ಫರಂಗಿಪೇಟೆ: ಚುನಾವಣಾ ಬಹಿಷ್ಕಾರದ ಫ್ಲೆಕ್ಸ್ ತೆರವು; ನಾಗರಿಕರಿಂದ ಧರಣಿ

ಬಂಟ್ವಾಳ: ಹದಗೆಟ್ಟ ಹಾಗೂ ಕಡಿತಗೊಂಡ ಕಾಲು ದಾರಿಯನ್ನು ದುರಸ್ತಿಗೊಳಿಸಿಲ್ಲ ಎಂದು ಫರಂಗಿಪೇಟೆ-ಜುಮಾದಿಗುಡ್ಡೆ ನಾಗರಿಕರು ಅಳವಡಿದಿದ್ದ ಚುನಾವಣೆ ಬಹಿಷ್ಕಾರದ ಫ್ಲೆಕ್ಸನ್ನು ತಹಶೀಲ್ದಾರ್ ತೆರವುಗೊಳಿಸಿದರು. ಈ ವೇಳೆ ಭಾರೀ ಸಂಖ್ಯೆಯಲ್ಲಿ ಸೇರಿದ ಜುಮಾದಿಗುಡ್ಡೆ ನಾಗರಿಕರು ಪ್ರತಿಭಟನೆ ನಡೆಸಿದ ಘಟನೆಯೂ ನಡೆಯಿತು.
ಫ್ಲೆಕ್ಸ್ ಅಳವಡಿಸಲು ಚುನಾವಣಾಧಿಕಾರಿಯಿಂದ ಅನುಮತಿ ಖಡ್ಡಾಯ ಎಂದು ತಿಳಿಸಿದ ತಹಶೀಲ್ದರ್ ಪುರಂದರ ಹೆಗ್ಡೆ ಪೊಲೀಸರ ನೆರವಿನೊಂದಿಗೆ ಫ್ಲೆಕ್ಸ್ ತೆರವುಗೊಳಿಸಿದರು.
ಈ ವೇಳೆ ಪ್ರತಿಭಟನಕಾರರು ಮೊದಲು ನಮಗೆ ವಿಷ ಕೊಡಿ ಆಮೇಲೆ ಫ್ಲೆಕ್ಸ್ ತೆರವುಗೊಳಿಸಿ. ಕಳೆದ ವರ್ಷ ಖಾಸಗಿ ಕಟ್ಟಡ ನಿರ್ಮಾಣದ ವೇಳೆ ಗುಡ್ಡ ಜರಿದು ಊರಿಗೆ ಸಂಪರ್ಕ ಕಲ್ಪಿಸುವ ದಾರಿ ಸಂಪೂರ್ಣವಾಗಿ ಕಡಿತಗೊಂಡಿದೆ. ಇದೀಗ ನಮ್ಮ ಮನೆಗಳು ಕೂಡ ಕುಸಿದು ಬೀಳುವ ಅಪಾಯದಲ್ಲಿದ್ದು, ರಾತ್ರಿ ವೇಳೆ ನಿದ್ದೆ ಬಾರದ ಸ್ಥಿತಿಯಲ್ಲಿದ್ದೇವೆ. ಮೊದಲು ನಮಗೆ ವಿಷ ನೀಡಿ ಎಂದು ತಹಶೀಲ್ದರ್ ಗೆ ಮುತ್ತಿಗೆ ಹಾಕಿದ ಘಟನೆಯೂ ನಡೆಯಿತು. ಸ್ಥಳದಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.
.jpg)






