ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ ಹೆಚ್ಚಳ
ರಿಯಾದ್. ಅಮೆರಿಕನ್ ಡಾಲರ್ ಮೌಲ್ಯ ಕುಸಿತವಾದ್ದರಿಂದ ತೈಲದರದಲ್ಲಿ ಹೆಚ್ಚಳವಾಗಿದೆ. ಕಚ್ಚಾ ತೈಲದರ ಬ್ಯಾರಲ್‌ಗೆ 35.39 ಅಮೆರಿಕನ್ ಡಾಲರ್ ಆಗಿ ಗುರುವಾರ ಏರಿಕೆ ಯಾಗಿತ್ತು. ಕಳೆದ ಕೆಲವುದಿವಸಗಳಿಂದ ತೈಲ ದರ ಏರಿಕೆಯನ್ನು ದಾಖಲಿಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ಯಾರಲೊಂದಕ್ಕೆ 27 ಡಾಲರ್‌ಗೆ ತೈಲದರ ಕುಸಿದಿತ್ತು. ಈಗ ಪುನಃ ಏರಿಕೆಯನ್ನು ಅದು ದಾಖಲಿಸಲಾರಂಭಿಸಿದೆ. ಒಂದು ವಾರದಲ್ಲಿ ಶೆ. 7ರಷ್ಟು ದರ ಹೆಚ್ಚಳವಾಗಿದೆ. ರಷ್ಯ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ತೈಲದ ಪ್ರಮಾಣವನ್ನು ಕಡಿಮೆಗೊಳಿಸಿರುವುದು ಬೆಲೆ ಹೆಚ್ಚಳಕ್ಕೆ ಇನ್ನೊಂದು ಕಾರಣವೆಂದು ಬೊಟ್ಟು ಮಾಡಲಾಗುತ್ತಿದೆ.
ಅಮೆರಿಕದ ಕೇಂದ್ರ ಬ್ಯಾಂಕ್ ಬಡ್ಡಿದರವನ್ನು ಈವರ್ಷ ಹೆಚ್ಚಿಸುವ ಸಾಧ್ಯತೆಯಿರುವುದು ಕೂಡ ತೈಲದರ ಹೆಚ್ಚಳ ಕಾರಣವಾಗುತ್ತಿದೆ ಎನ್ನಲಾಗಿದೆ. ಅಂದರೆ ಬಡ್ಡಿದರ ಹೆಚ್ಚಳವು ಡಾಲರ್‌ನ ಮೌಲ್ಯ ಕುಸಿತವನ್ನು ಸೂಚಿಸುತ್ತದೆ.
Next Story





