ಸರಕಾರದಿಂದ ವಿತ್ತ ಸಚಿವಾಲಯದ ಯು-ಟ್ಯೂಬ್ ಚಾನೆಲ್‌ಗೆ ಚಾಲನೆ
ಹೊಸದಿಲ್ಲಿ, ಫೆ.4: ಜನರನ್ನು ನೇರವಾಗಿ ತಲುಪುವ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರದ ಆಶಯಕ್ಕನುಗುಣವಾಗಿ ಕೇಂದ್ರವು ವಿತ್ತ ಸಚಿವಾಲಯಕ್ಕಾಗಿ ಯು-ಟ್ಯೂಬ್ ಚಾನೆಲ್‌ನ್ನು ಆರಂಭಿಸಿದೆ.
ಭಾರತೀಯ ಆರ್ಥಿಕತೆಗೆ ಸಂಬಂಧಿಸಿದಂತೆ ವಿತ್ತ ಸಚಿವಾಲಯವು ಆಗಿಂದಾಗ್ಗೆ ಬಹಳಷ್ಟು ಪ್ರಕಟಣೆಗಳು ಮತ್ತು ವಿವರಗಳನ್ನು ಹೊರಡಿಸುತ್ತಿರುತ್ತದೆ ಮತ್ತು ಇವು ಸಾರ್ವಜನಿಕವಾಗಿ ನಿರಂತರ ಚರ್ಚೆಯಾಗುತ್ತಿರುತ್ತವೆ. ಆದ್ದರಿಂದ ಇವೆಲ್ಲ ವಿಷಯಗಳು ಲಭ್ಯವಿರುವ ವೇದಿಕೆಯೊಂದು ಅಗತ್ಯವಾಗಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿಯವರನ್ನು ಉಲ್ಲೇಖಿಸಿ ಅಧಿಕೃತ ಹೇಳಿಕೆಯೊಂದು ಗುರುವಾರ ತಿಳಿಸಿದೆ. ಯು-ಟ್ಯೂಬ್ ಚಾನೆಲ್ ವಿತ್ತ ಸಚಿವಾಲಯದ ಮಾಹಿತಿಗಳನ್ನು ವೀಡಿಯೊಗಳ ಮೂಲಕ ಒದಗಿಸುತ್ತದೆ.
ಪ್ರಮುಖ ಯೋಜನೆಗಳು,ಘಟನೆಗಳು,ಸಚಿವಾಲಯ
ಕ್ಕೆ ಸಂಬಂಧಿಸಿದ ಸಭೆಗಳು ಮತ್ತು ಸುದ್ದಿಗೋಷ್ಠಿಗಳ ಕುರಿತು ವೀಡಿಯೊಗಳನ್ನು ಈ ಚಾನೆಲ್ ಪ್ರಸಾರ ಮಾಡಲಿದೆ ಎಂದು ಹೇಳಿಕೆಯು ತಿಳಿಸಿದೆ.
Next Story





