ಗಂಡು ವೇಷದ ಸ್ಕೂಟರ್ ಕಳ್ಳಿ ಕೊನೆಗೂ ಸಿಕ್ಕಿಬಿದ್ದಳು!!

ತಿರುವನಂತಪುರ: ಯುವತಿಯೊಬ್ಬಳು ಗಂಡಿನ ವೇಷಧರಿಸಿ ದ್ವಿಚಕ್ರವಾಹನ ಕಳ್ಳತನ ಮಾಡಿ ಸಿಕ್ಕಿಬಿದ್ದಿರುವ ಘಟನೆ ಕೇರಳದಿಂದ ವರದಿಯಾಗಿದೆ ಮೆರ್ಲಿನ್ ಎಂದು ಕರೆಯಲಾಗುವ ಮೆರ್ಸಿನ್ ಜಾರ್ಜ್ ಎಂಬಾಕೆ ಗಂಡಸು ವೇಷ ಹಾಕಿ ವಾಹನ ಕಳ್ಳತನದಲ್ಲಿ ಅಗ್ರಗಣ್ಯಳೆಂದು ಪೊಲೀಸರು ತಿಳಿಸಿದ್ದಾರೆ.ಗಂಡು ವೇಷಧಾರಿ ಮೆರ್ಸಿನ್ ಜಾರ್ಜ್ (26) ಹೆಣ್ಣೆಂದು ಯಾರಿಗೂ ಗುರುತಿಸಲು ಸುಲಭದಲ್ಲಿ ಸಾಧ್ಯವಿರಲಿಲ್ಲ. ಜೊತೆಗೆ ಇವಳ ವಾಹನ ಕಳ್ಳತನದ ಕತೆಗಳು ಗಂಡಸರಿಗೂ ಸವಾಲೊಡ್ಡುವಂತಿದೆ. ಅಂಬಲಪುಯ ತಿರುಂಬಾಡಿ ಬೀಚ್‌ವಾರ್ಡ್ ಆರಾಟ್ಟುಕುಳಂಗರ ಮನೆಯ ಈಕೆ ಸ್ಕೂಟರ್ ಕದ್ದ ಪ್ರಕರಣದಲ್ಲಿ ಬಂಧಿಸಲ್ಪಟ್ಟಾಗ ಎಲ್ಲರೀತಿಯ ವಂಚನೆಗಳು ಬಹಿರಂಗಕ್ಕೆ ಬಂದಿತ್ತು. ಹಲವು ಮಹಿಳೆಯರನ್ನು ಕೂಡಾ ವಶೀಕರಿಸಿ ವಂಚಿಸಿದ್ದಾಳೆ.
ಜೀನ್ಸ್ ಪ್ಯಾಂಟ್ ಹಾಕುವ ಮೆರ್ಸಿನ್ ಗಂಡಸರಂತೆ ವರ್ತಿಸುತ್ತಿದ್ದಳು. ಕೂದಲು ಕ್ರಾಪ್ ಕಟ್, ಕಿವಿಯಲ್ಲಿ ಇಂದಿನ ಗಂಡು ಹುಡುಗರ ಪ್ಯಾಶನ್‌ನಂತಿರುವ ಒಂದು ಆಭರಣವಿರುತ್ತಿತ್ತು. ಜೊತೆಗೆ ಕನ್ನಡಕ ಧರಿಸಿ ಮೆರ್ಸಿನ್ ಹೊರಗಿನವರ ಮುಂದೆ ಗಂಡಾಗಿ ಬದುಕುತ್ತಿದ್ದಳು. ಹತ್ತನೆ ಕ್ಲಾಸ್‌ವರೆಗೆ ಕಲಿತು ಆ ನಂತರ ತನ್ನ ಸ್ವಭಾವ ಮತ್ತು ವರ್ತನೆಗಳಿಗಾಗಿ ಅವಳು ಮನೆ ತೊರೆಯಬೇಕಾಗಿ ಬಂದಿತ್ತು.
ಅವಳ ಸಲಿಂಗರತಿ ವ್ಯಾಮೋಹ ಮನೆಯವರನ್ನು ಕೋಪಕ್ಕೀಡು ಮಾಡಿತ್ತು. ಮನೆತೊರೆದಾದ ಮೇಲೆ ಅವಳುಗಂಡಿನ ವೇಷಹಾಕತೊಡಗಿದ್ದಳು ಮತ್ತು ಕೆಲವು ಯುವತಿಯರನ್ನು ತನ್ನ ಕಾನೂನು ಬಾಹಿರ ಕೃತ್ಯಕ್ಕೆ ಬಳಸಿಕೊಳ್ಳುತ್ತಿದ್ದಳು. ಒಂದೂರಿನಿಂದ ಇನ್ನೊಂದೂರಿಗೆ ಸುತ್ತಾಡುವ ಚಪಲಗಳಿದ್ದವು. ಕೆಲವು ಆಶ್ರಮ, ಮಠಗಳಲ್ಲಿ ಉಳಿದುಕೊಳ್ಳುತ್ತಿದ್ದಳು.
ಸ್ಕೂಟರ್ ಕಳ್ಳತನ ಮೆರ್ಸಿನ್ ಳ ದೌರ್ಬಲ್ಯವಾಗಿತ್ತು. ಯಾರಾದರೂ ಸ್ಕೂಟರ್‌ನಲ್ಲಿ ಬೀಗದಕೈ ಮರೆತು ಹೋಗಿದ್ದರೆ ಮೆರ್ಸಿನ್ ಕೂಡಲೇ ಸ್ಕೂಟರ್ ಕದ್ದೊಯ್ಯುತ್ತಿದ್ದಳು. ಸಂಗಡಿಗರೊಂದಿಗೆ ಸ್ಕೂಟರ್‌ನಲ್ಲಿ ಸುತ್ತಾಡುತ್ತಿದ್ದಳು. ನಂತರ ರೈಲ್ವೆ ಸ್ಟೇಶನ್‌ನಲ್ಲಿ ಇಟ್ಟು ರೈಲು ಹಿಡಿದು ಇನ್ನೊಂದು ಊರಿಗೆ ಹೋಗಿಬಿಡುತ್ತಿದ್ದಳು. ತಿರುವನಂತಪುರ ಮೆಡಿಕಲ್ ಕಾಲೇಜ್ ಮೆನ್ಸ್ ಹಾಸ್ಟೆಲ್ ಬಳಿ ಲಿನಿಟ್ಟಾ ಎಂಬ ಮಹಿಳೆಯ ಇರಿಸಿದ್ದ ಸ್ಕೂಟರ್ ಕದ್ದ ಪ್ರಕರಣದಲ್ಲಿ ಮೆರ್ಸಿನ್ ಸಿಕ್ಕಿಬೀಳುವುದರೊಂದಿಗೆ ಅವಳೆಲ್ಲ ಕಳ್ಳತನ -ವಂಚನೆ- ದುರಭ್ಯಾಸಗಳ ಕತೆಗಳನ್ನು ಪೊಲೀಸರು ಹೊರತೆಗೆದಿದ್ದಾರೆ.
ಮೆನ್ಸ್ ಹಾಸ್ಟೆಲ್‌ಗೆ ಆಗಾಗ ಬರುತ್ತಿದ್ದ ಮೆರ್ಸಿನ್ ಸೆಕ್ಯುರಿಟಿ ಕೆಲಸಗಾರರಿಗೂ ಪರಿಚಿತಳಾಗಿದ್ದಳು. ಕೆಲಸ ವಂಚನೆ ಪ್ರಕರಣಗಳಲ್ಲಿ ಅವಳು ಆರೋಪಿಯಾಗಿರಬೇಕೆಂದು ಪೊಲೀಸರು ಸದ್ಯ ಶಂಕೆ ವ್ಯಕ್ತಪಡಿಸಿದ್ದಾರೆ. ಎರಡು ವರ್ಷ ಮೊದಲು ತೃಶೂರ್ ಹೊಸಚರ್ಚ್ ಬಳಿ ಶಂಕಾಸ್ಪದವಾಗಿ ಸುತ್ತಾಡುವ ಓರ್ವ ಯುವತಿಯನ್ನು ಕಂಡಿದ್ದೇನೆ ಎಂದು ಕ್ರೆಸ್ತ ಭಗಿನಿಯೊಬ್ಬರು ಪೊಲೀಸರಿಗೆ ಶ ಂಕಾಸ್ಪದವಾಗಿ ದೂರು ನೀಡಿದ್ದರು ಈ ಪ್ರಕರಣದಲ್ಲಿ ಮೆರ್ಸಿನ್ ಬಂಧಿಸಲ್ಪಟ್ಟಿದ್ದಳು. ಆಗ ಅವಳಿಂದ ವೈದ್ಯರ ನಕಲಿ ಕಾರ್ಡ್‌ನ್ನು ವಶಪಡಿಸಿಕೊಳ್ಳಲಾಗಿತ್ತು. ಬರೇ ಎಸೆಸೆಲ್ಸಿ ಕಲಿತ ಈಕೆ ಹಲವರಲ್ಲಿ ಹಲವು ರೀತಿಯಲ್ಲಿ ತನ್ನನ್ನು ಪರಿಚಯಿಸಿಕೊಂಡಿದ್ದಾಳೆ. ವೈದ್ಯೆ ,ಪದವೀಧರೆ, ಇಂಜಿನಿಯರ್, ಮಿಲಟರಿಯಲ್ಲಿ ನರ್ಸ್ ಹೀಗೆ ಹಲವು ರೀತಿಯ ಸುಳ್ಳು ಕತೆಗಳನ್ನೂ ಈ ಸ್ಕೂಟರ್ ಕಳ್ಳಿ ಹೇಳಿಕೊಳ್ಳುತಿದ್ದಳು.







