ಫಿಫಾ ರ್ಯಾಂಕಿಂಗ್: ಬೆಲ್ಜಿಯಂ ನಂ.1 ತಂಡ
ಝೂರಿಕ್, ಫೆ.4: ಫಿಫಾ ರ್ಯಾಂಕಿಂಗ್‌ನಲ್ಲಿ ಬೆಲ್ಜಿಯಂ ತಂಡ ನಂ.1 ಸ್ಥಾನವನ್ನು ಕಾಯ್ದುಕೊಂಡಿದೆ. ಫೆಬ್ರವರಿಯ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರ-18ರಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಶ್ರೇಷ್ಠ 20 ತಂಡಗಳು ಈ ವರ್ಷ ಈವರೆಗೆ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿಲ್ಲ. ಸ್ಪೇನ್ ಎರಡನೆ, ವಿಶ್ವ ಚಾಂಪಿಯನ್ ಜರ್ಮನಿ 4ನೆ ಸ್ಥಾನದಲ್ಲಿದೆ. ಟಾಪ್-10ರಲ್ಲಿ ಯುರೋಪ್ ಹಾಗೂ ದಕ್ಷಿಣ ಅಮೆರಿಕ ತಂಡಗಳು ಪ್ರಾಬಲ್ಯ ಸಾಧಿಸಿವೆ.
ಫಿಫಾ ರ್ಯಾಂಕಿಂಗ್: 1.ಬೆಲ್ಜಿಯಂ, 2. ಅರ್ಜೆಂಟೀನ, 3. ಸ್ಪೇನ್, 4. ಜರ್ಮನಿ, 5. ಚಿಲಿ, 6. ಬ್ರೆಝಿಲ್, 7.ಪೋರ್ಚುಗಲ್, 8. ಕೊಲಂಬಿಯ, 9. ಇಂಗ್ಲೆಂಡ್, 10. ಆಸ್ಟ್ರೀಯ
Next Story





