ವಿಕಿಲೀಕ್ಸ್ ನ ಅಸಾಂಜ್ ರನ್ನು ಬಂಧಮುಕ್ತರಾಗಿಸಲು ವಿಶ್ವ ಸಂಸ್ಥೆಯ ಕರೆ

ನ್ಯೂಯಾರ್ಕ್ , ಫೆ 5 : ವಿಕಿಲೀಕ್ಸ್ ಸ್ಥಾಪಕ ಜೂಲಿಯಾನ್ ಅಸಾಂಜ್ ರನ್ನು 2010 ರಿಂದ ಇಂಗ್ಲೆಂಡ್ ನಲ್ಲಿ ವಶದಲ್ಲಿಟ್ಟಿರುವುದು ಏಕ ಪಕ್ಷೀಯ ಹಾಗು ಅಕ್ರಮವಾಗಿದೆ ಎಂದು ಹೇಳಿರುವ ವಿಶ್ವ ಸಂಸ್ಥೆಯ ಸಮಿತಿಯೊಂದು ಈ " ಸ್ವಾತಂತ್ರ್ಯದ ಹರಣವನ್ನು " ಕೊನೆಗೊಳಿಸಬೇಕು ಎಂದು ಶುಕ್ರವಾರ ಹೇಳಿದೆ. ಈ ಮೂಲಕ ಕಳೆದ ಐದು ವರ್ಷಗಳಿಂದ ಲಂಡನ್ ನಲ್ಲಿರುವ ಇಕ್ವೆಡಾರ್ ರಾಯಭಾರ ಕಚೇರಿಯಲ್ಲಿ ಆಶ್ರಯ ಪಡೆದಿರುವ ಅಸಾಂಜ್ ಸ್ವತಂತ್ರರಾಗುವ ದಾರಿ ತೆರೆದಿದೆ. ಬ್ರಿಟನ್ ಹಾಗು ಸ್ವೀಡನ್ ಈ ಅಕ್ರಮ ವಶಕ್ಕಾಗಿ ಅಸಾಂಜ್ ಅವರಿಗೆ ಪರಿಹಾರ ಪರಿಹಾರ ನೀಡಬೇಕು ಎಂದೂ ಸಮಿತಿ ಹೇಳಿದೆ.
Next Story





