ಕಿನ್ನಿಗೋಳಿ: ಫೆ.12ರಿಂದ ಕೊಲ್ಲೂರು ಜಾತ್ರೆ
ಕಿನ್ನಿಗೋಳಿ: ಶ್ರೀ ಕಾಂತಾಬಾರೆ ಭೂದಾಬಾರೆ ಜನ್ಮ ಕ್ಷೇತ್ರ ಕೊಲ್ಲೂರು ಇಲ್ಲಿನ ವರ್ಷಾವಧಿ ಜಾತ್ರಾ ಮಹೋತ್ಸವ ಫೆ. 12 ಮತ್ತು 13 ರಂದು ನಡೆಯಲಿದ್ದು 12 ರಂದು ಬೆಳಿಗ್ಗೆ ಸಾಮೂಹಿಕ ಅಶ್ಲೇಷಾ ಬಲಿ ಸೇವೆ, ಮದ್ಯಾಹ್ನ ಅನ್ನ ಸಂತರ್ಪಣೆ ಮತ್ತು ರಾತ್ರಿ ಜಾರಂದಾಯ ಗುಡ್ಡೆ ಧೂಮವತಿ ಮತ್ತು ಬಂಟ ದೈವಗಳ ನೇಮೊತ್ಸವ, ರಾತ್ರಿ 11 ಕ್ಕೆ ಸರಳ ಧೂಮಾವತಿ ಬಂಟ ದೈವಗಳ ನೇಮೊತ್ಸವ. 13 ರಂದು ಬೆಳಿಗ್ಗೆ ಕಾಂತಾಬಾರೆ ಬೂದಾಬಾರೆಯವರ ವೀರ ಚರಿತ್ರೆಯ ಪಠಣ ಮತ್ತು 7 ಗಂಟೆಗೆ ಭಂಡಾರ ನಿರ್ಗಮಿಸಲಿದೆ ಈ ಎಲ್ಲಾ ಕಾರ್ಯಕ್ರಮಗಳಿಗು ಸರ್ವ ರೀತಿಯಲ್ಲಿ ಪ್ರೋತ್ಸಾಹಿಸಬೇಕೆಂದು ದೈವಸ್ಥಾನದ ಸೇವಾ ಟ್ರಸ್ಟ್ ಪ್ರಕಟನೆ ತಿಳಿಸಿದೆ.
Next Story





