ಕೇರಳದ ‘‘ಷಿ-ಟ್ಯಾಕ್ಸಿ’’ಮುಡಿಗೆ ಸಿಎಂ ನವೋನ್ಮೇಷ ಪ್ರಶಸ್ತಿ
ತಿರುವನಂತಪುರ,ಫೆ.4: ದಿನದ 24 ಗಂಟೆಯೂ ಮಹಿಳೆಯರಿಂದ ಮಹಿಳೆಯರಿಗಾಗಿಯೇ ನಿರ್ವಹಿಸಲ್ಪಡುತ್ತಿರುವ ದೇಶದ ಮೊದಲ ಟ್ಯಾಕ್ಸಿ ಜಾಲವೆಂಬ ಹೆಗ್ಗಳಿಕೆ ಪಡೆದಿರುವ ಕೇರಳದ ಸರ್ವ ಮಹಿಳಾ ಟ್ಯಾಕ್ಸಿ ಕ್ಯಾಬ್ ಸೇವೆ ‘‘ಷಿ-ಟ್ಯಾಕ್ಸಿ’’2014ರ ಮುಖ್ಯಮಂತ್ರಿಗಳ ನವೋನ್ಮೇಷ ಪ್ರಶಸ್ತಿಗೆ ಪಾತ್ರವಾಗಿದೆ.
ಮಹಿಳೆಯರೇ ಚಾಲಕಿಯರು ಮತ್ತು ಮಾಲಕಿಯರಾಗಿರುವ ಷಿ-ಟ್ಯಾಕ್ಸಿಯನ್ನು ‘ವಿಕಾಸಾತ್ಮಕ ಹಸ್ತಕ್ಷೇಪ’ವಿಭಾಗದಲ್ಲಿ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ.
ರಾಜ್ಯ ಸಾಮಾಜಿಕ ನ್ಯಾಯ ಇಲಾಖೆಯ ಅಧೀನದಲ್ಲಿರುವ ಸ್ವಾಯತ್ತ ಸಂಸ್ಥೆ ಜೆಂಡರ್ ಪಾರ್ಕ್ ಮಹಿಳೆಯರಲ್ಲಿ ಉದ್ಯಮಶೀಲತೆ,ಸ್ವೋದ್ಯೋಗ ಮತ್ತು ಭದ್ರತೆಯನ್ನು ಉತ್ತೇಜಿಸಲು ಎರಡು ವರ್ಷಗಳ ಹಿಂದೆ ಈ ಟ್ಯಾಕ್ಸಿ ಜಾಲವನ್ನು ಆರಂಭಿಸಿತ್ತು.
Next Story





