ಆಗ್ರಾದಲ್ಲಿ ಒಂದೇ ಯಕ್ರತ್ತು( ಲಿವರ್) ಹಂಚಿಕೊಂಡ ಅವಳಿ ಜನನ
ಬುಧವಾರ ಆಗ್ರಾದ ಆಸ್ಪತ್ರೆಗೆ ದಾಖಲಾದ 20 ವರ್ಷದ ಮೋಹಿನಿ ಸಿಂಗ್ ಪರಸ್ಪರ ಹೊಟ್ಟೆ ಭಾಗದಲ್ಲಿ ಅಂಟಿಕೊಂಡಿರುವ ಅವಳಿಗಳಿಗೆ ಜನ್ಮ ನೀಡಿದ್ದಾರೆ. ಈ ಇಬ್ಬರು ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಹೃದಯ, ಶ್ವಾಸಕೋಶ ಹಾಗು ಆರೋಗ್ಯಕರ ಕೈ ಕಾಲುಗಳಿವೆ. ಆದರೆ ಒಂದೇ ಯಕ್ರತ್ತು ( ಲಿವರ್ ) ಇದೆ. ಆಕೆಯ ಪತಿ 25 ವರ್ಷ ವಯಸ್ಸಿನ ಪ್ರದೀಪ್ ಸಿಂಗ್ ಬಳಿ ಹಣ ಇಲ್ಲದ್ದರಿಂದ ಅವರು ಸ್ಕ್ಯಾನಿಂಗ್ ಮಾಡಿಸಿರಲಿಲ್ಲ . ಹಾಗಾಗಿ ಅವಳಿ ಮಕ್ಕಳ ಬಗ್ಗೆ ಜನ್ಮ ನೀಡಿದ ಮೇಲೆಯೇ ಆಕೆಗೆ ಗೊತ್ತಾಗಿದ್ದು. ಮುಂದಿನ 34 ವಾರಗಳೊಳಗೆ ಶಸ್ತ್ರ ಚಿಕಿತ್ಸೆಯ ಮೂಲಕ ಬೇರ್ಪಡಿಸಿದರೆ ಮಕ್ಕಳು ಬದುಕುವ ಸಾಧ್ಯತೆ ಇದೆ. ಆದರೆ ಗರ್ಭಿಣಿಯ ಪರೀಕ್ಷೆ ಮಾಡಿಸದ ಈ ಬಡ ದಂಪತಿಗೆ ಅದು ಸಾಧ್ಯವೇ ?
courtesy : ANI Multimedia
Next Story





