ದೇರಳಕಟ್ಟೆ : ಚಿಣ್ಣರ ದಂತ ಆರೋಗ್ಯ ಮೇಳ ಉದ್ಘಾಟನೆ
ಕೊಣಾಜೆ: ವಿದ್ಯಾರ್ಥಿಗಳೇ ನಮ್ಮ ರಾಷ್ಟ್ರದ ಅಮೂಲ್ಯ ಆಸ್ತಿಯಾಗಿದ್ದಾರೆ , ಅವರ ಆರೋಗ್ಯವನ್ನು ಕಾಪಾಡುವುದು ಪೋಷಕರ ಮತ್ತು ಸಮಾಜದ ಜವಾಬ್ದಾರಿಯಾಗಿದೆ ಎಂದು ದೇರಳಕಟ್ಟೆ ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿ ಎನ್.ವಿನಯ್ ಹೆಗ್ಡೆ ಅಭಿಪ್ರಾಯಪಟ್ಟರು .
ದೇರಳಕಟ್ಟೆಯ ನಿಟ್ಟೆ ಸಮೂಹದ ಅಂಗ ಸಂಸ್ಥೆಯಾದ ಎ.ಬಿ ಶೆಟ್ಟಿ ಸ್ಮಾರಕ ದಂತವೈದ್ಯಕೀಯ ವಿಜ್ನಾನದ ಪ್ರಾಯೋಜಕತ್ವದಲ್ಲಿ ಕಾಲೇಜು ಕ್ಯಾಂಪಸ್‌ನಲ್ಲಿ ಶಾಲಾ ಮಕ್ಕಳಿಗಾಗಿ ಏರ್ಪಡಿಸಿದ "ದಂತ ಆರೋಗ್ಯ ಮೇಳ"ವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳ ದಂತ ಆರೋಗ್ಯವನ್ನು ಪರಿಶೀಲನೆ ನಡೆಸುವುದರ ಜೊತೆಗೆ ಅವರ ಜ್ನಾನ ವೃದ್ಧಿಸುವ ವಿಷಯಗಳ ಬಗ್ಗೆ ಸ್ಪರ್ಧೆಗಳನ್ನು ಏರ್ಪಡಿಸಿರುವುದು ಶ್ಲಾಘನೀಯ ಎಂದು ಹೇಳಿದರು .
ಎ.ಬಿ ಶೆಟ್ಟಿ ದಂತ ವೈದ್ಯಕೀಯ ವಿಜ್ಞಾನ ಕಾಲೇಜಿನ ಡೀನ್ ಪ್ರೊ.ಡಾ.ಯು.ಎಸ್. ಕೃಷ್ಣ ನಾಯಕ್ ಮಾತನಾಡಿ ಶಾಲಾ ಮಕ್ಕಳ ಉಚಿತ ದಂತ ತಪಾಸಣೆ ನಡೆಸುವುದರೊಂದಿಗೆ ಅವರ ಜ್ನಾನ ಕೌಶಲವನ್ನು ವೃದ್ಧಿಸುವ ಪ್ರಬಂಧ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಿದ್ದು, ಜಿಲ್ಲೆಯ ಸುಮಾರು 700 ಶಾಲಾ ಮಕ್ಕಳಿಗೆ ಭಾಗವಹಿಸಲು ಆಮಂತ್ರಿಸಿದ್ದು ಅದರಲ್ಲಿ 348 ಶಾಲಾ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿರುವುದಾಗಿ ಹೇಳಿದರು.
ಎ.ಬಿ ಶೆಟ್ಟಿ ದಂತ ವೈದ್ಯಕೀಯ ಕಾಲೇಜಿನ ಸ್ಥಾಪಕ ಡೀನ್ ಪ್ರೊ.ಡಾ.ಶ್ರೀಧರ್ ಶೆಟ್ಟಿ , ಪ್ರೊ.ಡಾ.ರಾಜೇಂದ್ರ ಪ್ರಸಾದ್ , ಡಾ.ಎಮ್.ಎಸ್ ಮೂಡಿತ್ತಾಯ ,ಕಾರ್ಯಕ್ರಮ ಸಂಯೋಜಕರಾದ ಡಾ.ಆಡ್ರಿ ಎಮ್ ಡಿಕ್ರರ್ , ಡಾ.ಸಹನಾ ಮೆಬೆನ್ , ಡಾ.ಅಕ್ಷತಾ ಗಡಿಯಾರ್ , ಡಾ.ವಿನಯ ಕಾಮತ್ , ಡಾ.ಮಿತ್ರಾ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.
ವಿನಯ್ ಹೆಗ್ಡೆ ಅವರು ಕಾರ್ಯಕ್ರಮ ಉದ್ಘಾಟಿಸಿದರು.









