ಯುಎಇ : ಪುನರ್‌ನವೀಕರಣ ಯೋಗ್ಯ ಇಂಧನ ಬಳಕೆಗೆ ಜಿಸಿಸಿ ಒತ್ತು

ಸೌರಶಕ್ತಿಯು ಪ್ರಮುಖವಾದ ಪುನರ್‌ನವೀಕರಣ ಯೋಗ್ಯ ಇಂಧನವಾದರೂ, ಅದುವೇ ಏಕೈಕ ಆಯ್ಕೆಯಲ್ಲ. ಕುವೈತ್, ಓಮನ್ ಹಾಗೂ ಸೌದಿ ಅರೇಬಿಯ ಗಣನೀಯವಾದ ಪವನ (ಗಾಳಿ) ಸಂಪನ್ಮೂಲವನ್ನೂ ಹೊಂದಿದೆ.
87 ಶತಕೋಟಿ ಡಾಲರ್ ಉಳಿತಾಯ ನಿರೀಕ್ಷೆ
ದುಬೈ: ಗಲ್ಫ್‌ರಾಷ್ಟ್ರಗಳು 2030ರೊಳಗೆ ಪುನರ್‌ನವೀಕರಣಯೋಗ್ಯ ಇಂಧನಗಳ ಬಳಕೆಯ ಗುರಿಯನ್ನು ಸಾಧಿಸಲು ಸಫಲವಾದಲ್ಲಿ ಅವು ತೈಲ ಹಾಗೂ ನೈಸರ್ಗಿಕ ಅನಿಲದ ಮಿತ ಬಳಕೆಯಿಂದ 87 ಶತ ಕೋಟಿ ಡಾಲರ್ ಉಳಿತಾಯ ಮಾಡುವ ನಿರೀಕ್ಷೆಯಿದೆ.
ಜಿಸಿಸಿ ರಾಷ್ಟ್ರಗಳ ಪಾಲಿಗೆ ಮುಂಬರುವ ದಿನಗಳಲ್ಲಿ ಸೂರ್ಯನೇ ಹೊಸ ಇಂಧನವಾಗಲೂಬಹುದು. ಅತ್ಯಂತ ಕಡಿಮೆ ವೆಚ್ಚದಲ್ಲಿ ಸೌರಶಕ್ತಿಯ ಉತ್ಪಾದನೆ ಸಾಧ್ಯವಿದೆ ಹಾಗೂ ಅದು ಹೇರಳವಾಗಿ ಲಭ್ಯವಿದೆ ಮತ್ತು ಎಂದಿಗೂ ಖಾಲಿಯಾಗದ ಶಕ್ತಿಯ ಸಂಪನ್ಮೂಲವಾಗಿದೆ..!. ಅಂತಾರಾಷ್ಟ್ರೀಯ ಪುನರ್‌ನವೀಕರಣ ಯೋಗ್ಯ ಇಂಧನ ಏಜೆನ್ಸಿ (ಇರಿನಾ) ಇತ್ತೀಚೆಗೆ ನಡೆದ ‘ಅಬುಧಾಬಿ ಧಾರಣಾಸಾಮರ್ಥ್ಯ ಸಪ್ತಾಹ’ದಲ್ಲಿ ಪ್ರಕಟಿಸಿದ ತನ್ನ ವರದಿಯಲ್ಲಿ ಈ ವಿಷಯ ತಿಳಿಸಿದೆ.
‘ನವೀಕರಣ ಯೋಗ್ಯ ಮಾರುಕಟ್ಟೆ ವಿಶೇಷಣೆ:ಜಿಸಿಸಿ ಪ್ರಾಂತ’ ಎಂಬ ಶೀರ್ಷಿಕೆಯ ಈ ವರದಿಯು, ಗಲ್ಫ್ ರಾಷ್ಟ್ರಗಳು ತಾನು ನಿಗದಿಪಡಿಸಿದ ಪುನರ್‌ನವೀಕರಣಯೋಗ್ಯ ಇಂಧನದ ಬಳಕೆಯ ಗುರಿಗಳನ್ನು ಸಾಧಿಸಿದಲ್ಲಿ ಅವು, ನೀರಿನ ಉಪಯೋಗದಲ್ಲಿ 11 ಟ್ರಿಲಿಯನ್ ಲೀಟರ್ ( ಶೇ.16 ಇಳಿಕೆ), ವಿದ್ಯುತ್ ವಲಯದಲ್ಲಿ 400 ದಶಲಕ್ಷ ಬ್ಯಾರಲ್‌ಗಳಷ್ಟು ತೈಲವನ್ನು ರಕ್ಷಿಸಬಹುದು.
‘‘ಪ್ರಸಕ್ತ ಗುರಿಗಳು ಸಂಪೂರ್ಣವಾಗಿ ಕೈಗೆಟಕುವಷ್ಟು ಸನಿಹದಲ್ಲಿವೆ. ದುಬೈಯಲ್ಲಿ ಕಳೆದ ವರ್ಷ ನಡೆದ ಸೌರ ಫೋಟೋವೋಲ್ಟಿಕ್‌ಟೆಂಡರ್‌ನ ಸ್ಥಾಪನೆಯಿಂದಾಗಿ,ದಾಖಲೆಯ ಕಡಿಮೆ ದರದಲ್ಲಿ, ಅಂದರೆ ಪ್ರತಿ ಕಿಲೊವ್ಯಾಟ್ ತಾಸಿಗೆ 0.06 ಡಾಲರ್ ಬೆಲೆಯಲ್ಲಿ ವಿದ್ಯುತ್ ಉತ್ಪಾದನೆ ಸಾಧ್ಯವಾಗಿದೆ. ಇದು, ನೈಸರ್ಗಿಕ ಅನಿಲ ಬಳಸಿ ಉತ್ಪಾದಿಸಲಾಗುವ ವಿದ್ಯುತ್‌ಗಿಂತಲೂ ಅಗ್ಗವಾದುದಾಗಿದೆ ಎಂದು ಇರೆನಾದ ಮಹಾನಿರ್ದೇಶಕ ಅದ್ನಾನ್ ಅಮೀನ್ ತಿಳಿಸಿದ್ದಾರೆ.
‘ಜಿಸಿಸಿಯಲ್ಲಿ ಇಂಧನ ಮರುಬಳಕೆಗಾಗಿನ ಆರ್ಥಿಕ ಹಾಗೂ ಸಾಮಾಜಿಕ ವಿಚಾರಧಾರೆ, ಹಿಂದೆಂದೂ ಈಗಿನಷ್ಟು ಬಲಯುತವಾಗಿರಲಿಲ್ಲ. ಇಂಧನವಲಯದಲ್ಲಿ ತಮ್ಮ ನಾಯಕತ್ವವನ್ನು ಕಾಯ್ದುಕೊಳ್ಳುವ ಹಾಗೂ ತಮ್ಮ ಪ್ರಾಂತದಲ್ಲಿ ಹೇರಳವಾಗಿರುವ ಪುನರ್‌ನವೀಕರಣ ಯೋಗ್ಯ ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ ಜಿಸಿಸಿ ರಾಷ್ಟ್ರಗಳು ಪರಿಶುದ್ಧ ಇಂಧನದೊಂದಿಗೆ ದೀರ್ಘಾವಧಿಯ ಆರ್ಥಿಕ ಹಾಗೂ ಸಾಮಾಜಿಕ ಉನ್ನತಿಯನ್ನು ಸಾಧಿಸಬಹುದೆಂದು ಅವರು ತಿಳಿಸಿದ್ದಾರೆ.
ಇಂಗಾಲದ ಕಾರ್ಬನ್‌ನ ರೂಪದಲ್ಲಿರುವ ಕಚ್ಚಾ ತೈಲ, ಪೆಟ್ರೋಲಿಯಂ ಉತ್ಪನ್ನಗಳು ಹಾಗೂ ನೈಸರ್ಗಿಕ ಅನಿಲದ ರೂಪದಲ್ಲಿರುವ ಹೈಡ್ರೋಕಾರ್ಬನ್ ರಫ್ತುಗಳು ಜಿಸಿಸಿ ಸಮೂಹದ ರಾಷ್ಟ್ರಗಳ ಸರಕಾರಗಳಿಗೆ ಮುಖ್ಯ ಆದಾಯ ಮೂಲವಾಗಿದ್ದು, ಇವು ಅವುಗಳ ಒಟ್ಟು ಆದಾಯದ ಶೇ.80ರಷ್ಟಿದೆ.
ಆದಾಗ್ಯೂ, 2014ರ ಮಧ್ಯಾಂತರದಿಂದೀಚೆಗೆ ತೈಲದರದಲ್ಲಿ ಭಾರೀ ಇಳಿಕೆ ಕಂಡು ಬರತೊಡಗಿದೆ. ಪ್ರತಿ ಬ್ಯಾರೆಲ್‌ಗೆ 100 ಡಾಲರ್‌ನಷ್ಟಿದ್ದ ತೈಲದರವು ಕಳೆದ ತಿಂಗಳು28 ಡಾಲರ್ ಆಗುವ ಮೂಲಕ ಸಾರ್ವಕಾಲಿಕ ಕುಸಿತವನ್ನು ದಾಖಲಿಸಿದೆ. ಕಚ್ಚಾ ತೈಲ ದರದಲ್ಲಿ ಭಾರೀ ಕುಸಿತದಿಂದ 2015ರ ಸಾಲಿನಲ್ಲಿ ಜಿಸಿಸಿ ರಾಷ್ಟ್ರಗಳಿಗೆ ಸುಮಾರು 290 ಶತಕೋಟಿ ಡಾಲರ್ ನಷ್ಟವಾಗಿರುವುದಾಗಿ ಅಂದಾಜಿಸಲಾಗಿದೆ.
ಸಾಂಪ್ರದಾಯಿಕವಾಗಿ ಗಲ್ಫ್ ದೇಶಗಳು ಇಂಧನದ ಪ್ರಮುಖ ಬಳಕೆದಾರರೇನೂ ಅಲ್ಲ. ಆದರೆ ತ್ವರಿತ ಕೈಗಾರಿಕೀಕರಣ,ಜನಸಂಖ್ಯಾ ಏರಿಕೆ ಹಾಗೂ ನೀರಿನ ಲವಣ ರಹಿತಗೊಳಿಸುವಿಕೆ (desalination)ಯ ಪ್ರಮಾಣದಲ್ಲಿ ಉಂಟಾಗಿರುವ ಭಾರೀ ಹೆಚ್ಚಳ, ಈ ಪ್ರದೇಶದ ಸಂಪನ್ಮೂಲಗಳ ಮೇಲೆ ಒತ್ತಡ ಹೇರಿವೆ.
2000ನೆ ಇಸವಿಯಿಂದೀಚೆಗೆ ಜಿಸಿಸಿ ರಾಷ್ಟ್ರಗಳ, ಇಂಧನ ಬೇಡಿಕೆಯಲ್ಲಿ ವಾರ್ಷಿಕ ಸರಾಸರಿ ಶೇ.5ರಷ್ಟು ಹೆಚ್ಚಳವಾಗಿದೆ. ಅಂದು ಉತ್ಪಾದನೆಯಾದ ತೈಲ ಹಾಗೂ ಅನಿಲದ ದೊಡ್ಡ ಪ್ರಮಾಣವು ರಫ್ತಾಗುವ ಬದಲು ಆಂತರಿಕವಾಗಿಯೇ ಬಳಕೆಯಾಗುತ್ತಿದೆ. ಇಂಧನಗಳ ಬಳಕೆಯ ಬೆಳವಣಿಗೆ ದರದಲ್ಲಿ ಜಿಸಿಸಿ ರಾಷ್ಟ್ರಗಳು ಪ್ರಮುಖ ಗ್ರಾಹಕರಾದ ಭಾರತ, ಬ್ರೆಝಿಲ್ ದೇಶಗಳನ್ನೂ ಹಿಂದಿಕ್ಕಿವೆ ಎಂದು ಇರಿಯಾನಾದ ನೀತಿನಿರೂಪಣೆ ವಿಭಾಗದ ಮುಖ್ಯಸ್ಥೆ ರಾಬಿಯಾ ಫರೂಕಿ ಹೇಳಿದ್ದಾರೆ.
ಉದಾಹರಣೆಗೆ ಸೌದಿ ಅರೇಬಿಯಾವು 2014ರಲ್ಲಿ ತನ್ನ ತೈಲ ಉತ್ಪನ್ನದ ಮೂರನೆ ಒಂದರಷ್ಟು ಭಾಗವನ್ನು ಆಂತರಿಕವಾಗಿ ಖರೀದಿಸಿತ್ತು. ಆ ಮೂಲತಃ ತೈಲದ ಏಳನೆ ಅತಿ ದೊಡ್ಡ ಬಳಕೆದಾರನೆಂದೆನಿಸಿಕೊಂಡಿತು. ಯುಎಇ ಹಾಗೂ ಓಮನ್ ತಮ್ಮ ಶೇ. 60ರಷ್ಟು ಇಂಧನ ಆವಶ್ಯಕತೆಗಳಿಗೆ ಅನಿಲವನ್ನು ಬಳಸಿಕೊಳ್ಳುತ್ತದೆ. ಆ ಮೂಲಕ ತೈಲದ ರಫ್ತನ್ನು ಹೆಚ್ಚಿಸಲು ಹಾಗೂ ಆಂತರಿಕ ಬಳಕೆಗೆ ಅನಿಲ ನಿಕ್ಷೇಪವನ್ನು ಬಳಸಿಕೊಳ್ಳುವ ವ್ಯೆಹಾತ್ಮಕ ನಿರ್ಧಾರವನ್ನು ಕೈಗೊಂಡಿವೆ.
ಇರಿನಾ ವರದಿಯ ಪ್ರಕಾರ ಜಿಸಿಸಿ ರಾಷ್ಟ್ರಗಳು, ಜಾಗತಿಕ ಸೂರ್ಯವರ್ತುಲ ವಲಯದಲ್ಲಿವೆ. ಹೀಗಾಗಿ ಅವು ಸಮೀಪದ ಉತ್ತರ ಆಫ್ರಿಕದ ದೇಶಗಳಿಗೆ ಸರಿಸಮಾನವಾಗಿ ಅಪಾರವಾದ ಸೌರಶಕ್ತಿಯ ಸಂಪನ್ಮೂಲವನ್ನು ಹೊಂದಿವೆೆ. ವಾಸ್ತವವಾಗಿ, ಈ ಪ್ರಾಂತದ ವಿವಿಧ ಭಾಗಗಳು ಜಗತ್ತಿನ ಅತ್ಯಧಿಕ ಸೌರಪ್ರಭೆಯಿರುವ ಪ್ರದೇಶಗಳಲ್ಲೊಂದೆಂಬ ಹೆಗ್ಗಳಿಕೆಗೆ ಪಾತ್ರವಾಗಿವೆ. ಜಿಸಿಸಿ ರಾಷ್ಟ್ರಗಳ ಶೇ.50ರಷ್ಟು ಮೇಲ್ಮೈ ಪ್ರದೇಶದಲ್ಲಿ ಸೌರಫಲಕಗಳನ್ನು ಅಗಾಧ ಪ್ರಮಾಣದಲ್ಲಿ ಸ್ಥಾಪಿಸಲು ವಿಪುವಾದ ಅವಕಾಶಗಳಿವೆ. ಇಂತಹ ಪ್ರದೇಶಗಳ ಶೇಕಡ ಒಂದರಷ್ಟು ಭಾಗದಲ್ಲಿ ಸೌರಶಕ್ತಿಯನ್ನು ಅಭಿವೃದ್ಧಿಪ ಡಿಸುವುದರಿಂದ 470 ಗಿಗಾವಾಟ್ (ಜಿಡಬ್ಲು) ಸಾಮರ್ಥ್ಯದ ಸೌರ ವಿದ್ಯುತ್ತನ್ನು ಪಡೆಯಬಹುದಾಗಿದೆ
ಸೌರಶಕ್ತಿಯು ಪ್ರಮುಖವಾದ ಪುನರ್‌ನವೀಕರಣ ಯೋಗ್ಯ ಇಂಧನವಾದರೂ, ಅದುವೇ ಏಕೈಕ ಆಯ್ಕೆಯಲ್ಲ. ಕುವೈತ್, ಓಮನ್ ಹಾಗೂ ಸೌದಿ ಅರೇಬಿಯ ಗಣನೀಯವಾದ ಪವನ(ಗಾಳಿ) ಸಂಪನ್ಮೂಲವನ್ನೂ ಹೊಂದಿದೆ.
ತ್ಯಾಜ್ಯದಿಂದ ಶಕ್ತಿಯನ್ನು ಉತ್ಪಾದಿಸುವ ಮೂಲಕವೂ ನವೀಕರಣಯೋಗ್ಯ ಇಂಧನವನ್ನು ಪಡೆಯಬಹುದಾಗಿದೆ. ಈ ಪ್ರದೇಶವು ಎದುರಿಸುತ್ತಿರುವ ತ್ಯಾಜ್ಯ ನಿರ್ವಹಣೆಯ ಸಮಸ್ಯೆಗೆ ಇದರಿಂದ ಉತ್ತರ ದೊರೆಯುವ ನಿರೀಕ್ಷೆಯಿದೆ. ಯುಎಇನಲ್ಲಿ, ಪ್ರತಿ ವ್ಯಕ್ತಿಗೆ ತ್ಯಾಜ್ಯದ ತಲಾ ಉತ್ಪಾದನಾ ಪ್ರಮಾಣವು 1.86 ಕಿಲೋಗ್ರಾಂಗಳಾಗಿದ್ದು, ಇದು ಅತ್ಯಧಿಕವೆಂದೇ ಪರಿಗಣಿಸಲ್ಪಟ್ಟಿದೆ.ಜಿಸಿಸಿಯ ಪುನರ್‌ನವೀಕರಣ ಯೋಗ್ಯ ಇಂಧನ ವಲಯವು ಇನ್ನೂ ಶೈಶಾವಸ್ಥೆಯಲ್ಲಿಯೇ ಇದೆ. ಆದಾಗ್ಯೂ ಪುನರ್‌ನವೀಕರಣ ಯೋಗ್ಯ ಇಂಧನದ ಉತ್ಪಾದನೆಗೆ ಸಂಬಂಧಿಸಿದ ಯೋಜನೆಗಳು ಇತ್ತೀಚಿನ ವರ್ಷಗಳಲ್ಲಿ ಹಂತಹಂತವಾಗಿ ರೂಪುಪಡೆಯತೊಡಗಿವೆ.
ಕಳೆದ ವರ್ಷದ ಆರಂಭದಿಂದೀಚೆಗೆ, ಈ ಪ್ರದೇಶದಲ್ಲಿ 120 ಜಿಡಬ್ಲುಗೂ ಅಧಿಕ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ. ಆದರೆ ಅದರಲ್ಲಿ ಪುನರ್‌ನವೀಕರಣ ಯೋಗ್ಯ ಇಂಧನದ ಮೂಲಕ ಉತ್ಪಾದನೆಯಾದ ವಿದ್ಯುತ್ ಕೇವಲ ಶೇ.1 ಮಾತ್ರ.
ಯುಎಇನ ಶಾಮ್ಸ್ ನಲ್ಲಿ 100 ಮೆಗಾವಾಟ್ ಸಾಮರ್ಥ್ಯದ ಸೌರವಿದ್ಯುತ್ ಸ್ಥಾವರದ ಸ್ಥಾಪನೆಯೊಂದಿಗೆ 2011ರಲ್ಲಿ ಜಿಸಿಸಿ ರಾಷ್ಟ್ರಗಳಲ್ಲಿ ಪುನರ್‌ನವೀಕರಣ ಯೋಗ್ಯ ಇಂಧನ ಮೇಲಿನ ಹೂಡಿಕೆಯು 800 ದಶಲಕ್ಷಡಾಲರ್‌ಗೆ ಜಿಗಿದಿದೆ. ಈ ಸ್ಥಾವರವು 2013ರಲ್ಲಿ ಕಾರ್ಯನಿರ್ವಹಿಸಲಿದೆ.









