ರಾಮ ಸೇತು: ತುರ್ತು ವಿಚಾರಣೆಗೆ ಸುಪ್ರೀಂಕೋರ್ಟ್ ನಕಾರ
ಹೊಸದಿಲ್ಲಿ, ಫೆ.4: ರಾಮಸೇತುವಿನ ಕುರಿತು ತನ್ನ ನಿಲುವನ್ನು ಸ್ಪಷ್ಟಪಡಿಸುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಬಿಜೆಪಿ ನಾಯಕರೊಬ್ಬರು ಸಲ್ಲಿಸಿರುವ ಮನವಿಯ ತುರ್ತು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಇಂದು ನಿರಾಕರಿಸಿದೆ.
ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್, ನ್ಯಾಯಮೂರ್ತಿಗಳಾದ ಎ.ಕೆ.ಸಿಕ್ರಿ ಹಾಗೂ ಆರ್. ಭಾನುಮತಿಯವರನ್ನೊಳಗೊಂಡ ಪೀಠವೊಂದು, ಕೇಂದ್ರ ಸರಕಾರವು ಸೇತುವನ್ನು ‘ಮುಟ್ಟಿದಲ್ಲಿ’ ನ್ಯಾಯಾಲಯಕ್ಕೆ ಬರುವಂತೆ ಈ ಅರ್ಜಿದಾರ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿಯವರಿಗೆ ತಿಳಿಸಿತು.
‘‘ತುರ್ತು ವಿಚಾರಣೆಯ ಅಗತ್ಯವೇನೂ ಇಲ್ಲ. ಅವರು ರಾಮಸೇತುವನ್ನು ಮುಟ್ಟದಿದ್ದಲ್ಲಿ ನೀವು ಚಿಂತಿಸುವ ಅಗತ್ಯವಿರುವುದಿಲ್ಲ’’ ಎಂದು ನ್ಯಾಯಪೀಠ ಹೇಳಿತು.
ತಾನು ಸೇತುವನ್ನು ವಿರೂಪಗೊಳಿಸುವುದಿಲ್ಲವೆಂದು ಉತ್ತರ ಸಲ್ಲಿಸುವಂತೆ ಕೇಂದ್ರ ಸರಕಾರಕ್ಕೆ ಸೂಚನೆ ನೀಡಬೇಕು. ವಿಷಯದ ವಿಚಾರಣೆಯನ್ನು ತುರ್ತಾಗಿ ನಡೆಸಬೇಕು ಎಂದು ಸ್ವಾಮಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
Next Story





