‘ಮರಾಠ ಟೈಗರ್ಸ್’ ನಿಷೇಧಕ್ಕೆ ಆಗ್ರಹ
ಬೆಂಗಳೂರು, ಫೆ. 4: ಇಂದು ಬಿಡುಗಡೆಯಾಗಲಿರುವ ‘ಮರಾಠ ಟೈಗರ್ಸ್’ ಮರಾಠಿ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಬಾರದೆಂದು ಅಖಿಲ ಕರ್ನಾಟಕ ಕನ್ನಡ ಚಳವಳಿಯ ರಾಜ್ಯಾಧ್ಯಕ್ಷ ಗುರುದೇವ ನಾರಾಯಣ ಕುಮಾರ್ ಆಗ್ರಹಿಸಿದ್ದಾರೆ.
ಕನ್ನಡ ನೆಲ, ಜಲ, ಗಡಿ, ಸಂಸ್ಕೃತಿ ಮತ್ತು ಇತಿಹಾಸವನ್ನು ಅವಹೇಳನ ಮಾಡುವ, ಭಾಷಾ ವಿವಾದ, ಗಡಿ ಸಮಸ್ಯೆ ಸೇರಿದಂತೆ ಕರ್ನಾಟಕದಲ್ಲಿರುವ ಮರಾಠಿ ಮಾತನಾಡುವವರನ್ನು ಪ್ರಚೋದಿಸುವ ಮತ್ತು ಕನ್ನಡಿಗರ ಹಾಗೂ ಮರಾಠಿ ಜನರ ಮಧ್ಯೆ ಜಗಳವನ್ನು ಹಚ್ಚುವ ರೀತಿಯಲ್ಲಿ ಚಿತ್ರವನ್ನು ಚಿತ್ರಿಸಲಾಗಿದೆ ಎಂದು ದೂರಿದ್ದಾರೆ.
ಎಂ.ಇ.ಎಸ್ ಮತ್ತು ಶಿವಸೇನೆಯ ಭಾಷಾಂಧರ ಬೆಂಬಲದಿಂದ ಈ ಚಿತ್ರ ಕನ್ನಡಿಗರನ್ನು ಕೆಣಕುವ ಸಾಹಸಕ್ಕೆ ಕೈ ಹಾಕಿದೆ. ಆರೂ ವಾಣಿಜ್ಯ ಮಂಡಳಿ ಮತ್ತು ಸರಕಾರ ವೌನ ವಹಿಸಿ ಕೂತಿರುವುದು ಸರಿಯಲ್ಲ. ಈ ಕೂಡಲೇ ಸರಕಾರ, ವಾಣಿಜ್ಯ ಮಂಡಳಿ, ಸಂಘ-ಸಂಸ್ಥೆಗಳು, ಗೃಹ ಇಲಾಖೆ, ಪೊಲೀಸರು ಮತ್ತು ಕನ್ನಡ ಹೋರಾಟಗಾರರು ಚಿತ್ರ ಬಿಡುಗಡೆಯಾಗದಂತೆ ನಿಷೇಧ ಹೇರಲು ಮುಂದಾಗಬೇಕೆಂದು ಅವರು ಆಗ್ರಹಿಸಿದ್ದಾರೆ.
Next Story





