ನೆನಪಿನ ಶಕ್ತಿ ನಾಶ ರೋಗದ ಬ್ಯಾಕ್ಟೀರಿಯಾಗಳು ಕತರ್‌ನಲ್ಲಿ ಪತ್ತೆ
ದೋಹ: ನಾಡಿವ್ಯೆಹಗಳಿಗೆ ತೊಂದರೆ ನೀಡುವ ರೋಗಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾಗಳು ಕತರ್‌ನ ಮರಭೂಮಿ ಪ್ರದೇಶಗಳಲ್ಲಿ ಪತ್ತೆಯಾಗಿದೆ ಎಂದು ಹೊಸ ಸಂಶೋಧನೆ ವರದಿ ತಿಳಿಸಿದೆ. ಅಲಝೈಮರ್(ನೆನಪಿನ ಶಕ್ತಿ ನಾಶ). ಪಾರ್ಕಿನ್ಸನ್, ಐ,ಎಲ್, ಎಸ್. ಮುಂತಾದ ರೋಗಗಳಿಗೆ ಕಾರಣವಾಗುವ ಮಾರಕ ಬ್ಯಾಕ್ಟೀರಿಯಾಗಳು ಮರುಭೂಮಿಯ ಸೀಳು ಪ್ರದೇಶಗಳಲ್ಲಿ ಇವೆ ಎಂದು ಸಂಶೋಧಕರು ತಿಳಿಸಿದ್ದಾರೆ. ಗಲ್ಫ್ ಯುದ್ಧದಲ್ಲಿ ಈ ಪ್ರದೇಶಗಳಲ್ಲಿ ಭಾಗವಹಿಸಿದ್ದ ಅಮೇರಿಕನ್ ಸೈನಿಕರಲ್ಲಿ ನರರೋಗವಾದ ಐ. ಎಲ್. ಎಸ್ ಕಂಡು ಬಂದಿತ್ತು. ಗಲ್ಫ್ ಯುದ್ಧ ಸಮಯದಲ್ಲಿ ಗಲ್ಫ್ ವಲಯದಲ್ಲಿ ಕೆಲಸ ಮಾಡುತ್ತಿದ್ದ ಸೇವಾಕಾರ್ಯಕರ್ತರಲ್ಲಿ ಇಂತಹ ರೋಗಲಕ್ಷಣಗಳು ಕಾಣಿಸಿವೆ. ಕತರ್‌ನಲ್ಲಿ ಕಂಡು ಬಂದ ಬ್ಯಾಕ್ಟೀರಿಯಾಗಳನ್ನು ಮಂಗಗಳ ಮೇಲೆ ಪ್ರಯೋಗಿಸಿದಾಗ ಇವುಗಳಿಗೆ140 ದಿವಸಗಳಲ್ಲಿ ನೆನಪಿನ ಶಕ್ತಿ ನಾಶವಾಗಿತ್ತು. ರಾಯಲ್ ಸೊಸೈಟಿ ಲಂಡನ್ ಈ ಕುರಿತು ಪ್ರಕಟಿಸಿದ್ದ ಪ್ರಬಂಧವನ್ನು ಪ್ರಮುಖ ಪ್ರಾದೇಶಿಕ ಪೋರ್ಟಲ್ ವರದಿಮಾಡಿದೆ. ಆದರೆ ವಿಶಾಂಶಗಳು ಶರೀರದ ದೇಹದ ಯಾವೆಲ್ಲ ಭಾಗಕ್ಕೆ ಹರಡಬಹುದೆಂಬುದು ಇನ್ನಷ್ಟೆ ಸಂಶೋಧನೆ ಮಾಡಿ ಕಂಡುಕೊಳ್ಳಬೇಕಾಗಿದೆ. ಇದು ಜಾಗತಿಕ ಸಮಸ್ಯೆ ಆದುದರಿಂದ ಕತರ್ ಈ ಬಗ್ಗೆ ಅಧ್ಯಯನ ನಡೆಸಲು ಸೂಕ್ತ ಸ್ಥಳವೆಂದು ಡಬ್ಲ್ಯೂ ಎಂಸಿ ಕ್ಯೂ ನಮಾಜಿ ಪ್ರೊಫಸೆರ್ ರಿನಿ ರೀಚರ್ ಹೇಳಿದ್ದಾರೆ. ಧೂಳು ಕೆಸರು, ನೀರು ಇವುಗಳ ಮೂಲಕ ಈ ಬ್ಯಾಕ್ಟೀರಿಯಾಗಳು ಹರಡಬಹುದಾಗಿದೆ.ನೀರಿನಲ್ಲಿ ಇದು ಹಸಿರು ಬಣ್ಣದಂತೆ ಕಾಣಿಸಿಕೊಳ್ಳುತ್ತವೆ ಎಂದ ರಿನಿ ಹೇಳುತ್ತಾರೆ. ಗಲ್ಫ್ ಯುದ್ಧ ಕಾಲದಲ್ಲಿ ಸೈನಿಕ ವಾಹನಗಳ ಸಂಚಾರದ ವೇಳೆ ಸೈನಿಕರಿಗೆ ಈರೋಗ ತಗಲಿರಬಹುದುಎಂದು ಅವರು ಹೇಳಿದ್ದಾರೆ. ಇದನ್ನು ಉಂಪಾಯವಾಗಿ ನಾಶಪಡಿಸಲು ಸಾಧ್ಯವಿದೆ ಎಂದೂ ಅವರು ತಿಳಿಸಿದ್ದಾರೆ.





