ಬಹುಕೋಟಿ ರೂ. ಆದರ್ಶ ಹಗರಣ: ಚವಾಣ್ ವಿರುದ್ಧ ಕಾನೂನು ಕ್ರಮಕ್ಕೆ ರಾಜ್ಯಪಾಲರ ಅನುಮತಿ

ಮುಂಬೈ,ಫೆ.4: ಬಹುಕೋಟಿ ರೂ.ಗಳ ಆದರ್ಶ ಹೌಸಿಂಗ್ ಸೊಸೈಟಿ ಹಗರಣ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ವಿರುದ್ಧ ಕಾನೂನು ಕ್ರಮ ಜರಗಿಸಲು ಮಹಾರಾಷ್ಟ್ರ ರಾಜ್ಯಪಾಲ ಸಿ.ವಿದ್ಯಾಸಾಗರ ರಾವ್ ಗುರುವಾರ ಸಿಬಿಐಗೆ ಅನುಮತಿ ನೀಡಿದ್ದಾರೆ.
ನ್ಯಾ.ಪಾಟೀಲ ವಿಚಾರಣಾ ಆಯೋಗದ ವರದಿಯಂತಹ ಪೂರಕ ಮತ್ತು ಹೊಸ ಸಾಕ್ಷಾಧಾರಗಳ ಆಧಾರದಲ್ಲಿ ಸಿಆರ್‌ಪಿಸಿಯ ಕಲಂ 197ರಡಿ ಚವಾಣ್ ವಿರುದ್ಧ ಕಾನೂನು ಕ್ರಮ ಜರಗಿಸಲು ಮುಂಬೈನ ಸಿಬಿಐ ಜಂಟಿ ನಿರ್ದೇಶಕರು ಅನುಮತಿಯನ್ನು ಕೋರಿದ್ದರು. ಸಂಪುಟದ ಶಿಫಾರಸಿನ ಮೇರೆಗೆ ರಾಜ್ಯಪಾಲರು ಚವಾಣ್ ವಿರುದ್ಧ ಕ್ರಮಕ್ಕೆ ಹಸಿರು ನಿಶಾನೆ ತೋರಿಸಿದ್ದಾರೆ ಎಂದು ರಾಜ್ಯಪಾಲರ ಕಚೇರಿಯ ಅಧಿಕಾರಿಯೋರ್ವರು ತಿಳಿಸಿದರು.
Next Story





