ಕಾರ್ಕಳ : ಯುವ ಪ್ರತಿಭೆಯನ್ನು ಪ್ರೋತ್ಸಾಹಿಸಿ : ಅನಂತ.ಜಿ.ಪೈ

ಕಾರ್ಕಳ : ಗ್ರಾಮೀಣ ಪ್ರದೇಶದಲ್ಲಿ ಅನೇಕ ಮಂದಿ ಪ್ರತಿಭಾವಂತರಿದ್ದಾರೆ. ಅವರಿಗೆ ಸೂಕ್ತ ಅವಕಾಶ ದೊರೆತಾಗ ಮಾತ್ರ ಭಾರತೀಯ ಸಂಗೀತವು ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತದೆ. ಕಾರ್ಕಳ ಶಾಸ್ತ್ರೀಯ ಸಂಗೀತ ಸಭಾ ಈ ನಿಟ್ಟಿನಲ್ಲಿ ಯುವ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಶಾಸ್ತ್ರೀಯ ಸಂಗೀತ ಸಭಾದ ಗೌರವಾಧ್ಯಕ್ಷ ಮತ್ತು ಭಾರತ ಬೀಡಿ ವರ್ಕ್ಸ್‌ನ ಅನಂತ ಜಿ ಪೈ ಹೇಳಿದ್ದಾರೆ.
ಅವರು ಶಾಸ್ತ್ರೀಯ ಸಂಗೀತ ಸಭಾ ಕಾರ್ಕಳ ಇದರ ರಾಷ್ಟ್ರೀಯ ಸಂಗೀತ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. 24 ನೇ ವರ್ಷದ ರಾಶ್ಟ್ರೀಯ ಸಂಗೀತ ಮಹೋತ್ಸವದಲ್ಲಿ ದಿನವಿಡಿ ಕಾರ್ಯಕ್ರಮದಲ್ಲಿ ಮಣಿಪಾಲದ ಖ್ಯಾತ ಗಾಯಕ ವಿದ್ವಾನ್ ರವಿಕಿರಣ್, ವಿಜೇತ ಅನತಿ ಶಿವಮೊಗ್ಗದಿಂದ ಸರೋದವಾದನ, ಅನಘಾ ಭಟ್ ಬೆಂಗಳೂರು, ವಿದೂಷಿ ಚಂದ್ರಿಕಾ ಕಾಮತ್ ಧಾರವಾಡ, ಪ್ರಸಾದ ಕಾಪ್ರಡೆ ನಾಸಿಕ್ ಅವರಿಂದ ಹಿಂದುಸ್ಥಾನಿ ಗಾಯನ ಕಾರ್ಯಕ್ರಮ ನಡೆಯಿತು. ಕೊನೆಯಲ್ಲಿ ಖ್ಯಾತ ಕೊಳಲು ವಾದಕ ಪ್ರವೀಣ್ ಗೋಡ್ಕಿಂಡಿಯವರಿಂದ ಕೊಳಲು ವಾದನ ಕಾರ್ಯಕ್ರಮ ನಡೆಯಿತು. ತಬಲದಲ್ಲಿ ಶಶಿಕಿರಣ ಮಣಿಪಾಲ, ದೀಪಕ್ ನಾಯ್ಕಿ ಉಡುಪಿ, ಸತೀಶ್ ಕೊಲ್ಲಿ ಬೆಂಗಳೂರು, ಅಲ್ಲಾಂ ಪ್ರಭು ಧಾರವಾಡ, ಕೇಶವ ಜ್ಯೋಶಿ ಬೆಂಗಳೂರು ಮತ್ತೆ ಓಜಸ್ ಅಧಿಯ ಮುಂಬಯಿ ಸಾತಿ ನೀಡಿದರೆ, ಹಾರ್ಮೋನಿಯಂನಲ್ಲಿ ಸತೀಶ್ ಕೊಲ್ಲ ಬೆಂಗಳೂರು ,ವಿಶ್ವನಾಥ ಭಟ್ ಕಾರ್ಕಳ, ಮತ್ತು ಪ್ರಸಾದ್ ಕಾಮತ್ ಉಡುಪಿ ಸಾತ್ ನೀಡಿದರು.
ಅಧ್ಯಕ್ಷತೆ ವಹಿಸಿದ ಶಾಸ್ತ್ರೀಯ ಸಂಗೀತ ಸಭಾದ ಅಧ್ಯಕ್ಷ ಎಸ್.ನಿತ್ಯಾನಂದ ಪೈ ಅವರು ಮಾತನಾಡಿ, ಮುಂದಿನ ವರ್ಷ ವಿಶೇಷವಾಗಿ ಶಾಸ್ತ್ರೀಯ ಸಂಗೀತ ಸಭಾ ಬೆಳ್ಳಿ ಹಬ್ಬವನ್ನು ಆಚರಿಸಲಿದೆ, ಎಲ್ಲರ ಪ್ರೋತ್ಸಾಹ ಕೋರಿ ಯೋಜನೆಗಳನ್ನು ತಿಳಿಸಿದರು. ಡಾ.ಪ್ರಕಾಶ್ ಶೆಣೈ ಕಾರ್ಯಕ್ರಮ ನಿರ್ವಹಿಸಿದರು. ಕೋಶಾಧಿಕಾರಿ ಪ್ರಬಾಕರ ಪಂಡಿತ ವಂದಿಸಿದರು. ಪೊಟೋಕ್ಯಾಪ್ಶನ್ : ಸಂಗೀತ ಸಭಾದ ಗೌರವಾಧ್ಯಕ್ಷ ಮತ್ತು ಭಾರತ ಬೀಡಿ ವರ್ಕ್ಸ್‌ನ ಅನಂತ ಜಿ ಪೈ ಮಾತನಾಡಿದರು.





