ವಿಕಲ ಚೇತನರ ಗ್ರಾಮ ಘಟಕ ರಚನೆ
ಗಂಗಾವತಿ, ಫೆ.4: ತಾಲೂಕಿನ ಹೊಸಳ್ಳಿಗ್ರಾಮದಲ್ಲಿ ಗುರುವಾರ ಕರ್ನಾಟಕ ರಾಜ್ಯ ವಿಕಲಚೇತನರ ಮತ್ತು ಪಾಲಕರ ಒಕ್ಕೂಟದ ಗ್ರಾಮ ಘಟಕವನ್ನು ರಚನೆ ಮಾಡಲಾಯಿತು. ಒಕ್ಕೂಟದ ತಾಲೂಕು ಘಟಕ ಅಧ್ಯಕ್ಷ ಅಶೋಕ ಗುಡಿಕೋಟಿ ಮಾತನಾಡಿ, ಘಟಕ ರಚನೆಯಿಂದ ಅಂಗವಿಕಲರು ಒಂದಾಗಿ ಸರಕಾರಿ ಸೌಲಭ್ಯ ಪಡೆಯಬಹುದು, ಸಮಸ್ಯೆಗಳು ಎದುರಾದಲ್ಲಿ ಎಲ್ಲರೂ ಸೇರಿ ಎದುರಿಸಬಹದು. ಘಟಕದಡಿಯಲ್ಲಿ ಧ್ಯೇಯ ಉದ್ದೇಶಗಳಿಗೆ ಬದ್ಧರಾಗಿ ಕಾರ್ಯನಿರ್ವಹಿಸಬೇಕು ಎಂದರು. ನಂತರ ತಾಲೂಕು ಅಧ್ಯಕ್ಷ ಅಶೋಕ ಗುಡಿಕೋಟಿ ನೇತೃತ್ವದಲ್ಲಿ ಗ್ರಾಮ ಘಟಕ ರಚನೆ ಮಾಡಲಾಯಿತು. ಗೌರವ ಅಧ್ಯಕ್ಷರಾಗಿ ವೌಲಾಸಾಬ್, ಅಧ್ಯಕ್ಷರಾಗಿ ಭೀಮರಾಯಪ್ಪ, ಉಪಾಧ್ಯಕ್ಷರಾಗಿ ಸೋಮಪ್ಪ, ಕಾರ್ಯದರ್ಶಿಯಾಗಿ ಬಸವರಾಜ ಹಾಗೂ ಪಾರ್ವತಿ, ಸುಮಂಗಲಾ ಸೇರಿ ಐದು ಮಂದಿಯನ್ನು ಸಮಿತಿಗೆ ಆಯ್ಕೆ ಮಾಡಲಾಯಿತು. ಸಂದರ್ಭದಲ್ಲಿ ತಾಲೂಕು ಘಟಕದ ಯಲ್ಲಪ್ಪ ಒಡ್ಡರಹಟ್ಟಿ, ಕೆ.ನಾಗರಾಜ, ರಾಘವೇಂದ್ರ ಸಿದ್ದಿಕೇರಿ ಹಾಗೂ ವಾ.ನಾಗರಾಜ ಉಪಸ್ಥಿತರಿದ್ದರು. ಮಾಲೂರು:ುರುಕುಗೊಂಡ ಮತಯಾಚನೆ ಮಾಲೂರು, ಫೆ.4: ತಾಲೂಕು ಹಾಗೂ ಜಿಪಂ ಚುನಾವಣೆಗೆ ಇನ್ನೂ ಕೇವಲ ಹತ್ತು ದಿನಗಳು ಮಾತ್ರ ಬಾಕಿಯಿದ್ದು, ಅಭ್ಯರ್ಥಿಗಳ ಪರ ಬ್ಯಾಟಿಂಗ್ ಶುರುವಾಗಿದೆ.
ಜೆಡಿಎಸ್ ಮತಯಾಚನೆ: ತಾಲೂಕಿನ ದಿನ್ನೂರು ಗ್ರಾಮದಲ್ಲಿ ಗುರುವಾರ ತೊರ್ನಹಳ್ಳಿ ಜಿಪಂನ ಜೆಡಿಎಸ್ ಅಭ್ಯರ್ಥಿ ಗೀತಮ್ಮ ಕೆ.ಎಸ್.ವೆಂಕಟೇಶ್‌ಗೌಡ ಹಾಗೂ ತೊರ್ನಹಳ್ಳಿ ತಾ.ಪಂನ ಜೆಡಿಎಸ್ ಅಭ್ಯರ್ಥಿ ವಿದ್ಯಾ ಸುಮಂತ್ ಪರ ಮುಖಂಡರು ಮತಯಾಚಿಸಿದರು. ಈ ಸಂದರ್ಭದಲ್ಲಿ ಬೆಳ್ಳಾವಿ ಮಠದ ಮಹಾಂತ ಶಿವಾಚಾರ್ಯ ಸ್ವಾಮೀಜಿ, ಮುಖಂಡರಾದ ಬೆಳ್ಳಾವಿ ಸೋಮಣ್ಣ ಸುಮಂತ್, ಹರೀಶ್ ಮತ್ತಿತರರು ಉಪಸ್ಥಿತರಿದ್ದರು.
ಬಿಜೆಪಿ: ತಾಲೂಕಿನ ಕುಡಿಯನೂರು ಗ್ರಾಮದಲ್ಲಿ ಕುಡಿಯನೂರು ಜಿಪಂ ಬಿಜೆಪಿ ಅಭ್ಯರ್ಥಿ ಟಿ.ವಿ.ಎಸ್ ರಾಮೇಗೌಡ ಹಾಗೂ ಕುಡಿಯನೂರು ತಾಪಂನ ಬಿಜೆಪಿ ಅಭ್ಯರ್ಥಿ ಕರಿಯಣ್ಣ ಪರ ಮುಖಂಡರು ಮತಯಾಚಿಸಿದರು. ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಎಸ್.ಕೃಷ್ಣಾರೆಡ್ಡಿ, ಜಿ.ಇ.ರಾಮೇಗೌಡ, ಆರ್.ಪ್ರಭಾಕರ್, ಸಾಧಿಕ್, ಡಾ.ಪ್ರಸನ್ನ ಡೈರಿನಂಜುಂಡಪ್ಪಉಪಸ್ಥಿತರಿದ್ದರು.
ತೊರ್ನಹಳ್ಳಿ: ಗುರುವಾರ ಗ್ರಾಮದಲ್ಲಿ ತೊರ್ನಹಳ್ಳಿ ಜಿಪಂನ ಬಿಜೆಪಿಯ ಶಿಲ್ಪಾ ಬಾಬುರೆಡ್ಡಿ ಹಾಗೂ ತೊರ್ನನಹಳ್ಳಿ ತಾಪಂನ ಬಿಜೆಪಿ ಅಭ್ಯರ್ಥಿ ಸುನಿತಾ ಪರ ಮುಖಂಡರು ಮತ ಯಾಚಿಸಿದರು.ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಕೃಷ್ಣಾರೆಡ್ಡಿ, ತಾಲೂಕು ಅಧ್ಯಕ್ಷ ವೆಂಕಟೇಶ್, ತಾಪಂ ಮಾಜಿ ಉಪಾಧ್ಯಕ್ಷೆ ಪಾವರ್ತಮ್ಮ ಮುಖಂಡರಾದ ನಾರಾಯಣಸ್ವಾಮಿ ಕಲಾವಿದಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.







