ಸ್ವಾಗತ ಸಮಿತಿ ಕಚೇರಿ ಉದ್ಘಾಟನೆ

ಕಾಸರಗೋಡು, ಫೆ.4: ಯುವ ಜನತಾ ದಳ (ಯನೈಟೆಡ್) ರಾಜ್ಯ ಸಮಿತಿ ವತಿಯಿಂದ ಕಾಸರಗೋಡಿನಿಂದ ತಿರುವನಂತಪುರಕ್ಕೆ ಆಯೋಜಿಸಿರುವ ರಾಜ್ಯ ಮಟ್ಟದ ‘ಮಾನವೀಯ ಸಂದೇಶ ಯಾತ್ರೆ’ ಯ ಪೂರ್ವಸಿದ್ಧತೆಗಾಗಿ ಸ್ವಾಗತ ಸಮಿತಿ ಕಚೇರಿಯನ್ನು ಕುಂಬಳೆ ಯಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಸಿದ್ದೀಕ್ ಅಲಿ ಮೊಗ್ರಾಲ್ ಉದ್ಘಾಟಿಸಿದರು.
ಅಹ್ಮದ್ ಅಲಿ ಕುಂಬಳೆ, ಮುಹಮ್ಮದ್ ಕುಂಞಿ, ಕೆ.ಸಿದ್ದೀಕ್ ರಹ್ಮಾನ್, ಕೆ.ಎಂ.ಇಬ್ರಾಹೀಂ, ದಾಮೋದರ ಅರಿಕ್ಕಾಡಿ, ಎಂ.ಎ. ಹಂಝ, ಮುಹಮ್ಮದ್ ಶಾರ್ಜಾ, ರಶೀದ್ ಮೊಗ್ರಾಲ್ ಉಪಸ್ಥಿತರಿದ್ದರು. ರಾಜ್ಯ ಅಧ್ಯಕ್ಷ ಸಲೀಂ ಮಡವೂರು ನೇತೃತ್ವದ ಯಾತ್ರೆ ಫೆ.19ರಂದು ಕುಂಬಳೆಯಿಂದ ಹೊರಡಲಿದೆ.
Next Story





