ಎಂ.ಜಿ. ಸತ್ಯನಾರಾಯಣ ಭಟ್ ತಿಳಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನಲ್ಲಿ 2011ರಂತೆ 1,31,262 ಪಹಣಿ ಪತ್ರಗಳಿದ್ದು, ಅದರಲ್ಲಿ 43,821.44 ಎಕರೆ ಕುಮ್ಕಿ ಜಮೀನಿದೆ. ರೈತರಿಗೆ ಕುಮ್ಕಿ ವಿಚಾರವಾಗಿ ಅಂದು ಪೂರ್ವಾಹ್ನ 11 ಗಂಟೆಗೆ ಭಾರತೀಯ ಕಿಸಾನ್ ಸಂಘದ ಕಾರ್ಯಕರ್ತರು ಮಾಹಿತಿ ನೀಡಲಿದ್ದಾರೆ.

ಸೇವಂತಿಗುಡ್ಡೆ: ಮನೆ ಹಸ್ತಾಂತರ
 ಉಳ್ಳಾಲ, ಫೆ.4: ತೊಕ್ಕೊಟ್ಟು ಸಮೀಪದ ಬಬ್ಬುಕಟ್ಟೆ ಸೇವಂತಿಗುಡ್ಡೆಯಲ್ಲಿ ಕಳೆದ ಬಾರಿಯ ಮಳೆಗೆ ಹಾನಿಯಾದ ರಾಜೇಶ್ ಪೆಟ್ರಿಶಿಯಾ ಪಾಯ್ಸಿರಿಗೆ ಯುನೈಟೆಡ್ ಕೆಥೊಲಿಕ್ ಅಸೋಸಿಯೇಶನ್ ವತಿಯಿಂದ 6 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ನೂತನ ಮನೆಯನ್ನು ಹಸ್ತಾಂತರಿಸಲಾಯಿತು.ಸಂತ ಸೆಬಾಸ್ಟಿಯನ್ನರ ಚರ್ಚ್‌ನ ಧರ್ಮಗುರು ರೆ ಫಾ ಜೆ.ಬಿ.ಸಲ್ದಾನ, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಲೂಕಾಸ್ ಡಿಸೋಜ, ಅಕ್ಷರ ಸಂತ ಹರೇಕಳ ಹಾಜಬ್ಬ, ಯುನೈಟೆಡ್ ಕೆಥೊಲಿಕ್ ಅಸೋಸಿಯೇಶನ್‌ನ ಅಧ್ಯಕ್ಷ ಆಲ್ಬನ್ ಡಿಸೋಜ, ಉಪಾಧ್ಯಕ್ಷ ಫ್ರಾನ್ಸಿಸ್ ಡಿಕೋಸ್ಟಾ, ಕಟ್ಟಡದ ಗುತ್ತಿಗೆದಾರ ಪಿಯೂಷ್ ಮೊಂತೇರೋ, ಗುರಿಕಾರ ಜೋಸೆಫ್ ಡೇಸಾ, ಅಸೋಸಿಯೇಶನ್‌ನ ದಕ್ಷಿಣ ವಲಯ ಪಾಸ್ಕಲ್ ಪಾವ್ಲ್ ಡಿಸೋಜ, ಸದಸ್ಯ ರೋಬರ್ಟ್ ರೊಸಾರಿಯೊ ಮತ್ತಿತರರು ಉಪಸ್ಥಿತರಿದ್ದರು.


ಮಲ್ಲಿಪಾಡಿ ದೇವಸ್ಥಾನದಲ್ಲಿ ಬ್ರಹ್ಮಕಲಶ
ಬೆಳ್ತಂಗಡಿ, ಫೆ.4: ತಾಲೂಕಿನ ಪಡಂಗಡಿ ಗ್ರಾಮದ ಪುರಾತನ ಮಲ್ಲಿಪಾಡಿ ಶ್ರೀ ಸದಾಶಿವ ದೇವಸ್ಥಾನವು 1.5 ಕೋ.ರೂ. ವೆಚ್ಚದಲ್ಲಿ ಸಂಪೂರ್ಣ ಶಿಲಾಮಯವಾಗಿ ಪುನರ್‌ನಿರ್ಮಾಣವಾಗಿದ್ದು, ಫೆ.8ರಿಂದ 12ರವರೆಗೆ ಬ್ರಹ್ಮಕಲಶ ನಡೆಯಲಿದೆ ಎಂದು ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಕೆ.ಎಸ್.ಯೋಗೀಶ್ ಕುಮಾರ್ ನಡಕ್ಕರ ತಿಳಿಸಿದ್ದಾರೆ.ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯ ಸಾರಥ್ಯದಲ್ಲಿ, ಮುಂಡೂರು ಬ್ರಹ್ಮಶ್ರೀ ಗೋಪಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ನಡೆಯುವ ಬ್ರಹ್ಮಕಲಶೋತ್ಸವದ ಯಶಸ್ವಿಗೆ 24 ಸಮಿತಿಗಳನ್ನು ರಚಿಸಲಾಗಿದೆ. ಬ್ರಹ್ಮಕಲಶೋತ್ಸವ ಸಂದರ್ಭ ನಡೆಯುವ ಧಾರ್ಮಿಕ ಸಭೆಗಳಲ್ಲಿ ಕನ್ಯಾಡಿ ಬ್ರಹ್ಮಾನಂದ ಸರಸ್ವತಿ ಶ್ರೀ, ಒಡಿಯೂರು ಗುರುದೇವಾನಂದ ಶ್ರೀ, ಮೂಡುಬಿದಿರೆ ಭಟ್ಟಾರಕ ಚಾರುಕೀರ್ತಿಶ್ರೀ, ಡಾ. ವೀರೇಂದ್ರ ಹೆಗ್ಗಡೆ, ಮಾಣಿಲ ಮೋಹನದಾಸ ಪರಮಹಂಸಶ್ರೀ ಭಾಗವಹಿಸಿ ಆಶೀರ್ವದಿಸಲಿದ್ದಾರೆ. ಗೌರವ ಸಲಹೆಗಾರ ರತನ್ ಕುಮಾರ್ ಜೈನ್, ಉಪಾಧ್ಯಕ್ಷ ಸುಕೇಶ್ ಕುಮಾರ್ ಕಡಂಬು, ಪ್ರಧಾನ ಕಾರ್ಯದರ್ಶಿ ಜಗದೀಶ್ ಗೌಡ, ಜತೆ ಕಾರ್ಯದರ್ಶಿ ಚಂದ್ರಕಾಂತ ಜೈನ್, ಆಡಳಿತ ಮೊಕ್ತೇಸರ ಅಮರನಾಥ ಹೆಗ್ಡೆ, ಟ್ರಸ್ಟಿಗಳಾದ ಮೀನಾಕ್ಷಿ, ಉದಯವರ್ಮ, ಆರ್ಥಿಕ ಮತ್ತು ಕಲಶ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ಜೈನ್, ಆಮಂತ್ರಣ ಮತ್ತು ಪ್ರಚಾರ ಸಮಿತಿ ಅಧ್ಯಕ್ಷ ವಿತೇಶ್ ಕುಮಾರ್ ಉಪಸ್ಥಿತರಿದ್ದರು.

ಹಿರಾ ಮಹಿಳಾ ಕಾಲೇಜು: ವಿಚಾರ ಸಂಕಿರಣ
ಮಂಗಳೂರು, ಫೆ.4: ಸ್ವಾಮಿ ವಿವೇಕಾನಂದರ ಜನ್ಮ ಜಯಂತಿಯ ಪ್ರಯುಕ್ತ ‘ವಿವೇಕಾನಂದರ ಜೀವನ ಮತ್ತು ಬೋಧನೆಗಳ’ ಕುರಿತು ಇತ್ತೀಚೆಗೆ ಹಿರಾ ವಿಮೆನ್ಸ್ ಸಭಾಂಗಣದಲ್ಲಿ ವಿಚಾರ ಸಂಕಿರಣ ನಡೆಯಿತು.
  
  ಕಾಲೇಜಿನ ಪ್ರಾಂಶುಪಾಲೆ ಭಾರತಿ ಎಂ.ಆರ್.ಪ್ರಾತ್ಯಕ್ಷಿಕೆ ಮೂಲಕ, ಸ್ವಾಮಿ ವಿವೇಕಾನಂದರು ಯುವ ಜನಾಂಗಕ್ಕೆ ನೀಡಿದ ಬೋಧನೆ ಹಾಗೂ ಮಹಿಳಾ ಸಬಲೀಕರಣದ ಬಗ್ಗೆ ಬೆಳಕು ಚೆಲ್ಲಿದರು. ವಿದ್ಯಾರ್ಥಿನಿ ಜಹಾದಾ ಕಿರಾಅತ್ ಪಠಿಸಿದರು. ರವೀನಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಸನ್‌ಶೈನ್ ಫ್ರೆಂಡ್ಸ್ ಅಧ್ಯಕ್ಷರಾಗಿ ಇಬ್ರಾಹೀಂ ಅಡ್ಡೂರು ಆಯ್ಕೆ
ಮಂಗಳೂರು, ಫೆ.4: ಅಡ್ಡೂರಿನ ಸನ್‌ಶೈನ್ ಫ್ರೆಂಡ್ಸ್‌ನ 16ನೆ ವಾರ್ಷಿಕಮಹಾ ಸಭೆಯಲ್ಲಿ ಇಬ್ರಾಹೀಂ ಅಡ್ಡೂರು ಅವರನ್ನು ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ಇಕ್ಬಾಲ್ ಎಂ., ಉಪಾಧ್ಯಕ್ಷರಾಗಿ ಇಕ್ಬಾಲ್ ಜಿ.ಎ., ಕೋಶಾಧಿಕಾರಿಯಾಗಿ ನೂರುಲ್ ಅಮೀನ್, ಪ್ರಧಾನ ಕಾರ್ಯದರ್ಶಿಯಾಗಿ ಇರ್ಫಾನ್ ಪಡ್ಪು, ಜತೆ ಕಾರ್ಯದರ್ಶಿಯಾಗಿ ಇರ್ಷಾದ್ ಅಳಕೆ, ಸಲಹೆಗಾರರಾಗಿ ಹಬೀಬ್ ಸಲ್ಲಾಜೆ, ಜಲೀಲ್ ಜಿ.ಎ., ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹನೀಫ್ ಎ.ಕೆ., ಸಿರಾಜ್ ಪಡ್ಪು, ಹೈದರ್ ಕೆಳಗಿನಕೆರೆ, ಅಬ್ದುರ್ರಹ್ಮಾನ್ ಪಡ್ಪು, ರಹೀಮ್ ಅಳಕೆ, ಸವಾದ್, ಅಶ್ರಫ್ ಪುಂಚಮೆ, ಜುನೈದ್, ಶಾಹುಲ್ ಹಮೀದ್ ಬೊಟ್ಟಿಕೆರೆ, ಮುಹಮ್ಮದ್ ನಾಂಧ್ಯ, ನಿಝಾಮ್ ಅಡ್ಡೂರುರನ್ನು ಆಯ್ಕೆ ಮಾಡಲಾಯಿತು.


ಕನಕ ತತ್ವ ಚಿಂತನಾ’ ಪ್ರಚಾರೋಪನ್ಯಾಸ ಮಾಲಿಕೆ ಬರೆಯುವುದಷ್ಟೇ ಲೇಖಕನ ಜವಾಬ್ದಾರಿಯಲ್ಲ
ಕೊಣಾಜೆ, ಫೆ.4: ಬರಹಗಾರನೊಬ್ಬ ಸ್ವಲ್ಪ ಪ್ರಸಿದ್ಧಿಗೆ ಬಂದೊಡನೆ ಬರೆಯುವುದಷ್ಟೇ ತನ್ನ ಕೆಲಸ, ಮಿಕ್ಕಿದ್ದೆಲ್ಲವೂ ಬೇರೆಯವರ ಕೆಲಸ ಎಂಬ ಭಾವನೆಯಲ್ಲಿ ಬದುಕುತ್ತಿದ್ದು, ಅಂತಹ ಮನೋಭಾವನೆ ಎಲ್ಲರ ಮನದಿಂದ ದೂರವಾಗಬೇಕು ಎಂದು ದೇಸಿ ಚಿಂತಕ, ರಂಗಕರ್ಮಿ ಪ್ರಸನ್ನ ಹೆಗ್ಗೋಡು ಅಭಿಪ್ರಾಯಪಟ್ಟರು.
ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಸಂಶೋಧನಾ ಕೇಂದ್ರ ಮತ್ತು ನಿಟ್ಟೆ ವಿಶ್ವವಿದ್ಯಾನಿಲಯದ ಜಂಟಿ ಆಶ್ರಯದಲ್ಲಿ ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ನಡೆದ ‘ಕನಕ ತತ್ವ ಚಿಂತನ’ ಪ್ರಚಾರೋಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ ‘ಬ್ರೆಡ್ ಲೇಬರ್’ ವಿಷಯದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಸಂಶೋಧನಾ ಕೇಂದ್ರದ ಸಂಯೋಜಕ ಡಾ. ಬಿ.ಶಿವರಾಮ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಿಟ್ಟೆ ವಿವಿ ಕುಲಸಚಿವ ಡಾ. ಎಂ.ಎಸ್. ಮೂಡಿತ್ತಾಯ ಅಧ್ಯಕ್ಷತೆ ವಹಿಸಿದ್ದರು.
 ಕಾರ್ಯಕ್ರಮದಲ್ಲಿ ಪ್ರಸನ್ನ ಹೆಗ್ಗೋಡು ಅವರೊಂದಿಗೆ ವಿದ್ಯಾರ್ಥಿಗಳು ಹಾಗೂನಿಟ್ಟೆ ವಿವಿಯ ಸಿಬ್ಬಂದಿ ಸಂವಾದ ನಡೆಸಿದರು.ಕ್ಷೇಮ ಸಿಬ್ಬಂದಿ ಯಶೋದಾ ಪ್ರಾರ್ಥಿಸಿದರು. ಭಾಗ್ಯಶ್ರೀ ಭಂಡಾರಿ ಸ್ವಾಗತಿಸಿದರು. ಕ್ಷೇಮ ಸಿಬ್ಬಂದಿ ಡಾ. ಸಾಯಿಗೀತಾ ಕಾರ್ಯಕ್ರಮ ನಿರೂಪಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X