ದೇಶ ಮೊದಲ ಅಂಡರ್ ವಾಟರ್ ರೆಸ್ಟೊರೆಂಟ್ ಬಂದ್... !

ಅಹ್ಮದಾಬಾದ್, ಫೆ.5: ಭಾರತದಲ್ಲಿ ಮೊದಲ ಬಾರಿ ನೀರಿನೊಳಗೆ ತಲೆಎತ್ತಿದ ಅಹ್ಮದಾಬಾದ್‌ನ ಅಂಡರ್ ವಾಟರ್ ರೆಸ್ಟೊರೆಂಟ್‍ನ್ನು ಪೌರಾಡಳಿತ ಸಂಸ್ಥೆಯಿಂದ ಅಗತ್ಯದ ಅನುಮತಿ ಪಡೆಯದ ಕಾರಣಕ್ಕಾಗಿ ಮುಚ್ಚಲಾಗಿದೆ ಎಂದು ತಿಳಿದು ಬಂದಿದೆ.
ದಿ ರಿಯಲ್ ಪೊಸೈಡನ್ ಎಂಬ ಹೆಸರಿನ ಈ ರೆಸ್ಟೊರೆಂಟ್‌ಗೆ ನೋಟಿಸ್ ಜಾರಿ ಮಾಡಿದ ಅಧಿಕಾರಿಗಳು ರೆಸ್ಟೊರೆಂಟ್‌ನ ಬಾಗಿಲಿಗೆ ಬೀಗ ಜಡಿದಿದ್ದಾರೆ.
ನಗರ ಯೋಜನಾ ನಿಯಮದ ಪ್ರಕಾರ ಅಗತ್ಯದ ಅನುಮತಿ ಪಡೆಯದ ಹಿನ್ನೆಲೆಯಲ್ಲಿ ರೆಸ್ಟೊರೆಂಟ್‌ನ್ನು ಮುಚ್ಚಲಾಗಿದೆ ಎಂದು ಅಹ್ಮದಾಬಾದ್ ಎಎಂಸಿಯ ಉಪ ಆಯುಕ್ತರಾದ ದೆವಾಂಗ್ ದೇಸಾಯಿ ತಿಳಿಸಿದ್ದಾರೆ.
Next Story





